ಗೆಳೆಯನ ಬದಲಿಗೆ ಪರೀಕ್ಷೆಯಲ್ಲಿ ಜಾಗ; ಇದು 'Lover' ಮಾಡಿದ ತ್ಯಾಗ!
ಅಹ್ಮದಾಬಾದ್, ಡಿಸೆಂಬರ್ 26: ಈಗಿನ ಕಾಲದಲ್ಲಿ ಯುವಕ ಯುವತಿಯರು ತಮ್ಮ ಲವ್, ಇಷ್ಕ್, ಮೊಹೊಬ್ಬತ್ ಅಥವಾ ಪ್ರೀತಿಗಾಗಿ ಏನ್ ಬೇಕಾದ್ರೂ ಮಾಡುವುದಕ್ಕೆ ರೆಡಿ ಅನ್ನೋದನ್ನು ಇಲ್ಲೊಬ್ಬ ಮಹಿಳೆ ಪ್ರೂವ್ ಮಾಡಿದ್ದಾರೆ.
ಪ್ರೀತಿಸಿದ ಗೆಳೆಯನಿಗಾಗಿ ಮಹಿಳೆ ತೋರಿದ ಭಂಡಧೈರ್ಯಕ್ಕೆ ತಪ್ಪು ಕಂಡು ಹಿಡಿದ ಅಧಿಕಾರಿಗಳೇ ಕಕ್ಕಾಬಿಕ್ಕಿ ಆಗಿದ್ದಾರೆ. ಅಸಲಿಗೆ ಆಗಿದ್ದು ಇಷ್ಟೇ. ತನ್ನ ಗೆಳೆಯನಿಗೆ ಬೇರೆ ಕೆಲಸವಿದೆ ಎಂಬ ಕಾರಣಕ್ಕೆ ಆತನ ಬದಲಿಗೆ ಗೆಳತಿಯೇ ಪರೀಕ್ಷೆಗೆ ಅಟೆಂಡ್ ಆಗಿ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾಳೆ.
ಉತ್ತರಾಖಂಡದಲ್ಲಿ ವಿಹಾರಕ್ಕೆ ಬಂದಿದ್ದ ತನ್ನ ಗೆಳೆಯನಿಗೆ ಪರೀಕ್ಷೆ ಬರೆಯುವುದಕ್ಕೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಅವಳು ತನ್ನ ಗೆಳೆಯನ ಪರವಾಗಿ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿ ಪರೀಕ್ಷೆಯನ್ನು ಬರೆದಿದ್ದಳು. ಇಂಥದೊಂದು ಘಟನೆ ನಡೆದಿದ್ದು ಎಲ್ಲಿ, ಯಾಕೆ, ಯಾವಾಗ ಹಾಗೂ ಅದರ ರಿಸಲ್ಟ್ ಏನಾಗಿತ್ತು ಎಂಬುದರ ಕುತೂಹಲಕಾರಿ ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರವಿದೆ ಓದಿ.

ಗುಜರಾತಿನ ವಿಎನ್‌ಎಸ್‌ಜಿಯುನಲ್ಲಿ ಘಟನೆ:
ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ವೀರ್ ನರ್ಮದ್ ನಲ್ಲಿ (ವಿಎನ್‌ಎಸ್‌ಜಿಯು) ಈ ಘಟನೆ ನಡೆದಿದೆ. ಗೆಳೆಯನ ಪರವಾಗಿ ಪರೀಕ್ಷೆಗೆ ಹಾಜರ್ ಆಗಿರುವ ಯುವತಿ ಈಗ ಮುಂದಿನ ಮೂರು ವರ್ಷಗಳ ಪರೀಕ್ಷೆಗಳಿಂದ ಡಿಬಾರ್ ಆಗುವ ಸಾಧ್ಯತೆಯಿದೆ. ಆ ಮೂಲಕ ಗೆಳೆಯನಿಗೆ ಸಹಾಯ ಮಾಡುವುದಕ್ಕೆ ಹೋದ ಮಹಿಳೆಯು ಇದೀಗ ತನ್ನ ಪದವಿಯನ್ನೇ ಕಳೆದುಕೊಳ್ಳುವ ಅಪಾಯವನ್ನು ಎದುರಿಸುವಂತಾಗಿದೆ.

ಡಮ್ಮಿ ಅಭ್ಯರ್ಥಿಗೆ ಯಾವುದು ಗರಿಷ್ಠ ಶಿಕ್ಷೆ?:
"ಸಾಮಾನ್ಯವಾಗಿ ಡಮ್ಮಿ ಅಭ್ಯರ್ಥಿಗೆ ಕಠಿಣ ಶಿಕ್ಷೆ ಎಂದರೆ ಅವರ ಸ್ವಂತ ಪದವಿಯನ್ನು ರದ್ದುಗೊಳಿಸುವುದೇ ಆಗಿದೆ. ಈ ಗರಿಷ್ಠ ಶಿಕ್ಷೆಯನ್ನು ನೀಡಿದರೆ, ನಿಜವಾದ ವಿದ್ಯಾರ್ಥಿಯ ಹಿಂದಿನ ಫಲಿತಾಂಶಗಳನ್ನು ಮುಂದಿನ ಮೂರು ವರ್ಷಗಳವರೆಗೆ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ಡಿಬಾರ್ ಮಾಡಬಹುದು,"ಎಂದು FACT ಸಮಿತಿಯ ಸಂಚಾಲಕ ಸ್ನೇಹಲ್ ಜೋಶಿ ತಿಳಿಸಿದ್ದಾರೆ.












Click it and Unblock the Notifications