ಉತ್ತರ ಭಾರತದ ರಾಜ್ಯಗಳಿಗೆ ಭಾರೀ ಮಳೆ: ವಾರಾಂತ್ಯಕ್ಕೆ ಹಿಂಗಾರು ಮಳೆ ಆಗಮನ ಸಾಧ್ಯತೆ
ನವದೆಹಲಿ, ಅಕ್ಟೋಬರ್ 09: ದೇಶದಲ್ಲಿ ಸಾಮಾನ್ಯವಾಗಿ ಮುಂಗಾರು ಅಂತ್ಯಗೊಳ್ಳುವ ಈ ಅಕ್ಟೋಬರ್ ತಿಂಗಳಲ್ಲಿ ಉತ್ತರ ಭಾರತದ ಹಲವು ರಾಜ್ಯಗಳು ಈ ವಾರಂತ್ಯಕ್ಕೆ ಭಾರೀ ಮಳೆಗೆ ಸಾಕ್ಷಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಳೆ ತೀವ್ರಗೊಳ್ಳಲಿದೆ. ಹವಾಮಾನದಲ್ಲಿನ ಬದಲಾವಣೆಗಳ ಕಾರಣದಿಂದ ಮುಂಗಾರು ಮಳೆಯ ಅಂತ್ಯ ತುಸು ವಿಳಂಬವಾಗಲಿದೆ. ಈ ವಾರಾಂತ್ಯದಲ್ಲಿ ವಿವಿಧ ರಾಜ್ಯಗಳಲ್ಲಿ ಜೋರು ಮಳೆ ದಾಖಲಾಗುವ ಸಂಭವವಿದ್ದು, ಅದು ಕೆಲವು ದಿನಗಳು ಮುಂದುವರಿಯುವ ಸೂಚನೆಯೂ ಲಭಿಸಿದೆ.

ಇದು ಈ ವಾರಾಂತ್ಯಕ್ಕೆ ಹಿಂಗಾರು ಮಳೆಯ ಆರಂಭದ ಲಕ್ಷಣಗಳು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ದೇಶದ ಉತ್ತರ ಭಾಗದಲ್ಲಿ ಅಕ್ಟೋಬರ್‌ನಲ್ಲಿ ಮಳೆ ಮುಂದುವರಿಯಲಿದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ನೈಋತ್ಯ ಮಾರುತಗಳು ಅಂತ್ಯಗೊಂಡು, ಈಶಾನ್ಯ ಮಾರುಗಳು (ಹಿಂಗಾರು) ಬೀಸಬೇಕು. ಆದರೆ ಈ ಪರಿವರ್ತನೆಯಲ್ಲಿ ತುಸು ವಿಳಂಬವಾಗಿದೆ. ಹಿಂಗಾರು ಆರಂಭ, ಎದುರಾಗುತ್ತಿರುವ ಹವಾಮಾನ ಬದಲಾವಣೆಗಳು ವಿಜ್ಞಾನಿಗಳಲ್ಲಿ ಕುತೂಹಲ ಹೆಚ್ಚಿಸಿವೆ.
ಮೊದಲು ಹಿಂಗಾರು ದೇಶದ ದಕ್ಷಿಣ ಪರ್ಯಾಯ ದ್ವೀಪದ ಭಾರತ, ಮುಖ್ಯವಾಗಿ ಪೂರ್ವ ಭಾಗವು ಈ ತಿಂಗಳಲ್ಲಿ ಹಿಂಗಾರು ಮಳೆಯನ್ನು ಪಡೆಯುತ್ತದೆ. ಇದೇ ವೇಳೆ ಭಾರತದ ಉತ್ತರ ಭಾಗಗಳು ಮಳೆ ಇಲ್ಲವೇ ತೀವ್ರ ಹಿಮಪಾತಕ್ಕೆ ಸಾಕ್ಷಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಹವಾಮಾನದಲ್ಲಿನ ಈ ಅಕಾಲಿಕ ಬದಲಾವಣೆಗಳು ಉತ್ತರ ಭಾರತದಲ್ಲಿ ಜೋರು ಮಳೆ ಸುರಿಸಿದರೆ, ಇತ್ತ ಹಿಂಗಾರು ಮಳೆಗಳ ಆರಂಭಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಡ್ಡಿಪಡಿಸದೇ ಸರಾಗವಾಗಿ ಹಿಂಗಾರು ಆರಂಭವಾದರೂ ಸಹ ಉತ್ತರ ಭಾರತದ ರಾಜ್ಯಗಳಲ್ಲಿ ಇನ್ನಷ್ಟು ಮಳೆ ಆಗಲಿದೆ. ಸೆಪ್ಟಂಬರ್ ಅಂತ್ಯಕ್ಕೆ ಬಂಗಾಳಕೊಲ್ಲಿಯಲ್ಲಿ ಕೆಲವು ದಿನ ಉಂಟಾಗಿದ್ದ ಹವಾಮಾನ ವೈಪರಿತ್ಯ ಕಾರಣದಿಂದ ಮುಂಗಾರು ಇನ್ನೂ ಅಂತ್ಯಗೊಂಡಿಲ್ಲ. ಬಂಗಾಳಕೊಲ್ಲಿ, ಆಂಧ್ರ ಪ್ರದೇಶದ ಕರಾವಳಿ, ಓಡಿಶಾ ಸೇರಿದಂತೆ ಈ ಭಾಗದಲ್ಲಿ ಅಕ್ಟೋಬರ್ 12ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications