ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ ಶಿಕ್ಷೆ

By Mahesh
|
Google Oneindia Kannada News

ನವದೆಹಲಿ, ಮಾ.5: ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಐಎನ್‌ಎಲ್‌ಡಿ ಪಕ್ಷದ ಮುಖಂಡ ಓಂ ಪ್ರಕಾಶ್ ಚೌತಾಲಾ ಸೇರಿದಂತೆ 53 ಆರೋಪಿಗಳಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.

ಓಂ ಪ್ರಕಾಶ್ ಚೌತಾಲಾ ಜತೆಗೆ ಅವರ ಪುತ್ರ ಅಜಯ್ ಚೌತಾಲಾ ಸೇರಿದಂತೆ 53 ಮಂದಿ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. [ಲೈಂಗಿಕ ಕಿರುಕುಳ ಆರೋಪಿಗೆ ಮಾಜಿ ಸಿಎಂ ಬೆಂಬಲ]

ದೆಹಲಿಯ ತಿಹಾರ್ ಜೈಲಿನಲ್ಲಿರುವ ಓಂ ಪ್ರಕಾಶ್ ಚೌತಾಲಾ ಅವರ ಶಾಸಕ ಪುತ್ರ ಅಜಯ್ ಚೌತಾಲಾ ಜತೆಗೆ 53 ಮಂದಿ ಕೆಳಹಂತದ ಅಧಿಕಾರಿಗಳು 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಒಟ್ಟು 62 ಮಂದಿ ಆರೋಪ ಹೊರಿಸಲಾಗಿತ್ತು. ಅವರ ಪೈಕಿ 6 ಮಂದಿ ಅಸುನೀಗಿದ್ದಾರೆ. ಒಬ್ಬರನ್ನು ದೋಷಮುಕ್ತಗೊಳಿಸಲಾಗಿದೆ. ತಪ್ಪಿತಸ್ಥರ ಪಟ್ಟಿಯಲ್ಲಿ 16 ಮಂದಿ ಮಹಿಳೆಯರು ಇದ್ದರು. ಅಂದಿನ ಸಿಎಂ ಚೌತಾಲಾ ಸೇರಿದಂತೆ 53 ಮಂದಿಯ ವಿರುದ್ಧ ಆರೋಪ ಸಾಬೀತಾಗಿತ್ತು.

Delhi HC upholds 10-year jail term for Chautala, son

ನೇಮಕಾತಿ ಹಗರಣ: 1999-2000ದ ಅವಧಿಯಲ್ಲಿ ಹರ್ಯಾಣ ಸರ್ಕಾರ 3000 ಕಿರಿಯ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿತ್ತು. ಈ ನೇಮಕಾತಿಯಲ್ಲಿ ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆಸಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಲಾಗಿತ್ತು. ಅಂದಿನ ಐಎನ್‌ಎಲ್‌ಡಿ ನೇತೃತ್ವದ ಸರ್ಕಾರದ ಮುಖ್ಯಸ್ಥರಾಗಿದ್ದ ಚೌತಾಲಾ ಅವರ ಸ್ವಜನ ಪಕ್ಷಪಾತಕ್ಕೆ ಸಾಕಷ್ಟು ಪುರಾವೆ ಸಿಕ್ಕಿತ್ತು. [ಚೌತಾಲ ಮೊಮ್ಮಗ ಅತ್ಯಂತ ಕಿರಿಯ ಸಂಸದ]

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನೋದ್‌ಕುಮಾರ್ ಅವರು ಓಂ ಪ್ರಕಾಶ್ ಚೌತಾಲಾ, ಅಜಯ್ ಚೌತಾಲಾ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಸಂಜಯ್‌ಕುಮಾರ್, ನಿವೃತ್ತ ಅಧಿಕಾರಿ ವಿದ್ಯಾಧರ್, ಷಹರ್‌ಸಿಂಗ್, ಬದಸ್ಮಿ ಸೇರಿದಂತೆ 53 ಮಂದಿ ಅಧಿಕಾರಿಗಳಿಗೆ ಜೈಲುಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಓಂ ಪ್ರಕಾಶ್ ಚೌತಾಲಾ ಹಾಗೂ ಇತರೆ ಆರೋಪಿಗಳು ದೆಹಲಿ ಹೈಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಅದರೆ, ದೆಹಲಿ ಹೈಕೋರ್ಟ್ ಸಿಬಿಐ ನ್ಯಾಯಾಲಯದ ಆದೇಶವನ್ನು ಗುರುವಾರ ಎತ್ತಿಹಿಡಿದಿದೆ.

ಐಎಎನ್ ಎಸ್

English summary
The Delhi High Court on Thursday(Mar.5) upheld a 10-year jail term for former Haryana chief minister Om Prakash Chautala and his son Ajay Chautala in the 2000 illegal teacher recruitment scam in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X