ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶ

ಶಿಮ್ಲಾ, ಆಗಸ್ಟ್ 24: ಹಿಮಾಚಲ ಪ್ರದೇಶದಲ್ಲಿ ಕೊರೊನಾದಿಂದಾಗಿ ಪ್ರವಾಸಿಗರ ಮೇಲೆ ವಿಧಿಸಿದ್ದ ನಿಷೇಧವನ್ನು ಸಡಿಲಗೊಳಿಸಲಾಗಿದೆ.

Recommended Video

      ಜೋಕೆ..!! ಸದ್ಯಕಿಲ್ಲ ಕೊರೋನಾದಿಂದ ಮುಕ್ತಿ | Oneindia Kannada

      ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಎನ್ನುವುದು ಆದಾಯಕ್ಕೆ ದಾರಿಯಾಗಿದೆ. ಕೊರೊನಾ ವೈರಸ್‌ನಿಂದಾಗಿ ಮಾರ್ಚ್‌ನಿಂದ ಯಾವುದೇ ಆದಾಯವಿರಲಿಲ್ಲ.

      ಲಾಕ್‌ಡೌನ್ ನಿಯಮ ಹಂತ ಹಂತವಾಗಿ ಸಡಿಲಗೊಳಿಸಿದ್ದು, ಪ್ರವಾಸಿಗರಿಗೆ ಮುಕ್ತ ಆಹ್ವಾನವನ್ನು ಹಿಮಾಚಲಪ್ರದೇಶ ಸರ್ಕಾರ ನೀಡಿದೆ.

      ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಈ ನಿರ್ಧಾರ ಘೋಷಿಸಿತ್ತು, ಪ್ರವಾಸಿಗರು 2 ರಿಂದ 5 ದಿನಗಳ ಕಾಲ ಉಳಿಯಬಹುದಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

      Himachal Pradesh Relaxes Restrictions For Tourists

      ಈ ಮೊದಲು ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ನೀಡಬೇಕಿತ್ತು, ಆ ನಿಯಮವನ್ನು ಕೂಡ ಸಡಿಲಗೊಳಿಸಿದ್ದು, ಈ ಮೊದಲು ಆ ವರದಿಗೆ 72 ಗಂಟೆ ಮಾತ್ರ ಮಿತಿ ಇತ್ತು ಈಗ ಅದನ್ನು 96 ಗಂಟೆಗೆ ಏರಿಸಲಾಗಿದೆ.

      ಇ-ಪಾಸ್ ಇಲ್ಲದೆ ಯಾರೂ ಕೂಡ ರಾಜ್ಯವನ್ನು ಪ್ರವೇಶಿಸುವಂತಿಲ್ಲ. ಅನ್‌ಲಾಕ್ 3 ಮಾರ್ಗಸೂಚಿ ಬಿಡುಗಡೆಯಾದ ನಂತರ ಹೋಟೆಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹಿಮಾಚ ಪ್ರದೇಶದಲ್ಲಿ ಇಂದು 21 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು 5022 ಪ್ರಕರಣಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+