ಹರ್ಯಾಣ : ಜಾನಪದ ಗಾಯಕಿ ಮಮತಾ ಬರ್ಬರವಾಗಿ ಹತ್ಯೆ
ಚಂಡೀಗಢ, ಜನವರಿ 19: ಜಾನಪದ ಗಾಯಕಿ ಮಮತಾ ಶರ್ಮ ಅವರು ತಮ್ಮ ಸ್ವಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
40 ವರ್ಷದ ಮಮತಾ ಶರ್ಮಾರ ಕತ್ತು ಸೀಳಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಮತಾ ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ಭರತ್ ಅವರು ಸೋಮವಾರದಂದು ದೂರು ದಾಖಲಿಸಿದ್ದರು. ಗುರುವಾರದಂದು ಬನಿಯಾನಿ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಜನವರಿ 14 ರಂದು ಗೋಹಾನಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಮತಾ ಶರ್ಮಾ, ತಮ್ಮ ಸಂಗಡಿಗ ಮೋಹಿತ್ ಕುಮಾರ್ ಎಂಬವರೊಂದಿಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಜನಪದ ಗಾಯಕಿ ಹರ್ಷಿತಾ ದಾಹಿಯಾ ಅವರು ಹರ್ಯಾಣದ ಪಾಣಿಪಟ್ ಜಿಲ್ಲೆಯಲ್ಲಿ ಅಪರಿಚಿತರಿಂದ ಹತ್ಯೆಗೀಡಾದ ಮೂರು ತಿಂಗಳ ನಂತರ ಈ ದುರ್ಘಟನೆ ನಡೆದಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ವಿರುದ್ಧ ವಿಪಕ್ಷಗಳಿಗೆ ಬಲವಾದ ಅಸ್ತ್ರ ದೊರೆತಿದೆ.












Click it and Unblock the Notifications