ಹಿಂದು ಪಾಕಿಸ್ತಾನ ಹೇಳಿಕೆ: ಶಶಿ ತರೂರ್ ಹಿಂದಿ ಹಾಡಿನ ಉತ್ತರ!
Recommended Video

ನವದೆಹಲಿ, ಜುಲೈ 13: ತಮ್ಮ ಹಿಂದು ಪಾಕಿಸ್ತಾನ ಹೇಳಿಕೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹಿಂದಿ ಹಾಡಿನ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'ಕುಚ್ ತೊ ಲೋಗ್ ಕಹೇಂಗೆ ಲೋಗೋನ್ ಕಾ ಕಾಮ್ ಹೆ ಕೆಹ್ನಾ'(ಜನರು ಮಾತನಾಡುತ್ತಲೇ ಇರ್ತಾರೆ, ಜನರ ಕೆಲಸವೇ ಅದು) ಎಂಬ ಅಮರ್ ಪ್ರೇಮ್ ಚಿತ್ರದ ಹಾಡನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, ಇದೇ ತಮ್ಮ ಉತ್ತರ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶಶಿ ತರೂರ್, '2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಭಾರತವನ್ನು ಹಿಂದು ಪಾಕಿಸ್ತಾನವನ್ನಾಗಿ ಮಾಡಲಿದೆ. ಪಾಕಿಸ್ತಾನದಲ್ಲಿ ಹೇಗೆ ಅಲ್ಪಸಂಖ್ಯಾತರ ಸ್ವಾತಂತ್ರ್ಯ, ಸಮಾನತೆಯನ್ನು ಕಿತ್ತುಕೊಳ್ಳಲಾಗಿದೆಯೋ, ಭಾರತದಲ್ಲೂ ಹಾಗೇ ಆಗಲಿದೆ' ಎಂಬ ಹೇಳಿಕೆ ನೀಡಿದ್ದರು.
कुछ तो लोग कहेंगे, लोगों का काम है कहना
— Shashi Tharoor (@ShashiTharoor) July 12, 2018
छोड़ो बेकार की बातों में कहीं बीत ना जाए रैना https://t.co/QtrDqZW9kn#HinduPakistan
ಅವರ 'ಹಿಂದು ಪಾಕಿಸ್ತಾನ' ಎಂಬ ಪದಬಳಕೆಯ ಬಗ್ಗೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಕ್ಷಮೆ ಯಾಚಿಸುವಂತೆ ಅವರನ್ನು ಒತ್ತಾಯಿಸಲಾಗಿತ್ತಾದರೂ, 'ನಾನು ಕ್ಷಮೆ ಕೇಳುವಂಥ ತಪ್ಪು ಮಾಡಿಲ್ಲ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ' ಎಂದು ತರೂರ್ ಪ್ರತಿಕ್ರಿಯಿಸಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, 'ಶಶಿ ತರೂರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಅನ್ನಿಸುತ್ತೆ. ಅವರಿಗೆ ಇಷ್ಟವಿದ್ದರೆ ಅವರೇ ಪಾಕಿಸ್ತಾನಕ್ಕೆ ಹೋಗಲಿ' ಎಂದಿದ್ದರು. ವಿವಿಧ ಮುಖಂಡರು ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications