Heavy Rain: ರಣಭೀಕರ ಮಳೆಯಿಂದ ಈ ವಿಮಾನ ನಿಲ್ದಾಣದೊಳಗೆ ಸೀಲಿಂಗ್ ಕುಸಿತ, ವಿಡಿಯೋ ಇಲ್ಲಿದೆ ನೋಡಿ
ಗುವಾಹಟಿ, ಏಪ್ರಿಲ್, 01: ಭೀಕರ ಬಿಸಿಲಿನ ನಡುವೆಯೂ ದೇಶದ ಉತ್ತರ ಭಾಗದ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇನ್ನು ಅಸ್ಸಾಂನ ಗುವಾಹಟಿಯಲ್ಲಿ ಸುರಿದ ಬಿರುಗಾಳಿ ಮಳೆಗೆ ಲೋಕಪ್ರಿಯ ಗೋಪಿನಾಥ ಬೋರ್ದಲೋಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕೆಲ ಭಾಗದ ಸೀಲಿಂಗ್ ಕುಸಿದಿದ್ದು, ಈ ವಿಡಿಯೋ ಇದೀಗ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.
ಈಗಾಗಲೇ ಹವಾಮಾನ ಇಲಾಖೆ ಮಾರ್ಚ್ ಅಂತ್ಯದ ವೇಳೆಗೆ ದೇಶದ ಉತ್ತರ ಭಾಗದ ಬಹುತೇಕ ಭಾಗಗಳಲ್ಲಿ ಅಬ್ಬರದ ಮಳೆಯಾಗಲಿದೆ ಎಂದು ಮುನ್ಸಚನೆ ನೀಡಿದೆ. ಅದರಂತೆಯೇ ಇದೀಗ ಅಸ್ಸಾಂನಲ್ಲಿ ಗುವಾಹಟಿಯಲ್ಲಿ ಭೀಕರ ಮಳೆಯಾದ ಪರಿಣಾಮ ಇಲ್ಲಿನ ಲೋಕಪ್ರಿಯ ಗೋಪಿನಾಥ ಬೋರ್ದಲೋಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಹಲವು ಭಾಗದ ಸೀಲಿಂಗ್ ಕುಸಿದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಪೈಪ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿದ್ದರಿಂದ ಸೀಲಿಂಗ್ ಕುಸಿದಿದ್ದು, ಈ ವೇಳೆ ಯಾರಿಗೂ ಯಾವುದೇ ಹಾನಿ ಆಗಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ಮಾಹಿತಿ ತಿಳಿಸಿವೆ. ಇನ್ನು ವಿಮಾನ ನಿಲ್ದಾಣದೊಳಗೆ ಸೀಲಿಂಗ್ ಕುಸಿದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
#WATCH | Assam: Visuals from Lokpriya Gopinath Bordoloi International Airport, in Guwahati where a portion of the ceiling collapsed due to heavy rainfall. pic.twitter.com/Ar3UB3IkfR
— ANI (@ANI) March 31, 2024
ಈ ವಿಡಿಯೊದಲ್ಲಿ ಹಲವು ಪ್ರಯಾಣಿಕರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ನಿಂತಿರುವುದನ್ನು ಕಾಣಬಹದಾಗಿದೆ. ದಿಢೀರ್ ಒಂದು ಭಾಗದ ಸೀಲಿಂಗ್ ಕುಸಿದಿದ್ದು, ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಮತ್ತೊಂದೆಡೆ ವಿಮಾನ ನಿಲ್ದಾಣದ ಒಳಗಡೆ ಮಳೆ ನೀರು ಬೀಳುತ್ತಿರುವ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆ ಆಗಿದೆ.
ಪ್ರತಿಕೂಲ ವಾತಾವರಣದ ಹಿನ್ನೆಲೆ ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೇರಿದಂತೆ ಒಟ್ಟು 6 ವಿಮಾನ ನಿಲ್ದಾಣಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಮಳೆ ಕುರಿತ ಅವಘಡಗಳಲ್ಲಿ ಈವರೆಗೆ ಐವರು ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications