Heat Wave in India: ಬಿಸಿ ಗಾಳಿಗೆ ಈವರೆಗೆ 24,000 ಜನ ಸಾವು, 2050ಕ್ಕೆ ಏನಾಗಲಿದೆ? ದೇಶದ ಭವಿಷ್ಯ ತಿಳಿಯಿರಿ
ನವದೆಹಲಿ ಏಪ್ರಿಲ್ 20: ಭಾರತದ ಉತ್ತರ ರಾಜ್ಯಗಳಲ್ಲಿ ಬಿಸಿ ಗಾಳಿ (Heat wave) ಅಬ್ಬರ ಕಡಿಮೆಯಾಗುವ ಲಕ್ಷಣಗಳು ಕಂಡು ಬಂದಿಲ್ಲ. ಈ ತಾಪಮಾನದಲ್ಲಿ ಉಂಟಾದ ಬದಲಾವಣೆಯು ಮಾರಣಾಂತಿಕವಾಗಿ ಕಾಡುತ್ತಿದೆ. ಇದರಿಂದ ದೇಶದ ಆರೋಗ್ಯ, ಅಭಿವೃದ್ಧಿಗೆ ಅಪಾಯ, ನಷ್ಟ ತಂದೊಡ್ಡುವ ಸಾಧ್ಯತೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.
ಹವಾಮಾನದಲ್ಲಿ ತೀವ್ರತರ ಬದಲಾವಣೆಗಳು ಮಾರಣಾಂತಿಕ ಶಾಖದ ಅಲೆಗಳನ್ನು ಸೃಷ್ಟಿಸಿದೆ. ಉತ್ತರ ಭಾರತದ ನವದೆಹಲಿ, ಓರಿಸ್ಸಾ, ಹರಿಯಾಣ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದ ಕಡೆಗಳಲ್ಲಿ ಜನರನ್ನು ಬೀಸಲು ಎಲ್ಲಿಲ್ಲದಂತೆ ಕಾಡುತ್ತಿದೆ.

ಶಾಖದ ಅಲೆಗಳು ಈಗಾಗಲೇ ದೇಶದ ಮೇಲೆ ವಿಮರ್ಶಾತ್ಮಕವಾಗಿ ಪರಿಣಾಮ ಬೀರಿದೆ. ಇದು ವಿದ್ಯುತ್ ಕಡಿತ, ಹೆಚ್ಚಿದ ಧೂಳು ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಬುಧವಾರ PLOS ಕ್ಲೈಮೇಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಬಿಸಿ ಗಾಳಿಯಿಂದ ಇದುವರೆಗೆ 24,000 ಮಂದಿ ಸಾವು
ಈ ರೀತಿಯ ಶಾಖದ ಅಲೆಗಳಿಂದ 1992ರಿಂದ ಇದುವರೆಗೆ 24,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಹವಾಮಾನ ಬಿಕ್ಕಟ್ಟಿನಿಂದಾಗಿ ಶಾಖದ ಅಲೆಗಳು ಆಗಾಗ್ಗೆ ಉಂಟಾಗುತ್ತವೆ. ಜನರ ಆರೋಗ್ಯ, ಪರಿಸರ ಸೇರಿದಂತೆ ದೇಶ ವಿವಿಧ ವಲಯಗಳ ಮೇಲೆ ತನ್ನದೇ ಆದ ರೀತಿಯಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತವು ದಸ್ಯ ಸಂಚಿತ ಹವಾಮಾನ ಅಪಾಯದ ಘರ್ಷಣೆಯನ್ನು ಎದುರಿಸುತ್ತಿದೆ. ಇನ್ನು2050 ರ ವೇಳೆಗೆ ಒಬ್ಬ ಮುನಷ್ಯ ನೆರಳಿದ್ದುಕೊಂಡು ವಿಶ್ರಾಂತಿ ಪಡೆಯಬಹುದಾದ ಆರೋಗ್ಯ ಕರ ವಾತಾವರಣಕ್ಕು ಸಂಚಕಾರ ತರುವ ಸಾಧ್ಯತೆ ಇದೆ. ದೇಶದ ಲಕ್ಷಾಂತರ ಜನರು ಭವಿಷ್ಯದಲ್ಲಿ ಸಂಭವಿಸುವ ಕಷ್ಟಕರ ಹವಾಮಾನ ಬದಲಾವಣೆಗೆ ಒಳಗಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧಿಕ ಬಿಸಿಲು
ಶಾಖದ ಸೂಚ್ಯಂಕದ ಪ್ರಕಾರ, ದೇಶದ ಶೇಕಡಾ 90% ಕ್ಕಿಂತ ಹೆಚ್ಚು ಜನರು ಮೇಲೆ ಶಾಖದ ಅಲೆಗಳು ಪರಿಣಾಮ ಬೀರಬಹುದು. ಏಷ್ಯಾದ ದೊಡ್ಡ ರಾಷ್ಟ್ರಗಳ ಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಕಳೆದ ವರ್ಷವು (2022) ಸಹ ಭಾರತವು ಇದೆ ಅವಧಿಯಲ್ಲಿ ಅಧಿಕ ಬಿಸಿ ಗಾಳಿ ವಾತಾವರಣೆವನ್ನು ದಾಖಲಿಸಿತ್ತು. ಅಂದು ಈ ಅವಧಿಯಲ್ಲಿ ದೇಶದ ಕೆಲವು ಭಾಗಗಳಲ್ಲಿ 49ಡಿಗ್ರಿ ಸೆಲ್ಸಿಯಸ್ ಆಸು ಪಾಸು ಉಷ್ಣಾಂಶ ದಾಖಲಾಗಿತ್ತು.
