ಗುಜರಾತ್ ಚುನಾವಣೆ: ಕುಂತಲ್ಲೇ ಬಿಜೆಪಿಗೆ ಮೈಲೇಜ್ ತಂದು ಕೊಟ್ರಾ ಕಾಂಗ್ರೆಸ್ ಮುಖಂಡರು?

Posted By:
Subscribe to Oneindia Kannada
   ಮಣಿ ಶಂಕರ್ ಅಯ್ಯರ್ ಮೋದಿ ಬಗ್ಗೆ ನೀಡಿದ ನೀಚ್ ಆದ್ಮಿ ಹೇಳಿಕೆ ಬಿಜೆಪಿಗೆ ಲಾಭ

   ಗುಜರಾತ್ ಅಸೆಂಬ್ಲಿಗೆ ಮೊದಲ ಹಂತದ ಚುನಾವಣೆ ಶನಿವಾರ (ಡಿ 9) ನಡೆಯಲಿದೆ. ಮನೆಮನೆ ಪ್ರಚಾರಕ್ಕೆ ಗುರುವಾರ ತೆರೆಬಿದ್ದಿದೆ. ಆದರೇನಂತೆ, ಕಾಂಗ್ರೆಸ್ಸಿನ ಇಬ್ಬರು ಹಿರಿಯ ಮುಖಂಡರು ನೀಡಿದ ಹೇಳಿಕೆ, ಬಿಜೆಪಿಗೆ ಸಖತ್ ಮೈಲೇಜ್ ತಂದುಕೊಡುತ್ತಿದೆ ಎಂದೇ ಹೇಳಲಾಗುತ್ತಿದೆ.

   ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು

   ಮೋದಿ ಒಬ್ಬ ಹಿಂದೂನೇ ಅಲ್ಲ ಎನ್ನುವ ಹೇಳಿಕೆ ನೀಡಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಅಯೋಧ್ಯೆ ವಿಚಾರಣೆಯನ್ನು 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆ ನಂತರ ಮುಂದೂಡಬೇಕೆಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದರು.

   ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

   ಇದಾದ ನಂತರ ಗುರುವಾರ ಕಾಂಗ್ರೆಸ್ಸಿನ ಹಿರಿಯ ಮುಖಂಡ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು 'ಚಾಯ್ ವಾಲಾ' ಎಂದು ಅಪಹಾಸ್ಯ ಮಾಡಿದ್ದ ಮಣಿಶಂಕರ್ ಅಯ್ಯರ್, ಮೋದಿಯೊಬ್ಬ 'ನೀಚ' ಎನ್ನುವ ಹೇಳಿಕೆಯನ್ನು ನೀಡಿ ವ್ಯಾಪಕ ಟೀಕೆಗೊಳಗಾಗಿದ್ದಾರೆ.

   ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!

   ಗುಜರಾತ್ ಚುನಾವಣೆಯ ಹೊಸ್ತಿಲಲ್ಲಿ 'ನೀಚ' ಎನ್ನುವ ಹೇಳಿಕೆ, ಬಿಜೆಪಿಗೆ ಇನ್ನಷ್ಟು ಮತವನ್ನು ತಂದುಕೊಡುವ ಸಾಧ್ಯತೆಯಿಲ್ಲದಿಲ್ಲ. ಗುಜರಾತಿನ ಎರಡನೇ ಹಂತದ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ, ಇದನ್ನು ಇಟ್ಟುಕೊಂಡು ಕಾಂಗ್ರೆಸ್ಸನ್ನು ಇನ್ನಷ್ಟು ರುಬ್ಬುವ ಸಾಧ್ಯತೆಯನ್ನು ಅರಿತ ಕಾಂಗ್ರೆಸ್, ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದೆ.

   ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷಕ್ಕಾಗಬಹುದಾದ ಡ್ಯಾಮೇಜ್ ಅನ್ನು ಅರಿತು ಕಾಂಗ್ರೆಸ್ ಅಯ್ಯರ್ ಅವರನ್ನು ಅಮಾನತು ಮಾಡಿದ್ದರೂ, ಬಿಜೆಪಿ ಮುಖಂಡರು ಇನ್ನೂ ಸ್ವಲ್ಪದಿನ ಈ ಹೇಳಿಕೆಯನ್ನು ಜೀವಂತವಾಗಿರಿಸದೇ ಇರಲಾರರು. ಯಾಕೆಂದರೆ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಲ್ಲವೇ... ಮುಂದೆ ಓದಿ..

