ದೇಶಾದ್ಯಂತ 820 ಪಾರಂಪರಿಕ ತಾಣಗಳು ಇಂದಿನಿಂದ ಓಪನ್

ನವದೆಹಲಿ, ಜೂನ್ 8: ಲಾಕ್‌ಡೌನ್ ಸಡಿಲಿಕೆ ಬಳಿಕ ಸತತ ಎರಡೂವರೆ ತಿಂಗಳ ನಂತರ ಇಂದಿನಿಂದ (ಜೂನ್ 8) ಪಾರಂಪರಿಕ ತಾಣಗಳನ್ನು ತೆರೆಯಲು ಅನುಮತಿ ದೊರೆತಿದೆ.

ಜೂನ್ 8 ರಿಂದ ಭಾರತೀಯ ಪುರಾತತ್ವ ಸಮೀಕ್ಷೆ ಅಡಿಯಲ್ಲಿ ಬರುವ 820 ಸಂರಕ್ಷಿತ ಸ್ಮಾರಕಗಳನ್ನು ಪುನಃ ತೆರೆಯಲು ಕೇಂದ್ರ ಸಂಸ್ಕೃತಿ ಸಚಿವಾಲಯ ಭಾನುವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.

'ಸಂಸ್ಕೃತಿ ಸಚಿವಾಲಯವು ಜೂನ್ 8 ರಿಂದ ಎಎಸ್ಐ ಅಡಿಯಲ್ಲಿ ತನ್ನ 820 ಸ್ಮಾರಕಗಳನ್ನು ತೆರೆಯಲು ಅನುಮೋದನೆ ನೀಡಿದೆ. ಎಂಹೆಚ್ಎ ಮತ್ತು ಆರೋಗ್ಯ ಸಚಿವಾಲಯ ಹೊರಡಿಸಿದ ಎಲ್ಲಾ ನಿಯಮಾವಳಿಗಳನ್ನು ಅನುಸರಿಸಲಾಗುವುದು."ಎಂದು ಸಚಿವ ಪ್ರಹ್ಲಾದ್ ಪಟೇಲ್ ಅವರು ಟ್ವೀಟ್ ಮಾಡಿದ್ದಾರೆ.

Heritage Sites To Open From Today

ಗೃಹ ಸಚಿವಾಲಯದ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಧಾರ್ಮಿಕ ಪೂಜೆ ನಡೆಯುವ ಎಎಸ್ಐ ನಿರ್ವಹಿಸುವ ಸ್ಮಾರಕಗಳನ್ನು ಮಾತ್ರ ತೆರೆಯಲು ಸಂಸ್ಕೃತಿ ಸಚಿವಾಲಯ ನಿರ್ಧರಿಸಿದೆ. ತಾಜ್ ಮಹಲ್, ಹೌಜ್ ಖಾಸ್ ಎನ್ಕ್ಲೇವ್ನಲ್ಲಿರುವ ನಿಲಾ ಮಸೀದಿ, ಕುತುಬ್ ಪುರಾತತ್ವ ಪ್ರದೇಶ, ದೆಹಲಿಯ ಲಾಲ್ ಗುಂಬಾದ್ ಅನ್ನು ಜೂನ್ 8 ರಿಂದ ಮತ್ತೆ ತೆರೆಯಲು ಅನುಮತಿ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಆರೋಗ್ಯ ಸಚಿವಾಲಯ ಹೊರಡಿಸಿದ ಎಲ್ಲಾ ಕೊರೊನಾವೈರಸ್ ಸಂಬಂಧಿತ ನಿಯಮಗಳನ್ನು ಸ್ಮಾರಕ ಅಧಿಕಾರಿಗಳು ಅನುಸರಿಸುತ್ತಾರೆ ಮತ್ತು ಅಂತಹ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸುವುದು ಸಂದರ್ಶಕರಿಗೆ ಕಡ್ಡಾಯವಾಗಿರುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟು ದೇಶದಲ್ಲಿ 3691 ಸ್ಮಾರಕಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+