ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Himachal Pradesh Election Result 2022; ಮುಖ್ಯಮಂತ್ರಿ ಜೈರಾಮ್ ಠಾಕೂರ್‌ಗೆ 14,921 ಮತಗಳ ಮುನ್ನಡೆ

|
Google Oneindia Kannada News

ಶಿಮ್ಲಾ, ಡಿಸೆಂಬರ್‌, 08: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 ಮತ ಎಣಿಕೆ ನಡೆಯುತ್ತಿದ್ದು, ಸಿಎಂ ಜೈರಾಮ್ ಠಾಕೂರ್ ತಮ್ಮ ಕ್ಷೇತ್ರ ಸೇರಾಜ್‌ನಲ್ಲಿ ಒಟ್ಟು 14,921 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

Recommended Video

Himachal Pradesh Result 2022: ಸರ್ಕಾರ ರಚನೆ ವೇಳೆ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಕಂಡುಬರುತ್ತಿದೆ

ಸೆರಾಜ್ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ಜೈ ರಾಮ್ ಠಾಕೂರ್ 1998ರಿಂದ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. 2017ರ ಚುನಾವಣೆಯಲ್ಲಿ ಜೈ ರಾಮ್ ಅವರು ಕಾಂಗ್ರೆಸ್‌ನ ಚೇತ್ ರಾಮ್ ಠಾಕೂರ್ ಅವರನ್ನು 11,254 ಮತಗಳಿಂದ ಸೋಲಿಸಿದ್ದರು. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಇಲ್ಲಿ ಐದು ಸ್ಥಾನಗಳಲ್ಲಿ ಪೈಪೋಟಿ ಏರ್ಪಟ್ಟಿದೆ.

ರಸ್ತೆ ಸಂಪರ್ಕವಿಲ್ಲದೆ ಅಲ್ಲಿನ ಸ್ಥಳೀಯರು ರಸ್ತೆ ಸಂಪರ್ಕವಿಲ್ಲದೇ ಪರದಾಡುವಂತಾಗಿದೆ. ಸೇರಾಜ್ ಕಣಿವೆಯಾದ್ಯಂತ ಹಲವಾರು ಮಾರ್ಗಗಳು ಕಲ್ಲುಗಳು ಮತ್ತು ಬಂಡೆಗಳಿಂದ ಆವೃತವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ ಎಂದು ಅಲ್ಲಿನ ಸ್ಥಳೀಯರು ಜೈರಾಮ್ ಠಾಕೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಮೂಲಸೌಕರ್ಯಗಳನ್ನು ಕಡದೆ ಕಡೆಗಣಿಸಲಾಗಿದೆ ಎಂದು ಕೂಡ ಸ್ಥಳೀಯರು ಆರೋಪಿಸಿದ್ದಾರೆ. ಶಾಲೆಗಳ ನಿರ್ಮಾಣ ಮತ್ತು ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಅಲ್ಲಿನ ಸ್ಥಳೀಯರ ಬೇಡಿಕೆ ಆಗಿದೆ.

Himachal Pradesh Election Result 2022; Jairam Thakur leading with total of 14,921 votes in Seraj

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಹಿಮಾಚಲ ಪ್ರದೇಶದ 68 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 68 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಸಿದ್ದರೆ. ಆಮ್ ಆದ್ಮಿ ಪಕ್ಷ 67 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಹಿಮಾಚಲ ಪ್ರದೇಶದಲ್ಲಿ ಫಲಿತಾಂಶದ ವಿವರ ಕುತೂಹಲ ಕೆರಳಿಸುತ್ತಿದ್ದು, ಸದ್ಯದ ಪ್ರಕಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಂಗ್ರೆಸ್ 32 ಮತ್ತು ಬಿಜೆಪಿ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗೆ ಬಿಜೆಪಿ, ಕಾಂಗ್ರೆಸ್‌ ನಡುವೆ ಹಾವು ಏಣಿಯ ಆಟ ನಡೆಯುತ್ತಲೇ ಇದೆ.

English summary
Himachal Pradesh Election Result 2022: Himachal Pradesh Chief minister Jairam Thakur leading with total of 14,921 votes in Seraj constituency, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X