ಭಾರತ 2022ರಲ್ಲಿ 122 ವರ್ಷಗಳಲ್ಲೆ ಅತ್ಯಂತ ಬಿಸಿ ಹವಾಮಾನವನ್ನು ಏಪ್ರಿಲ್ ತಿಂಗಳಲ್ಲಿ ಅನುಭವಿಸಿತ್ತು. ಮಾರ್ಚ್ ವೇಳೆಯಲ್ಲೂ ಸಹ ಒಂದು ಹಂತಕ್ಕೆ ಬಿಸಿಲು ದಾಖಲಾಗಿತ್ತು ಎಂದು ಅಧ್ಯಯನ ತಿಳಿಸುತ್ತದೆ. 2022ರ ಜನವರಿ ಮತ್ತು ಅಕ್ಟೋಬರ್ ಮಧ್ಯದ ಕಾಲಘಟ್ಟದ 273 ದಿನಗಳಲ್ಲಿ ಬಹುತೇಕ 242 ದಿನಗಳಲ್ಲಿ ಬದುಕಿಗೆ ಪೂರಕವಲ್ಲದ ವಾರಾವರಣ ದಾಖಲಾಗಿದ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
2050ರ ವೇಳೆಗೆ ಜಿಡಿಪಿ ಕಡಿತ
ಮುಂದಿನ ವರ್ಷಗಳಲ್ಲಿ ತಾಪಮಾನ ಹೇಗಿರುತ್ತದೆ ಎಂದರೆ, 2050 ರ ಹೊತ್ತಿಗೆ ಹಗಲಿನಲ್ಲಿ ಹೊರಾಂಗಣ ಕೆಲಸದ ಪ್ರಮಾಣ ಶೇಕಡಾ 15 ಕಡಿಮೆಯಾಗಲಿದೆ. ಈ ರೀತಿಯ ಹೆಚ್ಚಾದ ಬಿಸಿ ಗಾಳಿಯಿಂದ ಭಾರತಕ್ಕೆ ಒಟ್ಟು ದೇಶೀಯ ಉತ್ಪನ್ನದ (GDP) 2050ರಲ್ಲಿ ವೇಳೆಗೆ ಶೇಕಡಾ 2.8% ಮತ್ತು 2100 ರ ವೇಳೆಗೆ ಶೇಕಡಾ 8.7% ಕಳೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಅಧ್ಯಯನವು ಬಹಿರಂಗ ಪಡಿಸಿದೆ.
ಬಿಸಿ ಗಾಳಿಯಿಂದ ಕಡು ಬಡವರು, ಕಡಿಮೆ ಆದಾಯ ಹೊಂದಿದ ಆರ್ಥಿಕ ದುರ್ಬಲರು ಹೆಚ್ಚು ಬಳಲುತ್ತಾರೆ. ಉದಾಹರಣೆ ನವದೆಹಲಿಯು ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜಧಾನಿಯಾಗಿದೆ. ಇಲ್ಲಿ ಭಾರಿ ಕಾಮಗಾರಿಗಳು ನಡೆಯುತ್ತವೆ. ಆದರೆ ಇಲ್ಲಿ ಹೆಚ್ಚಾಗಿ ಕಡಿಮೆ-ಆದಾಯದ ಕಾರ್ಮಿಕರು ಇದ್ದಾರೆ. ಅವರೆಲ್ಲ ಬಿಸಿ ಗಾಳಿಯಿಂದ ತತ್ತರಿಸುತ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.












Click it and Unblock the Notifications