Viral Post: ಹಿಂದಿ ಮಾತನಾಡುವವರು ಇಂಡಿಯನ್ಸ್‌: ದಕ್ಷಿಣ ಭಾರತದವರು ಜೋಕರ್ಸ್‌, ಕಿಡಿ ಹೊತ್ತಿಸಿದ ಪೋಸ್ಟ್‌

Hindi Speakers: ಸೋಷಿಯಲ್ ಮೀಡಿಯಾದಲ್ಲಿ ಹಿಂದಿ - ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ವಿಚಾರವಾಗಿ ಮಾಡಿರುವ ಪೋಸ್ಟ್‌ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಹಿಂದಿ ಮಾತನಾಡುವವರು ಇಂಡಿಯನ್ಸ್‌ ಎಂದು ಬರೆದುಕೊಳ್ಳಲಾಗಿದೆ. ಇದಕ್ಕೆ ಕನ್ನಡಿಗರು ಸಹ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Priya Meh ♑️ / @PRIYAME60820600 ಎನ್ನುವ ಖಾತೆಯಿಂದ ಹಿಂದಿ ಮಾತನಾಡುವವರು ಶ್ರೇಷ್ಠರು, ದಕ್ಷಿಣ

ಭಾರತದ ಕನ್ನಡ ಸೇರಿದಂತೆ ವಿವಿಧ ಭಾಷೆಗಳನ್ನು ಮಾತನಾಡುವವರು ಜೋಕರ್‌ಗಳು ಎಂಬರ್ಥದ ಪೋಸ್ಟ್‌ ಮಾಡಲಾಗಿದೆ. ಸಾಂಸ್ಕೃತಿಕ ಹೆಮ್ಮೆ ಎನ್ನುವುದು ಆಯಾ ಭಾಗದ ಜನರ ಹಕ್ಕಾಗಿದೆ. 'ಹಿಂದಿ ಹೇರಿಕೆ' ದಿನನಿತ್ಯದ ಪ್ರವೃತ್ತಿಗಳಾಗಿದ್ದರೂ, ಹಿಂದೂ ದೇವಾಲಯಗಳು ಮಾತ್ರ ರಾಜ್ಯದ ನಿಯಂತ್ರಣದಲ್ಲಿ ಏಕೆ ಉಳಿದಿವೆ ಅಥವಾ ಧಾರ್ಮಿಕ ಅಥವಾ ಜನಸಂಖ್ಯಾಶಾಸ್ತ್ರೀಯವಾಗಿ ದೊಡ್ಡ ಪ್ರಮಾಣದ ಮತಾಂತರಗಳನ್ನು ಅಸ್ಪೃಶ್ಯ ವಿಷಯಗಳಾಗಿ ಏಕೆ ಪರಿಗಣಿಸಲಾಗಿದೆ ಎಂಬುದನ್ನು ಚರ್ಚಿಸಲು ಕೆಲವರು ಬಯಸುತ್ತಾರೆ. ಸರಿಯೇ ಎಂದು ಮತ್ತೊಂದು ಪೋಸ್ಟ್‌ ಮಾಡಲಾಗಿದೆ.

Viral Post Hindi Speakers

ಪೋಸ್ಟ್‌ನಲ್ಲಿ ಏನಾಗಿದೆ

ಇನ್ನು ವೈರಲ್ ಆಗಿರುವ ಪೋಸ್ಟ್‌ನಲ್ಲಿ ಉತ್ತರ ಭಾರತ ಹಾಗೂ ಈಶಾನ್ಯದ ರಾಜ್ಯಗಳ ಜನರು ಹಿಂದಿ ಮಾತನಾಡುವಂತೆ ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ. We Are Indians, Speak Hindi and English ಎಂದು ಬರೆದುಕೊಳ್ಳಲಾಗಿದೆ. ಮುಂದುವರಿದು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಜನರು ಆಯಾ ಭಾಷೆಯನ್ನು ಮಾತನಾಡುತ್ತೇವೆ ಎಂದು ಹೇಳುತ್ತಾರೆ ಎಂದು ಬರೆಯಲಾಗಿದ್ದು, ಜೋಕರ್ ಎಮೋಜಿ ಬಳಸಲಾಗಿದೆ. ಇದಕ್ಕೆ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪೋಸ್ಟ್‌ನಲ್ಲಿ Aura Of North India / ಉತ್ತರ ಭಾರತದ ಪ್ರಭಾವ ಎಂದು ಬರೆದುಕೊಳ್ಳಲಾಗಿದೆ.

ದಕ್ಷಿಣ ಭಾರತೀಯರಿಂದ ತೀವ್ರ ವಿರೋಧ

ಇನ್ನು ಈ ಪೋಸ್ಟ್‌ಗೆ ದಕ್ಷಿಣ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಿತ್ಯಾನಂದ ಎನ್ನುವವರು, ಹಿಂದಿ ಮತ್ತು ಇಂಗ್ಲಿಷ್ ಮುಕ್ತವಾಗಿ ಮಾತನಾಡಬಲ್ಲವರು ಉತ್ತರದಲ್ಲಿ ಉಳಿಯುವುದು ಉತ್ತಮ. ಕೆಲವು ಬಿಹಾರಿಗಳು ದಕ್ಷಿಣಕ್ಕೆ ಬರಲು ಏಕೆ ಬಯಸುತ್ತಾರೆ? ನೀವು ಇಷ್ಟೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ, ಆದ್ದರಿಂದ ಉತ್ತರ ಭಾರತದಲ್ಲಿಯೇ ಇರುವುದು ಉತ್ತಮ ಎಂದು ಹೇಳಿದ್ದಾರೆ.

ರಾಜಸ್ಥಾನ: ಮಾರ್ವಾಡಿ, ಮೇವಾರೀ, ಧುಂದಾಡಿ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು

ಉತ್ತರ ಪ್ರದೇಶ: ಅವಧಿ, ಭೋಜಪುರಿ, ಬ್ರಜ್ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು

ಬಿಹಾರ: ಮೈಥಿಲಿ, ಭೋಜಪುರಿ, ಮಗಧಿ, ಅಂಗಿಕಾ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು

ಮಧ್ಯ ಪ್ರದೇಶ: ಬುಂದೇಲಿ, ಬಘೇಲಿ, ನಿಮಾಡಿ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು

ಹರಿಯಾಣ: ಹರಿಯಾನ್ವಿ, ಅಹಿರವಾಟಿ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು

ದೆಹಲಿ: ಖಾರಿ ಬೋಲಿ (ಪ್ರಾದೇಶಿಕ ರೂಪ) ಭಾಷೆಯನ್ನು ಹಿಂದಿಯಿಂದ ಕಳೆದುಕೊಂಡಿತು

ಜಾರ್ಖಂಡ್: ನಾಗಪುರಿ, ಸದ್ರಿ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು

ಛತ್ತೀಸ್‌ಗಢ: ಛತ್ತೀಸ್‌ಗಢಿ ಭಾಷೆಯನ್ನು ಹಿಂದಿಯಿಂದ ಕಳೆದುಕೊಂಡಿತು

ಉತ್ತರಾಖಂಡ: ಗಢ್ವಾಲಿ, ಕುಮಾವೊನಿ ಭಾಷೆಗಳನ್ನು ಹಿಂದಿಯಿಂದ ಕಳೆದುಕೊಂಡಿತು ಎಂದು ಟೆಕ್‌ಚೇತು ಎನ್ನುವ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ಉತ್ತರ ಹಾಗೂ ಈಶಾನ್ಯ ಭಾರತದ ರಾಜ್ಯಗಳಿಂದಲೂ ವಿರೋಧ

ಇನ್ನು ಈ ಟ್ವೀಟ್‌ಗೆ ಉತ್ತರ ಭಾರತದ ಪಂಜಾಬ್ ಹಾಗೂ ಈಶಾನ್ಯ ಭಾರತದ ಪಶ್ಚಿಮ ಬಂಗಾಳದ ರಾಜ್ಯದ ಜನರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಬಂಗಾಳಿಗಳು ಹಿಂದಿ ಅಲ್ಲ, ಬಂಗಾಳಿ ಮಾತನಾಡುತ್ತಾರೆ. ನಾವು ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಂಡು ನಮ್ಮ ದೇಶವನ್ನು ಮತ್ತೆ ಒಗ್ಗೂಡಿಸಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಅದೇ ರೀತಿ ಪಂಜಾಬ್‌ನಲ್ಲಿ ನಾವು ಪಂಜಾಬಿ ಮಾತನಾಡುತ್ತೇವೆ ಎಂದಿದ್ದಾರೆ.

ರಾಜಾ ಎನ್ನುವವರು, ಉತ್ತರ ಭಾರತದ ಜನರು ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ ಎಂಬುದು ನಿಜವೇ, ಇಲ್ಲ. ಅವರು ಹಿಂದಿ ಮಾತ್ರ ಮಾತನಾಡುತ್ತಾರೆ. ಹಿಂದಿ ಒಂದು ಹುಸಿ ಭಾರತೀಯ ಭಾಷೆ. ಹೇರಳವಾದ ನೈಸರ್ಗಿಕ ಸಂಪನ್ಮೂಲಗಳ ಹೊರತಾಗಿಯೂ ಉತ್ತರ ಭಾರತದ ರಾಜ್ಯಗಳಲ್ಲಿನ ಕಳಪೆ ಅಭಿವೃದ್ಧಿಯಿಂದ ಇದನ್ನು ಸಾಬೀತುಪಡಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+