Get Updates
Get notified of breaking news, exclusive insights, and must-see stories!

ಹಿಜಾಬ್ ಪ್ರಕರಣ ತೀರ್ಪು ಇಬ್ಬರು ಸುಪ್ರೀಂ ನ್ಯಾಯಾಧೀಶರ ಅಭಿಪ್ರಾಯ ಭಿನ್ನವಾಗಿದ್ದೇಕೆ?

ಕರ್ನಾಟಕ ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ವಿಭಜಿತ ತೀರ್ಪು ನೀಡಿದೆ. ರಾಜ್ಯದಲ್ಲಿ ತರಗತಿ ಕೊಠಡಿಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬೇಕೇ ಎಂಬುದರ ಕುರಿತು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ತರಗತಿ ಕೊಠಡಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿರ್ಬಂಧಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಎತ್ತಿಹಿಡಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ನಿಷೇಧವನ್ನು ಒಪ್ಪಲಿಲ್ಲ. ಪ್ರಕರಣ ಈಗ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ಹೋಗಲಿದೆ.

Hijab Verdict: Know how two Supreme Court Judges Differed

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಪೀಠವು ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಅರ್ಜಿದಾರರು ಮತ್ತು ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಮತ್ತು ಕಾಲೇಜು ಶಿಕ್ಷಕರ ಸಾಮೂಹಿಕ ವಾದವನ್ನು ಆಲಿಸಿದ 10 ದಿನಗಳ ವಿಚಾರಣೆಯ ನಂತರ ಇಂದು ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳ ತರಗತಿ ಕೊಠಡಿಗಳಲ್ಲಿ ಹಿಜಾಬ್ ಅನ್ನು ಧರಿಸುವುದನ್ನು ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಮೂರ್ತಿಗಳಲ್ಲಿ ಒಬ್ಬರು ಎತ್ತಿಹಿಡಿದಿದ್ದಾರೆ.

ಇಬ್ಬರು ನ್ಯಾಯಾಧೀಶರ ವಾದವೇನು?

ಇಬ್ಬರು ನ್ಯಾಯಾಧೀಶರ ವಾದವೇನು?

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಬೆಂಬಲಿಸಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಜಾಬ್ ನಿಷೇಧವನ್ನು ಬೆಂಬಲಿಸಲಿಲ್ಲ. "ನನ್ನ ಮನಸ್ಸಿನಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶವಿದೆ. ಒಂದು ವಿಷಯವೆಂದರೆ ಹೆಣ್ಣು ಮಗುವಿನ ಶಿಕ್ಷಣ ಇಲ್ಲಿ ಮುಖ್ಯ. (ಹಲವು) ಪ್ರದೇಶಗಳಲ್ಲಿ ಹೆಣ್ಣು ಮಗು ಶಾಲೆಗೆ ಹೋಗುವ ಮೊದಲು ಮನೆಕೆಲಸ ಮತ್ತು ಕೆಲಸಗಳನ್ನು ಮಾಡುತ್ತದೆ. ನಾವು ಅವಳ ಜೀವನವನ್ನು ಹಿಜಾಬ್ ನಿಷೇಧದಿಂದ ಸುಧಾರಿಸಲು ಸಾಧ್ಯವಿಲ್ಲ. ಮುಖ್ಯ ಒತ್ತು, ಆಯ್ಕೆಯ ವಿಷಯವಾಗಿರಬೇಕು. ನಮ್ಮ ಆಯ್ಕೆ ವಿಷಯ ಶಿಕ್ಷಣ. ಅದು ಅವರಿಗೆ ನೀಡುವುದು ಇಲ್ಲಿ ಮುಖ್ಯವಾಗಿದೆ" ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹೇಳಿದರು.


