ಹಿಮಾಚಲಪ್ರದೇಶದಲ್ಲಿ ಭಾರೀ ಮಳೆ, ಭೂ ಕುಸಿತಕ್ಕೆ ಕನಿಷ್ಠ 18 ಮಂದಿ ಸಾವು

ಶಿಮ್ಲಾ (ಹಿಮಾಚಲಪ್ರದೇಶ), ಆಗಸ್ಟ್ 18: ಹಿಮಾಚಲಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಮಳೆಗೆ ಸಂಬಂಧಿಸಿದ ಅವಘಡದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಶಾಲೆಗಳನ್ನು ಸೋಮವಾರ ತೆರೆಯದಿರಲು ಆದೇಶ ಹೊರಡಿಸಲಾಗಿದೆ.

ಇನ್ನು ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಗುಡುಗು- ಸಿಡಿಲು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಕುಲು ಭಾಗದ ಸರಕಾರಿ- ಖಾಸಗಿಯ ಎಲ್ಲ ಶಾಲೆ- ಕಾಲೇಜುಗಳಿಗೆ ಸೋಮವಾರದಂದು ರಜಾ ಘೋಷಣೆ ಮಾಡಲಾಗಿದೆ.

Himachal pradesh

ಶಿಮ್ಲಾದಲ್ಲಿ ಎಂಟು ಮಂದಿ ಸಾವನ್ನಪ್ಪಿದರೆ, ಕುಲು, ಸಿರ್ಮೌರ್, ಸೋಲನ್ ಹಾಗೂ ಚಂಬಾದಲ್ಲಿ ತಲಾ ಇಬ್ಬರು, ಉನಾ ಮತ್ತು ಲಹೌಲ್- ಸ್ಪಿಟಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಿಮ್ಲಾದಲ್ಲಿ ಇರುವ ಆರ್ ಟಿಒ ಕಚೇರಿ ಬಳಿಯೇ ಭೂ ಕುಸಿತ ಸಂಭವಿಸಿದ ಬಗ್ಗೆ ವರದಿ ಆಗಿದ್ದು, ಆ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+