ಗಂಭೀರ ಸ್ಥಿತಿಯಲ್ಲಿರುವ ಪುಷ್ಪಾರ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಿ...

Posted By:
Subscribe to Oneindia Kannada

ಮೂವತ್ತೆರಡು ವರ್ಷದ ಪುಷ್ಪಾ ಅವರು ರಕ್ತದ ಕೊರತೆಯಿಂದ ಬಳಲುತ್ತಿದ್ದಾರೆ. ಜತೆಗೆ ಅಸ್ಥಿ ಮಜ್ಜೆ ಕಸಿ ಕೂಡ ಆಗಬೇಕಿದೆ. ಈ ಚಿಕಿತ್ಸೆಗೆ ಅಂದಾಜು 18,50,000 ರುಪಾಯಿ ಖರ್ಚಾಗುತ್ತದೆ. ಪುಷ್ಪಾ ಅವರು ಗುಣವಾಗಲು ಇರುವ ಏಕೈಕ ಚಿಕಿತ್ಸೆ ಅಂದರೆ ಬಿಎಂಟಿ ಮಾತ್ರ.

ಪುಷ್ಪಾ ಅವರ ಸೋದರಿ ಬಿಎಂಟಿ ಹೊಂದಾಣಿಕೆ ಆಗುತ್ತಿದೆ. ಇಂಥ ಸ್ಥಿತಿಯಲ್ಲೂ ಅದೃಷ್ಟ ಏನೆಂದರೆ, ಆಕೆಯು ಪುಷ್ಪಾ ಅವರಿಗೆ ದಾನ ಮಾಡುವುದಕ್ಕೂ ಸಿದ್ಧರಿದ್ದಾರೆ. ಈ ಶಸ್ತ್ರಚಿಕಿತ್ಸೆ ಮಾತ್ರ ಶೀಘ್ರವಾಗಿ ಆಗಬೇಕು. ಆಕೆಯ ಚಿಕಿತ್ಸೆಗಾಗಿ ನೆರವು ಬೇಕಾಗಿದೆ.

Help Pushpa for Bone Marrow Transplant as she is in critical condition

ಪುಷ್ಪಾ ಬಡ ಕುಟುಂಬದ ಹೆಣ್ಣುಮಗಳು. ಅವರ ಇಡೀ ಕುಟುಂಬವು ವ್ಯವಸಾಯದ ಮೇಲೆ ಅವಲಂಬಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪತಿ, ಇಬ್ಬರು ಪುಟ್ಟ ಮಕ್ಕಳ ಜತೆಗೆ ಪುಷ್ಪಾ ವಾಸವಿದ್ದಾರೆ. ಕೃಷಿಯೇ ಆಧಾರವಾಗಿರುವ ಆ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತ ಹೊಂದಿಸಲು ಸಾಧ್ಯವಿಲ್ಲ.

Help Pushpa for Bone Marrow Transplant as she is in critical condition

ಶಸ್ತ್ರಚಿಕಿತ್ಸೆಗೆ ನೆರವು ಮಾಡಿ ಎಂದು ಪುಷ್ಪಾರ ಪತಿ ಹಾಗೂ ಕುಟುಂಬ ಎಲ್ಲರ ಬಳಿಯೂ ಮನವಿ ಮಾಡಿಯಾಗಿದೆ. ಇದೀಗ ನೀವು ಹಣದ ನೆರವು ನೀಡಿದರೆ ಪುಷ್ಪಾಗೆ ನೀಡುತ್ತಿರುವ ಅಸ್ಥಿ ಮಜ್ಜೆ ಕಸಿ ಚಿಕಿತ್ಸೆಯನ್ನು ಮುಂದುವರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pushpa is 32 years old female suffering from severe Aplastic Anemia for whom Allogeneic bone marrow transplant have to be done. For this transplant the estimated cost is around Rs.1850000/-

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