ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Himachal Pradesh Election Result : ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ 2022, ಗೆಲುವು ಯಾರಿಗೆ?

|
Google Oneindia Kannada News

ಶಿಮ್ಲಾ, ಡಿಸೆಂಬರ್‌ 7: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022ರ ಮತ ಎಣಿಕೆ ಡಿಸೆಂಬರ್ 8 ರಂದು (ಗುರುವಾರ) ನಡೆಯಲಿದೆ. ರಾಜ್ಯದ ಎಲ್ಲಾ 68 ಸ್ಥಾನಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಈ ಹಿನ್ನೆಲೆಯಲ್ಲಿ ನೀವು ತಿಳಿಯಬೇಕಾದ ಸಂಗಯಿಗಳು ಇಲ್ಲಿವೆ.

ಹಿಮಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಹಿಡಿಯಲು ಪ್ರಯತ್ನಿಸುವುದರೊಂದಿಗೆ ತೀವ್ರವಾದ ಪ್ರಚಾರಕ್ಕೆ ನಡೆಸಿತ್ತು. ಆದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ಕಾಂಗ್ರೆಸ್ ಆಡಳಿತ ಪಕ್ಷವಾದ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದೆ.

Himachal Pradesh Exit Poll Result 2022; ಎಲ್ಲಾ ಸಮೀಕ್ಷೆಗಳ ವರದಿHimachal Pradesh Exit Poll Result 2022; ಎಲ್ಲಾ ಸಮೀಕ್ಷೆಗಳ ವರದಿ

ಹಿಮಾಚಲ ಪ್ರದೇಶದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಆಮ್ ಆದ್ಮಿ ಪಕ್ಷ ಹೊರಹೊಮ್ಮಿರುವುದು ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಚುನಾವಣಾ ಕದನವನ್ನು ತೀವ್ರಗೊಳಿಸಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದರೆ, ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಪಡೆದುಕೊಂಡಿತ್ತು.

Himachal Pradesh Election Result 2022 on December 8

ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎಎಪಿ 67 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಣದಲ್ಲಿರುವ ಇತರ ಪಕ್ಷಗಳೆಂದರೆ ಬಹುಜನ ಸಮಾಜ ಪಕ್ಷ 53 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ 11 ಸ್ಥಾನಗಳಲ್ಲಿ ಮತ್ತು ಹಿಮಾಚಲ ಜನ ಕ್ರಾಂತಿ ಪಕ್ಷವು 6 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

Himachal Pradesh Exit Poll Result 2022; ಯಾರಿಗೆ ಎಷ್ಟು ಸೀಟು?Himachal Pradesh Exit Poll Result 2022; ಯಾರಿಗೆ ಎಷ್ಟು ಸೀಟು?

ನವೆಂಬರ್‌ 12ರಂದು ನಡೆದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 74% ರಷ್ಟು ಮತದಾನವಾಗಿದೆ. ಇದು 2017 ರ ಹಿಂದಿನ ಚುನಾವಣೆಗಿಂತ (75.6%) ಸ್ವಲ್ಪ ಕಡಿಮೆಯಾಗಿದೆ. ಮತದಾನದ ಅವಧಿ ಮುಗಿದ ನಂತರ ಜನರು ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಎಕ್ಸಿಟ್ ಪೋಲ್ ಪ್ರಕಾರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ಅಧಿಕಾರಕ್ಕಾಗಿ ಹೋರಾಟ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಹಿಮಾಚಲ ವಿಧಾನಸಭಾ ಚುನಾವಣಾ ಮಿಶ್ರಣದಲ್ಲಿ ಮತ್ತೊಂದು ಪ್ರಮುಖ ಪಕ್ಷವಾದ ಆಮ್ ಆದ್ಮಿ ಪಕ್ಷ (ಎಎಪಿ) ಕಣದಲ್ಲಿದೆ.

ಡಿಸೆಂಬರ್ 8ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಅಧಿಕೃತವಾಗಿ ಆರಂಭವಾಗಲಿದೆ. ಮತ ಎಣಿಕೆ ಪ್ರಕ್ರಿಯೆಗಾಗಿ ಸುಮಾರು ಹತ್ತು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಯ ನಂತರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಅದೇ ದಿನ ಪ್ರಕಟಿಸಲಾಗುತ್ತದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಆದಾಗ್ಯೂ, 1985ರ ನಂತರ ಹಿಮಾಚಲ ಪ್ರದೇಶದಲ್ಲಿ ಯಾವುದೇ ಆಡಳಿತ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಿಲ್ಲ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾರ ಹಿಡಿತ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹಿಮಾಚಲ ಪ್ರದೇಶದ ಪ್ರಮುಖ ಕ್ಷೇತ್ರಗಳಲ್ಲಿ ಡಾಲ್‌ಹೌಸಿ, ನಾದೌನ್, ಸೆರಾಜ್, ಗ್ರಾಮೀಣ ಶಿಮ್ಲಾ, ಧರ್ಮಶಾಲಾ, ಫತೇಪುರ್, ಹಮೀರ್‌ಪುರ್, ಡೆಹ್ರಾ, ಕುಲ್ಲಾ, ನಲಗಢ್, ಕಾರ್ಸೋಗ್, ಮಂಡಿ, ಉನಾ ಮತ್ತು ಬರ್ಸರ್ ಸೇರಿವೆ. ಹಿಮಾಚಲ ಅಸೆಂಬ್ಲಿ ಚುನಾವಣೆ 2022ರ ಪ್ರಮುಖ ಅಭ್ಯರ್ಥಿಗಳೆಂದರೆ ರಾಜೀವ್ ಸೈಜಾಲ್ (ಬಿಜೆಪಿ)- ಕಸೌಲಿ ಸ್ಥಾನ, ಮುಖೇಶ್ ಅಗ್ನಿಹೋತ್ರಿ (ಕಾಂಗ್ರೆಸ್)- ಹರೋಲಿ ಸ್ಥಾನ, ವಿಕ್ರಮಾದಿತ್ಯ ಸಿಂಗ್ (ಕಾಂಗ್ರೆಸ್)- ಗ್ರಾಮೀಣ ಶಿಮ್ಲಾ ಸ್ಥಾನ, ಜೈರಾಮ್ ಠಾಕೂರ್ (ಬಿಜೆಪಿ)- ಸೆರಾಜ್ ಸ್ಥಾನ, ಮತ್ತು ಸರ್ವೀನ್ ಚೌಧರಿ (ಬಿಜೆಪಿ)- ಶಹಪುರ ಕ್ಷೇತ್ರ ಇವರೇ ಮೊದಲಾದವರಾಗಿದ್ದಾರೆ.

English summary
The counting of votes for the Himachal Pradesh Assembly Elections 2022 will be held on December 8 (Thursday). Voting for all the 68 seats in the state was held on November 12 in a single phase. In this context, here are the things you need to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X