ಜಾಗತಿಕ ರಣಬಿಸಿಲು ದುರಂತ ಪಟ್ಟಿಯಲ್ಲಿ ಭಾರತ 5th

ನವದೆಹಲಿ, ಮೇ 31: ಭಾರತದಲ್ಲಿ ರಣಬಿಸಿಲಿಗೆ ಸಾವನ್ನಪ್ಪಿರುವವರ ಸಂಖ್ಯೆ ಎರಡೂವರೆ ಸಾವಿರ ದಾಟುತ್ತಿದೆ. ಮುಂಗಾರುಮಳೆ ವಿಳಂಬದಿಂದಾಗಿ ಇನ್ನಷ್ಟು ಕಾಲ ಈ ಉರಿತಾಪವನ್ನು ಜನತೆ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಐದು ದಶಕಗಳ ಅವಧಿಯಲ್ಲಿ ಕಂಡರಿಯದ ಬಿಸಿಲಿನ ಬೇಗೆ ಈಗ ಜಾಗತಿಕ ದುರಂತ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನಕಲ್ಪಿಸಿದೆ.

ದೇಶದಲ್ಲೇ ಅತಿ ಹೆಚ್ಚಿನ ಪ್ರಕರಣಗಳು ಆಂಧ್ರ ಪ್ರದೇಶ 1636, ತೆಲಂಗಾಣ 541 ಜನ(ಕಳೆದ 24 ಗಂಟೆಗಳಲ್ಲಿ 52 ಜನ ಸಾವು), ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತಿತರ ನಾನಾ ಭಾಗಗಳಲ್ಲಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. [ಮುಂಗಾರು ಮಳೆರಾಯ ಸಮಯಕ್ಕೆ ಬಾರದೆ ಕೈಕೊಟ್ಟವ್ನೆ]

ಮಹಾರಾಷ್ಟ್ರದ ನಾಗಪುರ, ಆಂಧ್ರಪ್ರದೇಶದ ವಿಜಯವಾಡ ಅತಿಹೆಚ್ಚು ಪ್ರಖರ ಬಿಸಿಲು (ಸುಮಾರು 47-48 ಡಿಗ್ರಿ ಸೆಲ್ಸಿಯಸ್) ಸಹಿಸಿಕೊಂಡಿದೆ. ತೆಲಂಗಾಣದ ರಾಮಗುಂಡಂನಲ್ಲಿ ಸತತವಾಗಿ 47 ಡಿಗ್ರಿಯಂತೆ ಸೂರ್ಯನ ತಾಪ ಜನರನ್ನು ಸುಡುತ್ತಿದೆ. ಬಿಸಿಲಿಗೆ ಸಾವನ್ನಪ್ಪಿದವರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

Heat wave deaths in India 5th Deadliest in the Histroy : reports

ಬಿಸಿಲಿಗೆ ಮರಣ ಹೊಂದಿದವರ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ವಿಶ್ವದ ಐದನೇ ಸ್ಥಾನದಲ್ಲಿದೆ. ಭಾರತದಲ್ಲಿ ಎರಡನೇ ಬಾರಿಗೆ ಈ ರೀತಿ ಭಾರಿ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿದೆ.

ಬೆಲ್ಜಿಯಂನ ಇಎಂ ಡಿಎಟಿ ಅಂಕಿ-ಅಂಶಗಳ ಪ್ರಕಾರ ಟಾಪ್ 10 ಪಟ್ಟಿ:

* ಯುರೋಪ್, 2003 : 71,310 ಜನ ಸಾವು.
* ರಷ್ಯಾ, 2010: 55,376.
* ಯೂರೋಪ್, 2006: 3,418.
* ಭಾರತ, 1998: 2,541.
* ಭಾರತ, 2015: 2207+
* ಯುಎಸ್ ಹಾಗೂ ಕೆನಡಾ 1936: 1,693
* ಯುಎಸ್, 1980: 1,260
* ಭಾರತ, 2003:1,210
* ಭಾರತ, 2002:1,030
* ಗ್ರೀಸ್ ಹಾಗೂ ಟರ್ಕಿ:1,030

(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+