OMG! ಮದುವೆಯಾದ ನಂತರ ವಧು ಒಂದು ವಾರದವರೆಗೆ ಬಟ್ಟೆಯಿಲ್ಲದೆ ಇರಬೇಕು- ಈ ಗ್ರಾಮದಲ್ಲಿದೆ ವಿಚಿತ್ರ ಸಂಪ್ರದಾಯ
ಮದುವೆ ಅಂದರೆ ಪ್ರತಿಯೊಬ್ಬರಿಗೂ ತುಂಬಾ ವಿಶೇಷವಾದ ದಿನ. ಎರಡು ಜೀವಗಳು ಬೆಸೆಯುವ ಕ್ಷಣಗಳು. ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ವಿಶೇಷ ದಿನ. ಈ ದಿನ ಉತ್ಸಾಹ, ಖುಷಿ, ಕುತೂಹಲ ಸೇರಿದಂತೆ ಹಲವು ಭಾವನೆಗಳು ಒಟ್ಟೊಟ್ಟಿಗೆ ಸಂಭವಿಸುತ್ತದೆ. ಜೀವವಿರುವವರೆಗೂ ಈ ದಿನ ದಂಪತಿಗಳಿಗೆ ತುಂಬಾ ವಿಶೇಷ ದಿನವಾಗಿರುತ್ತದೆ. ಆದರೆ ಭಾರತದಲ್ಲಿ ಕೆಲ ಸಮುದಾಯದಲ್ಲಿ ನಡೆಯುವ ಮದುವೆಗಳು ಕೇಳುಗರಿಗೆ ಅಚ್ಚರಿಯನ್ನುಂಟು ಮಾಡುತ್ತವೆ.
ಭಾರತ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈವಿಧ್ಯತೆಗೆ ಹೆಸರುವಾಸಿಯಾದ ದೇಶವಾಗಿದೆ. ಇಲ್ಲಿನ ಪ್ರದೇಶಗಳು, ಜಾತಿಗಳು ಮತ್ತು ಸಮುದಾಯಗಳು ಹಲವಾರು ವಿಭಿನ್ನ ಪದ್ಧತಿಗಳು ಮತ್ತು ನಂಬಿಕೆಗಳನ್ನು ಹೊಂದಿವೆ. ಅಲ್ಲದೆ ಇಲ್ಲಿನ ಕೆಲವು ವಿವಾಹ ಸಂಪ್ರದಾಯಗಳು ಸಹ ಆಶ್ಚರ್ಯವನ್ನುಂಟುಮಾಡುತ್ತವೆ. ಹಿಮಾಚಲ ಪ್ರದೇಶದ ಒಂದು ಹಳ್ಳಿಯಲ್ಲಿ ನಡೆಯುವ ಮದುವೆಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಹೌದು... ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆಯಲ್ಲಿರುವ ಪಿನಿ ಗ್ರಾಮದಲ್ಲಿ ಒಂದು ವಿಶಿಷ್ಟ ವೈವಾಹಿಕ ಸಂಪ್ರದಾಯವಿದೆ. ಅದರ ಪ್ರಕಾರ ಮದುವೆಯಾದ ನಂತರ ವಧು ಒಂದು ವಾರ ಬಟ್ಟೆ ಇಲ್ಲದೆ ಇರಬೇಕಾಗುತ್ತದೆ. ಈ ಅವಧಿಯಲ್ಲಿ ನವವಿವಾಹಿತರು ಪರಸ್ಪರ ಮಾತನಾಡುವುದನ್ನು ಸಹ ನಿಷೇಧಿಸಲಾಗುತ್ತದೆ. ಈ ಹಳ್ಳಿಯ ಪದ್ಧತಿಗಳಲ್ಲಿ ಈ ಸಂಪ್ರದಾಯ ಆಳವಾಗಿ ಬೇರೂರಿದೆ.
ಇಂತಹ ಮದುವೆ ಯಾವುದೋ ಒಂದೇ ಕುಟುಂಬದಲ್ಲಿ ನಡೆಯುವಂತಹದ್ದಲ್ಲ. ಈ ಗ್ರಾಮದಲ್ಲಿ ನಡೆಯುವ ಮದುವೆಗಳೆಲ್ಲವೂ ಹೀಗೇ ನಡೆಯುತ್ತವೆ. ಮಾತ್ರವಲ್ಲದೆ ಮದುವೆಯಾದ ನಂತರ ವಧು ಒಂದು ವಾರದವರೆಗೆ ಹೇಗೆ ಬೆತ್ತಲೆಯಾಗಿರಬೇಕೋ ಅದೇ ರೀತಿ ಸಮುದಾಯದ ಮಹಿಳೆಯರು ಶ್ರಾವಣ ಮಾಸದಲ್ಲಿ ಐದು ದಿನಗಳ ಕಾಲ ಬಟ್ಟೆ ಧರಿಸದಿರುವುದು ವಾಡಿಕೆ.

