ಹಾರ್ದಿಕ್ ಪಟೇಲ್ ವಿಡಿಯೋ ಬಹಿರಂಗ, ಪಾಟಿದಾರ್ -ಬಿಜೆಪಿ ಕಿತ್ತಾಟ
ಅಹಮದಾಬಾದ್, ಡಿಸೆಂಬರ್ 07: ಗುಜರಾತ್ ಅಸೆಂಬ್ಲಿ ಚುನಾವಣೆ ಅಖಾಡದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳ ತುಲನೆಯಲ್ಲಿ ಎಲ್ಲರೂ ನಿರತರಾಗಿರುವಾಗ ಮತ್ತೊಮ್ಮೆ ಹಾರ್ದಿಕ್ ಪಟೇಲ್ ವಿಡಿಯೋಗಳು ಸೋರಿಕೆಯಾಗಿವೆ.
ಮೋದಿ ಹೊಗಳುವ ವಿಡಿಯೋ, ಮೋದಿ ತೆಗಳುವ ವಿಡಿಯೋಗಳ ಪೈಪೋಟಿ ನಡುವೆ ಹಾರ್ದಿಕ್ ಪಟೇಲ್ ವಿಡಿಯೋಗಳು ಜನಪ್ರಿಯತೆ ಗಳಿಸುತ್ತಿವೆ. ಹಾರ್ದಿಕ್ ಪಟೇಲ್ ಅವರು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಸೆಕ್ಸ್ ಸಿಡಿ ರಿಲೀಸ್ ಆಗಿತ್ತು.

ಓಖಿ ಚಂಡಮಾರುತದ ಭೀತಿ ತಗ್ಗಿದ ಬೆನ್ನಲ್ಲೇ ಪಾಟಿದಾರ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ಶುರುವಾಗಿದೆ.
ಈಗ ವೈರಲ್ ಆಗಿರೋ ಟೇಪ್ ನಲ್ಲಿ 5 ವಿಡಿಯೋ ಕ್ಲಿಪ್ ಗಳಿವೆ. ಹಾರ್ದಿಕ್ ಪಟೇಲ್ ಇಬ್ಬರು ಯುವತಿಯರ ಜೊತೆಗಿದ್ದಾರೆ. ಇನ್ನೊಂದರಲ್ಲಿ ಇಬ್ಬರು ಪುರುಷರು ಕೋಣೆಯ ಲೈಟ್ ಆರಿಸುವ ದೃಶ್ಯವಿದೆ. ಈ ಹಿಂದೆ ರಿಲೀಸ್ ಆಗಿದ್ದ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಅವರು ಯುವತಿಯರ ಜೊತೆಗಿರುವ ವೈರಲ್ ಆಗಿದೆ. ಇದು ಬಿಜೆಪಿ ಷಡ್ಯಂತ್ರ ಎಂದು ಹಾರ್ದಿಕ್ ಪಟೇಲ್ ಬೆಂಬಲಿಗರು ಆರೋಪಿಸಿದ್ದಾರೆ.












Click it and Unblock the Notifications