ನ್ಯಾಯಮೂರ್ತಿ ಗುಪ್ತಾ ಅವರು ತಮ್ಮ ಆದೇಶದಲ್ಲಿ 11 ಪ್ರಶ್ನೆಗಳನ್ನು ಎತ್ತಿದ್ದಾರೆ, ಅವುಗಳೆಂದರೆ:

ಮೇಲ್ಮನವಿಯನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಬೇಕೆ

ವಿದ್ಯಾರ್ಥಿಗಳ ಸಮವಸ್ತ್ರವನ್ನು ಕಾಲೇಜುಗಳು ನಿರ್ಧರಿಸಬಹುದೇ

ಹಿಜಾಬ್ ಧರಿಸುವುದು ಮತ್ತು ಅದನ್ನು ನಿರ್ಬಂಧಿಸುವುದು ಧರ್ಮದ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆಯೇ (ಆರ್ಟಿಕಲ್ 25)

ಆರ್ಟಿಕಲ್ 25 ಮತ್ತು ಆರ್ಟಿಕಲ್ 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಪರಸ್ಪರ ಪ್ರತ್ಯೇಕವಾಗಿದೆಯೇ

ಕರ್ನಾಟಕದ ನಿಷೇಧವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೇ

ಇಸ್ಲಾಂ ಧರ್ಮದ ಅಡಿಯಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಅಭ್ಯಾಸದ ಭಾಗವೇ?

ಸರ್ಕಾರದ ಆದೇಶವು ಶಿಕ್ಷಣದ ಪ್ರವೇಶದ ಉದ್ದೇಶವನ್ನು ಪೂರೈಸುತ್ತದೆಯೇ

"ನನ್ನ ಪ್ರಕಾರ ಉತ್ತರವು ಮೇಲ್ಮನವಿದಾರರ ವಿರುದ್ಧವಾಗಿದೆ. ಹೀಗಾಗಿ ನಾನು ಮೇಲ್ಮನವಿಯನ್ನು ವಜಾಗೊಳಿಸುತ್ತೇನೆ" ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಸಂಘ- ಸಂಘಟನೆಗಳು ಭಾಗಿ

ವಿದ್ಯಾರ್ಥಿಗಳೊಂದಿಗೆ ಸಂಘ- ಸಂಘಟನೆಗಳು ಭಾಗಿ

ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತಮ್ಮ ಕಾಲೇಜು ತರಗತಿಗೆ ಪ್ರವೇಶಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ಗೆ ತಲುಪಿತ್ತು.


2021 ರ ಡಿಸೆಂಬರ್‌ನಲ್ಲಿ ಕಾಲೇಜಿನಲ್ಲಿ ವಿವಾದ ಪ್ರಾರಂಭವಾಯಿತು ಮತ್ತು 2022 ರ ಜನವರಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಗುಂಪು ತಮ್ಮ ತರಗತಿಯ ಹೊರಗೆ ಮೆಟ್ಟಿಲುಗಳ ಮೇಲೆ ಅಧ್ಯಯನ ಮಾಡುತ್ತಿರುವ ಫೋಟೋಗಳು ಹೊರಬಂದವು. ನಂತರ ಇದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಉಡುಪಿ ಜಿಲ್ಲೆ ಇಡೀ ವಿಶ್ವದ ಗಮನವನ್ನೇ ಸೆಳೆದಿದೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ವಿದ್ಯಾರ್ಥಿ ವಿಭಾಗದಿಂದ ಬೆಂಬಲವಿದೆ ಎಂದು ಹೇಳಲಾಗುತ್ತಿದೆ.


ಈ ವಿವಾದ ನಂತರ ಫೆಬ್ರವರಿ 2022 ರ ಮೊದಲ ವಾರದಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟು ಹಾಕಿತು. ಕೇಸರಿ ಶಾಲುಗಳನ್ನು ಧರಿಸಿದ ಹಿಂದೂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ವಿರೋಧಿಸಿದರು. ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ಹಿಂದೂ ವಿದ್ಯಾರ್ಥಿಗಳನ್ನು ಉಡುಪಿಯಲ್ಲಿ ಹಿಂದುತ್ವವಾದಿ ಗುಂಪು, ಹಿಂದೂ ಜಾಗರಣ ವೇದಿಕೆ ಬೆಂಬಲ ಪಡೆದಿತ್ತು ಎಂದು ವರದಿಯಾಗಿದೆ.

'ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ' ಬಟ್ಟೆಗಳ ನಿಷೇಧ

'ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ' ಬಟ್ಟೆಗಳ ನಿಷೇಧ

ಫೆಬ್ರವರಿ 5 2022 ರಂದು, ಕರ್ನಾಟಕ ಸರ್ಕಾರವು ಡ್ರೆಸ್ ಕೋಡ್ ಅನ್ನು ಕಡ್ಡಾಯಗೊಳಿಸಿತು. ಶಾಲೆಗಳು ಮತ್ತು ಕಾಲೇಜುಗಳಲ್ಲಿ 'ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ' ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿತು.


ಹಿಜಾಬ್ ಧರಿಸುವುದು ತಮ್ಮ ನಂಬಿಕೆಯ ಭಾಗವಾಗಿದೆ ಮತ್ತು ಹಾಗೆ ಮಾಡುವುದು ಅವರ ಮೂಲಭೂತ ಹಕ್ಕು ಎಂದು ವಾದಿಸಿ ಮುಸ್ಲಿಂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಆದರೆ ಕರ್ನಾಟಕ ಹೈಕೋರ್ಟ್ ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ ಮತ್ತು ಮುಸ್ಲಿಮರು ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದೆ. ಪ್ರಸ್ತುತ ಕರ್ನಾಟಕದಲ್ಲಿ, ಮುಸ್ಲಿಮರು ನಡೆಸುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಮಾತ್ರ ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುತ್ತಿವೆ.

145 ಮುಸ್ಲಿಂ ಹುಡುಗಿಯರು ವರ್ಗಾವಣೆ

145 ಮುಸ್ಲಿಂ ಹುಡುಗಿಯರು ವರ್ಗಾವಣೆ

ತೀರ್ಪಿನ ನಂತರ ಉಡುಪಿ ಮತ್ತು ದಕ್ಷಿಣ ಕನ್ನಡದ ಕಾಲೇಜುಗಳಲ್ಲಿ ಓದುತ್ತಿರುವ ಹಲವಾರು ಮುಸ್ಲಿಂ ಹುಡುಗಿಯರು ಹಿಜಾಬ್ ಅನ್ನು ಇನ್ನೂ ಅನುಮತಿಸುವ ಕಾಲೇಜುಗಳಿಗೆ ವರ್ಗಾಯಿಸಲಾಯಿತು. ಹೆಚ್ಚಾಗಿ ಮುಸ್ಲಿಂ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲಾಗುತ್ತದೆ. ಮಂಗಳೂರು ಮೂಲದ ಡೆಕ್ಕನ್ ಹೆರಾಲ್ಡ್‌ನ ಪತ್ರಕರ್ತ ಹರ್ಷ ಅವರು ಆರ್‌ಟಿಐಗೆ ಸಲ್ಲಿಸಿದ ವರದಿಯಲ್ಲಿ, ಈ ವರ್ಷ ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಂತರ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಕಾಲೇಜುಗಳಲ್ಲಿ ಓದುತ್ತಿರುವ 900 ಮುಸ್ಲಿಂ ಹುಡುಗಿಯರಲ್ಲಿ 145 ತಮ್ಮ ವರ್ಗಾವಣೆ ಪ್ರಮಾಣಪತ್ರವನ್ನು ಸಂಗ್ರಹಿಸಿದ್ದಾರೆ ಎಂದು ತೋರಿಸಿದೆ. ವಿಶ್ವವಿದ್ಯಾನಿಲಯವು ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರು ಘಟಕ ಕಾಲೇಜುಗಳನ್ನು ಮತ್ತು 206 ಅಂಗ ಕಾಲೇಜುಗಳನ್ನು ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+