ಈ ದಿನಗಳಲ್ಲಿ ಪುರುಷರಿಗೂ ಕೆಲ ವಿಶೇಷ ನಿಯಮಗಳು ಅನ್ವಯಿಸುತ್ತವೆ. ಅವರು ಮಾದಕ ದ್ರವ್ಯಗಳನ್ನು ಸೇವಿಸುವಂತಿಲ್ಲ. ಜೊತೆಗೆ ಮಾಂಸವನ್ನು ತಿನ್ನುವಂತಿಲ್ಲ. ಈ ನಿಯಮಗಳನ್ನು ಮಹಿಳೆಯರು ಹಾಗೂ ಪುರುಷರು ಅನುಸರಿಸಲೇಬೇಕಾಗುತ್ತದೆ. ಹೀಗೆ ಹಳ್ಳಿಯಲ್ಲಿ ಸಂಪ್ರದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.
ಇಂತಹ ಆಚರಣೆಗಳ ಹಿಂದಿನ ತರ್ಕವೇನೆಂದರೆ, ಈ ಆಚರಣೆಗಳನ್ನು ಅನುಸರಿಸುವುದರಿಂದ ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ ಗ್ರಾಮಸ್ಥರಿಗಿದೆ. ಈ ನಂಬಿಕೆಯಿಂದಾಗಿ ಗ್ರಾಮದಲ್ಲಿ ನಡೆಯುವ ಮದುವೆಗಳಲ್ಲಿ ಈ ನಿಮಯಗಳನ್ನು ಚಾಚೂತಪ್ಪದೆ ಪಾಲಿಸಲಾಗುತ್ತದೆ.
ಹಾಗಂತ ಇದು ಭಾರತದಲ್ಲಿ ಕಂಡುಬರುವ ಅಸಾಮಾನ್ಯ ವಿವಾಹ ಸಂಪ್ರದಾಯವೇನಲ್ಲ. ವಿವಿಧ ಸಮುದಾಯಗಳಲ್ಲಿ ಮದುವೆಯ ನಂತರದ ಆಚರಣೆಗಳು ಇದಕ್ಕಿಂತಲೂ ವಿಭಿನ್ನವಾಗಿವೆ. ಕೆಲ ಸಮುದಾಯಗಳಲ್ಲಿ ಕುಟುಂಬ ಸದಸ್ಯರು ವರನ ಬಟ್ಟೆಗಳನ್ನು ಹರಿದು ಹಾಕುವುದರಿಂದ ಹಿಡಿದು ದಂಪತಿಯನ್ನು ಕೋಣೆಯಲ್ಲಿ ಲಾಕ್ ಮಾಡುವುದು ಅಥವಾ ಟೊಮೆಟೊ ಎಸೆಯುವ ಆಚರಣೆಗಳು ಇವೆ.
ಈ ಆಚರಣೆಗಳು ಭಾರತದ ಸಾಂಸ್ಕೃತಿಕ ಪರಂಪರೆಯ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ. ಈ ಸಮುದಾಯಗಳಲ್ಲಿ ವಿವಾಹಗಳನ್ನು ಕೇವಲ ಇಬ್ಬರು ವ್ಯಕ್ತಿಗಳ ಒಗ್ಗೂಡಿಸುವುದನ್ನಾಗಿ ಮಾಡದೆ ಸಂಪ್ರದಾಯದ ಆಚರಣೆಯನ್ನಾಗಿ ಮಾಡಲಾಗುತ್ತದೆ. ಅಂತಹ ಸಂಪ್ರದಾಯಗಳ ಪರಿಚಯವಿಲ್ಲದವರಿಗೆ ಇದು ಆಶ್ಚರ್ಯವನ್ನುಂಟು ಮಾಡುವುದರಲ್ಲಿ ಅನುಮಾನವಿಲ್ಲ.












Click it and Unblock the Notifications