• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾದ ಪ್ರೇಯಸಿ ಜೊತೆ ಟ್ರಕ್‌ನಲ್ಲಿ ಕದ್ದುಮುಚ್ಚಿ ಪ್ರಯಾಣ: ಮುಂದೇನಾಯ್ತು?

|

ಶಿಮ್ಲಾ, ಮೇ 7: ರಷ್ಯಾದ ಪ್ರೇಯಸಿ ಜೊತೆಗೆ ಯುವಕನೊಬ್ಬ ಟ್ರಕ್‌ನಲ್ಲಿ ಕದ್ದುಮುಚ್ಚಿ ಪ್ರಯಾಣಿಸಿದ್ದಾನೆ. ಸಾಕಷ್ಟು ಮಂದಿ ಲಾರಿ, ಅಂಬ್ಯುಲೆನ್ಸ್, ಟ್ರಕ್ ಹೀಗೆ ಹಲವು ಮಾರ್ಗಗಳನ್ನು ಹುಡುಕಿಕೊಂಡು ಲಾಕ್‌ಡೌನ್ ಸಂದರ್ಭದಲ್ಲಿ ಓಡಾಡುತ್ತಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಈ ಜೋಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕುಲ್ಲು ಜಿಲ್ಲೆಯ ಯುವಕನೋರ್ವ ರಷ್ಯಾದ ಯುವತಿಯ ಜೊತೆ ಟ್ರಕ್‌ನಲ್ಲಿ ಅಡಗಿಕುಳಿತು ಶಿಮ್ಲಾಕ್ಕೆ ಹೋಗುತ್ತಿದ್ದ. ಇವರಿಬ್ಬರೂ ಕಲ್ಲು ಕಿಲ್ಲೆಯ ನಿರ್ಮಾಂಡ್‌ನ ನಿವಾಸಿಗಳಾಗಿದ್ದಾರೆ. ಯಾವುದೋ ಕೆಲಸದ ನಿಮಿತ್ತ ನೊಯ್ಡಾಕ್ಕೆ ಹೋಗಿ ಅಲ್ಲಿಯೇ ಸಿಕ್ಕಿಬಿದ್ದಿದ್ದರು. ಈಗ ಟ್ರಕ್ ನಲ್ಲಿ ಶಿಮ್ಲಾಕ್ಕೆ ಪ್ರವೇಶಿಸಿ ಅಲ್ಲಿಂದ ಮತ್ತೆ ನಿರ್ಮಾಂಡ್‌ಗೆ ಹೋಗಿ ನಂತರ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದರು.

ನಿಲ್ಲದ ವಲಸೆ ಕಾರ್ಮಿಕರ ಅಪಘಾತ: ದಂಪತಿ ಸೇರಿ ನಾಲ್ಕು ಮಂದಿ ಸಾವು

ಮದುವೆಯಾಗುವ ಕನಸು ಕಂಡಿದ್ದ ಜೋಡಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಯುವಕ, ಲಾರಿ ಚಾಲಕ, ಕ್ಲೀನರ್ ನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಯುವತಿಯನ್ನು ದೆಹಲಿಗೆ ಕಳುಹಿಸಿ ಅಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಶರು ಮಾಹಿತಿ ನೀಡಿದ್ದಾರೆ.

ಇವರ ಬಳಿ ಯಾವುದೇ ಪಾಸ್ ಇರಲಿಲ್ಲ. ಹಾಗಾಗಿ ವಶಕ್ಕೆ ಪಡೆದಿದ್ದೇವೆ, ಲಾರಿ ಚಾಲಕ, ಕ್ಲೀನರ್ ಸೇರಿ ನಾಲ್ಕು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

English summary
A man from Kullu district of Himachal Pradesh and a Russian woman were caught while trying to enter Shimla district in a truck during the coronavirus-induced lockdown and imposition of curfew in the state, the police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X