Holiday: ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿ ತಿಂಗಳ ನಾಲ್ಕನೇ ಶನಿವಾರವೂ ರಜೆ ಘೋಷಣೆ

Holiday News: ಶಾಲಾ-ಕಾಲೇಜುಗಳಿಗೆ ಸಾಮಾನ್ಯವಾಗಿ ಹಬ್ಬಗಳು, ಪ್ರಕೃತಿ ವಿಕೋಪದಿಂದ ತೊಂದರೆಯಾಗುವಂತಹ ಮುನ್ಸೂಚನೆಯಂತಹ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಇದೀಗ ಸರ್ಕಾರಿ ರಜೆಗಳನ್ನ ಹೊರತುಪಡಿಸಿ ಬ್ಯಾಂಕ್‌ಗಳಿಗೆ ಅನ್ವಯ ಆಗುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಗೆ ರಜೆಗಳನ್ನು ಘೋಷಣೆ ಮಾಡಲಾಗಿದೆ. ಹಾಗಾದರೆ ಎಲ್ಲಿ ಹಾಗೂ ಯಾವಾಗ ರಜೆಗಳು ಸಿಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಈ ವರ್ಷದ ಆರಂಭದಿಂದಲೂ ಸರ್ಕಾರಿ ರಜೆ ಹೊರತುಪಡಿಸಿ ಒಂದಲ್ಲ ಒಂದು ವಿಚಾರಕ್ಕೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮತ್ತೊಂದು ಬಿಗ್‌ ಗುಡ್‌ ನ್ಯೂಸ್‌ ಸಿಕ್ಕಿದೆ. ಸಾಮಾನ್ಯವಾಗಿ ಬ್ಯಾಂಕ್‌ಗಳಿಕೆ ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಇರುತ್ತದೆ. ಇದೀಗ ನಾಲ್ಕನೇ ಶನಿವಾರದಂದು ಈ ಭಾಗದ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ತುಂಬಾ ರಜೆಗಳು ಸಿಗಲಿವೆ.

Holiday declared to These Colleges on Fourth Saturday of Every Month

ಜೆಎನ್‌ಟಿ ಘೋಷಣೆ ಮಾಡಿರುವ ಈ ರಜೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇಬ್ಬರಿಗೂ ಇರುತ್ತದೆ. ತಿಂಗಳಲ್ಲಿ ನಾಲ್ಕು ಅಥವಾ ಐದು ದಿನಗಳ ಭಾನುವಾರದ ರಜೆಯ ಜೊತೆ ಹೆಚ್ಚುವರಿ ರಜೆ ನೀಡುತ್ತಿರುವುದು ವಿಶೇಷವಾಗಿದೆ. ಈ ಬಗ್ಗೆ ಹೈದರಾಬಾದ್ ಜೆಎನ್‌ಟಿಯು ಪ್ರಮುಖ ಘೋಷಣೆ ಮಾಡಿದ್ದು, ತನ್ನ ವ್ಯಾಪ್ತಿಗೆ ಬರುವ ಎಂಜಿನಿಯರಿಂಗ್ ಕಾಲೇಜುಗಳಿಗೆ 4ನೇ ಶನಿವಾರ ಮತ್ತು ಭಾನುವಾರ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ ಇನ್ಮುಂದೆ ಪ್ರತಿ 4ನೇ ಶನಿವಾರ ತನ್ನ ವ್ಯಾಪ್ತಿಯಲ್ಲಿರುವ ಕಾಲೇಜುಗಳು ಹಾಗೂ ಕಚೇರಿಗಳಿಗೆ ರಜೆ ಘೋಷಣೆ ಮಾಡಿದೆ. ಜೆಎನ್‌ಟಿಯು ರಿಜಿಸ್ಟ್ರಾರ್ ಕೆ.ವೆಂಕಟೇಶ್ವರ ರಾವ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ಘೋಷಿಸಲಾದ 4ನೇ ಶನಿವಾರದ ರಜೆ ಈ ತಿಂಗಳಿನಿಂದ ಜಾರಿಗೆ ಬರಲಿದೆ. ಈ ಆದೇಶಗಳು ಜಾರಿಗೆ ಬರಲಿದ್ದು, ಈ ತಿಂಗಳ ನಾಲ್ಕನೇ ಶನಿವಾರ 22ರಂದು ರಜೆ ಇರಲಿದೆ.

ಇನ್ನು ಜೆಎನ್‌ಟಿಯು ಆಶ್ರಯದಲ್ಲಿ ರಾಜ್ಯಾದ್ಯಂತ 423 ಕಾಲೇಜುಗಳಿದ್ದು, ಈ ಎಲ್ಲಾ ಕಾಲೇಜುಗಳಿಗೆ ನಾಲ್ಕನೇ ಶನಿವಾರ ರಜೆ ಇರುತ್ತದೆ. ನಾಲ್ಕನೇ ಶನಿವಾರ ಆಯಾ ಕಾಲೇಜುಗಳ ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಭ್ಯ ಆಗಲಿದೆ. 2008ಕ್ಕಿಂತ ಮೊದಲು, ನಾಲ್ಕನೇ ಶನಿವಾರ ಜಾರಿಯಲ್ಲಿತ್ತು. ಬಳಿಕ ಇದನ್ನು ರದ್ದುಗೊಳಿಸಲಾಗಿತ್ತು. ಆದರೆ, ಇದೀಗ ಮತ್ತೆ ನಾಲ್ಕನೇ ಶನಿವಾರವನ್ನ ಮತ್ತೆ ರಜಾ ದಿನವೆಂದು ಘೋಷಿಸಲಾಗಿದೆ.

ಇದೀಗ ರಜೆಗಳ ಕುರಿತಾಗಿ ಪ್ರತಿನಿತ್ಯವೂ ಒಂದಲ್ಲ ಒಂದು ಸುದ್ದಿಗಳು ಆಗುತ್ತಲೇ ಇರುತ್ತವೆ. ಈಗಾಗಲೇ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳಂತಹ ಸಂದರ್ಭಗಳಲ್ಲಿ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಲೇ ಸಿಕ್ಕವೆ. ಹಾಗೆಯೇ ಇದೀಗ ಬೇರೆಯದ್ದೇ ಕಾರಣಕ್ಕೆ, ಅಂದರೆ ನಾಲ್ಕನೇ ಶನಿವಾರ ದಿನದಂದು ಜೆಎನ್‌ಟಿಯು ಆಶ್ರಯದಲ್ಲಿನ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರಿಂದ ತಿಂಗಳಲ್ಲಿ ಭಾನುವಾರ ಹಾಗೂ ಇನ್ನಿತರೆ ಸರ್ಕಾರಿ ರಜೆಗಳು ಹೊತರುಪಡಿಸಿ ವಿದ್ಯಾರ್ಥಿಗಳಿಗೆ ತುಂಬಾ ರಜೆಗಳು ಸಿಕ್ಕಂತಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+