Just in: ಹಿಮಾಚಲ ಪ್ರದೇಶ ಚುನಾವಣೆ: ಶಿಮ್ಲಾದಲ್ಲಿ ಹೊಸ ಕಚೇರಿ ತೆರೆದ ಬಿಜೆಪಿ

ಶಿಮ್ಲಾ, ಅ. 24: ಮುಂದಿನ ತಿಂಗಳು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಶಿಮ್ಲಾದಲ್ಲಿ ಬಿಜೆಪಿ ತನ್ನ ನೂತನ ಕಚೇರಿಯನ್ನು ಆರಂಭಿಸಿದೆ. ಮಾಲ್ ರಸ್ತೆಯಲ್ಲಿರುವ ನೂತನ ಬಿಜೆಪಿ ಶಿಮ್ಲಾ ಮಂಡಲ ಕಚೇರಿಯನ್ನು ಬಿಜೆಪಿಯ ಹಿರಿಯ ನಾಯಕ ಗಣೇಶ್ ದತ್ ಉದ್ಘಾಟಿಸಿದ್ದಾರೆ.

ಈ ವೇಳೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಗಣೇಶ್ ದತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರೊಂದಿಗೆ ಶಿಮ್ಲಾ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂಜಯ್ ಸೂದ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ದತ್, "ಬಿಜೆಪಿ ಶಿಮ್ಲಾ ನಗರ ಸ್ಥಾನವನ್ನು ಖಂಡಿತವಾಗಿ ಗೆಲ್ಲುತ್ತದೆ. ನಾವು ರಾಜ್ಯದಲ್ಲಿ ಪ್ರಬಲ ಸರ್ಕಾರವನ್ನು ರಚಿಸುತ್ತೇವೆ. ಇನ್ನು, ಕಾಂಗ್ರೆಸ್‌ಗೆ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಅಜೆಂಡಾ ಇಲ್ಲ. ಅವರ ಭ್ರಷ್ಟಾಚಾರದ ಕಥೆಗಳು ಎಲ್ಲರಿಗೂ ತಿಳಿದಿವೆ" ಎಂದು ಹೇಳಿದ್ದಾರೆ.

Himachal Pradesh Assembly elections 2022: BJP Opens New Office In Shimla

ವೃತ್ತಿಯಲ್ಲಿ ಟೀ ಮಾರುವ 57 ವರ್ಷದ ಸಂಜಯ್ ಸೂದ್ ಅವರಿಗೆ ಶಿಮ್ಲಾ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸಿದ ಅವರು ಶನಿವಾರದಿಂದಲೇ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಸಂಜಯ್ ಸೂದ್ 1980 ರಿಂದ ಬಿಜೆಪಿ ಪಕ್ಷದಲ್ಲಿದ್ದಾರೆ. ಜೊತೆಗೆ ಶಿಮ್ಲಾ ನಗರದ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಬಿಜೆಪಿ ತನ್ನ 'ಮಿಷನ್ ಹಿಮಾಚಲ' ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ 40 ಹಿರಿಯ ನಾಯಕರ ಹೆಸರಿದೆ.

Himachal Pradesh Assembly elections 2022: BJP Opens New Office In Shimla

ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಿಮಾಚಲ ಸಿಎಂ ಜೈ ರಾಮ್ ಠಾಕೂರ್, ಸಂಸದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಹೆಸರುಗಗಳು ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+