ಲಾಕ್ ಡೌನ್; ಟಿಬಿ ತಡೆಗಟ್ಟುವ ಔಷಧ ರಫ್ತಿಗೆ ನಿಷೇಧ
ನವದೆಹಲಿ, ಏಪ್ರಿಲ್ 22 : ಟಿಬಿ ತಡೆಗಟ್ಟುವ ಔಷಧಗಳ ರಫ್ತನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದಲ್ಲಿಯೇ ಔಷಧಗಳ ಪೂರೈಕೆಗೆ ತೊಂದರೆ ಉಂಟಾಗಿದೆ.
Recommended Video
ದೇಶದಲ್ಲಿ ಟಿಬಿ ತಡೆಗಟ್ಟುವ ಔಷಧಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ Macleods, Lupin ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿವೆ. ರಫ್ತು ನಿರ್ಬಂಧಿಸಿದರೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ ಎಂದು ಹೇಳಿವೆ.
ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗಿಗಳು ಕಡಿಮೆ ಇದ್ದಾರೆ. ಔಷಧಿ ತಯಾರು ಮಾಡಲು ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ವಿಳಂಬವಾಗುತ್ತಿದೆ. ಆದ್ದರಿಂದ, ತುರ್ತಾಗಿ ಔಷಧಗಳ ರಫ್ತನ್ನು ನಿಷೇಧಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಪತ್ರವನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಪ್ರೀತಿ ಸುಧಾನ್ ಔಷಧ ಮತ್ತು ವಾಣಿಜ್ಯ ಇಲಾಖೆಗೆ ಪತ್ರವೊಂದನ್ನು ಕಳಿಸಿದ್ದಾರೆ. ಟಿಬಿ ತಡೆಗಟ್ಟುವ ಔಷದಧ ರಫ್ತನ್ನು ನಿಷೇಧಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ ವಿವಿಧ ದೇಶಗಳಿಗೆ ಹಲವು ಔಷಧಿಗಳನ್ನು ರಫ್ತು ಮಾಡುತ್ತದೆ. ಇದರಲ್ಲಿ ಟಿಬಿ ಪ್ರತಿರೋಧಕ ಔಷಧವೂ ಸೇರಿದೆ. ಆದರೆ, ಈಗ ಲಾಕ್ ಡೌನ್ ಪರಿಣಾಮ ಔಷಧಿಗಳ ಉತ್ಪಾದನೆ ಕಡಿಮೆಯಾಗಿದೆ.












Click it and Unblock the Notifications