Weather Report: ಈ ಭಾಗಗಳಲ್ಲಿ ಮುಂದಿನ 6 ದಿನ ಭಾರೀ ಮಳೆ ಮುನ್ಸೂಚನೆ
Weather Report: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ಚಳಿಗಾಲ ಆರಂಭವಾಗಿದೆ. ಇದರ ನಡುವೆಯೇ ಹಲವೆಡೆ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ 6 ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹವಾಮಾನ ಹೇಗಿರಲಿದ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಬಹುತೇಕ ರಾಜ್ಯಗಳಲ್ಲಿ ಮಂಜು ಕವಿದ ವಾತಾವರಣ, ಕೆಲವು ಭಾಗಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಲಿದೆ. ಇದರ ನಡುವೆಯೂ ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ.

ನವದೆಹಲಿಯ ಹವಾಮಾನದ ವಿವರ: ನವೆಂಬರ್ 17 ರಿಂದ 19ರ ವರೆಗೆ ನವದೆಹಲಿಯಲ್ಲಿ ಮಂಜು ಮುಚ್ಚಿದ ವಾತಾವರಣದ ಜೊತೆ ವಾಯುಮಲಿನ್ಯದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ವೇಳೆ ಹಿಮಾಲಯದ ತಪ್ಪಲಿನಲ್ಲಿ ದಟ್ಟವಾದ ಮಂಜು ಕವಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ.
ಪಂಜಾಬ್, ಹರಿಯಾಣ, ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ನವೆಂಬರ್ 18ರ ವರೆಗೆ, ಹಿಮಾಚಲ ಪ್ರದೇದ, ಸಿಕ್ಕಿಂನಲ್ಲಿ ನವೆಂಬರ್ 19ರ ವರೆಗೆ ಮಂಜಿನ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ. ಇನ್ನು ಚಳಿಗಾಲ ಆರಂಭವಾಗುತ್ತಿದ್ದಂತೆ ನವದೆಹಲಿಯಲ್ಲಿ ತಾಪಮಾನ ಪ್ರಮಾಣ ಕಡಿಮೆಯಾಗಿದ್ದು, ಬೆಳಗ್ಗೆ ಮಂಜು ಕವಿಯುತ್ತಿದ್ದು, ಸಂಜೆ ವೇಳೆಗೂ ಮಂಜಿನ ಜೊತೆಗೆ ರಣಭೀಕರ ಚಳಿ ಮುಂದುವರೆದಿದೆ.
ಚಳಿಗೆ ತತ್ತರಿಸಿದ ಜನ: ನವೆಂಬರ್ 21ರ ವರೆಗೂ ಪಂಜಾಬ್, ನವದೆಹಲಿ, ಉತ್ತರ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಾದ್ಯಂತ ತಾಪಮಾನ ಮತ್ತಷ್ಟು ಕುಸಿತವಾಗಲಿದ್ದು, ಭೀಕರ ಚಳಿಯ ವಾತಾವರಣ ಮುಂದುವರೆಯಲಿದೆ. ಹಾಗೆಯೇ ಕರಾವಳಿ ಒಡಿಶಾ ಮತ್ತು ಬಂಗಾಳ ಕೊಲ್ಲಿಯ ಸಮೀಪವಿರುವ ಪ್ರದೇಶಗಳಲ್ಲಿ ರಣಭೀಕರ ಚಳಿಯಿಂದ ಜನರು ತತ್ತರಿಸಿದ್ದಾರೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಭಾರೀ ಮಳೆ?: ಮುಂದಿನ 6 ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಇದೇ ವೇಳೆ ಆಂಧ್ರಪ್ರದೇಶ ಮತ್ತು ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ತಿಳಿಸಿದೆ.












Click it and Unblock the Notifications