   ಮೌತ್ ಕೀ ಸೌದಾಗರ್, ಚಾಯ್ ವಾಲಾ

   ಮೌತ್ ಕೀ ಸೌದಾಗರ್, ಚಾಯ್ ವಾಲಾ

   2014ರ ಲೋಕಸಭಾ ಚುನಾವಣೆಯ ವೇಳೆ, ಸೋನಿಯಾ ಗಾಂಧಿ, ಮೋದಿಯವರನ್ನು 'ಮೌತ್ ಕೀ ಸೌದಾಗರ್' ಎಂದು ಟೀಕಿಸಿದ್ದರು. ಮಣಿಶಂಕರ್ ಅಯ್ಯರ್, ಮೋದಿ 'ಚಾಯ್ ವಾಲಾ' ಎಂದಿದ್ದರು. ವಾಜಪೇಯಿಯಂತಹ ಹಿರಿಯ ಮುತ್ಸದ್ದಿಯನ್ನು ಅಯ್ಯರ್ 'ನಾಲಾಯಕ್' ಅಂದಿದ್ದರು. ಈಗ, ಮಣಿಶಂಕರ್ ಅಯ್ಯರ್ ಮತ್ತು ಕಪಿಲ್ ಸಿಬಲ್ ನೀಡಿದ ಹೇಳಿಕೆ ಪಕ್ಷಕ್ಕೆ ಮತ್ತೆ ಭಾರೀ ಮುಜುಗರವನ್ನು ತಂದೊಡ್ಡಿದೆ.

   ಬಿಜೆಪಿಗೆ ತನ್ ತಾನಾಗಿಯೇ ನೂರಾರು ವೋಟು

   ಬಿಜೆಪಿಗೆ ತನ್ ತಾನಾಗಿಯೇ ನೂರಾರು ವೋಟು

   ಬಿಜೆಪಿಯ ವಿರುದ್ದವಾಗಿಯೇ ತಮ್ಮನ್ನು ಗುರುತಿಸಿಕೊಂಡಿರುವ ಪತ್ರಕರ್ತರಾದ ಸಾಗರಿಕ ಘೋಷ್, ರಾಹುಲ್ ಕನ್ವಲ್ ಅವರು ಅಭಿಪ್ರಾಯ ಪಡುವಂತೆ, ಬಿಜೆಪಿಗೆ ಮಣಿಶಂಕರ್ ಅಯ್ಯರ್ ಅವರ ಹೇಳಿಕೆ ಗುಜರಾತ್ ಚುನಾವಣೆಯಲ್ಲಿ ಇನ್ನಷ್ಟು ವೋಟ್ ತಂದುಕೊಡುವುದು ಗ್ಯಾರಂಟಿ.. ಅಯ್ಯರ್ ಒಂದೊಂದು ನಿಮಿಷ ಮಾತನಾಡಿದರೂ, ಬಿಜೆಪಿಗೆ ತನ್ ತಾನಾಗಿಯೇ ನೂರಾರು ವೋಟು ಬಂದು ಬೀಳುತ್ತದೆ ಎನ್ನುವ ರಾಹುಲ್ ಕನ್ವಲ್ ಅವರ ಟ್ವೀಟ್.

   ಕಾಂಗ್ರೆಸ್ ಅನ್ನು ಮುಗಿಸಲು ಅವರ ಪಕ್ಷದಲ್ಲೇ ಇದ್ದಾರಲ್ಲಾ

   ಕಾಂಗ್ರೆಸ್ ಪಕ್ಷ ಬಿಜೆಪಿ ತನ್ನ ವಿರೋಧಿಯೆಂದು ಯಾಕೆ ಪರಿಗಣಿಸಬೇಕು? ಕಾಂಗ್ರೆಸ್ ಅನ್ನು ಮುಗಿಸಲು ಅವರ ಪಕ್ಷದಲ್ಲೇ ಇದ್ದಾರಲ್ಲಾ ಎನ್ನುವ ಸಾಗರಿಕಾ ಘೋಷ್ ಅವರ ರಿಪ್ಲೈ

   ರಾಜ್ಯಸಭಾ ಸದಸ್ಯತ್ವ ನೀಡಿದ್ದ ಕಾಂಗ್ರೆಸ್

   ರಾಜ್ಯಸಭಾ ಸದಸ್ಯತ್ವ ನೀಡಿದ್ದ ಕಾಂಗ್ರೆಸ್

   ಈ ಹಿಂದೆ ಚಾಯ್ ವಾಲಾ ಎಂದ ಮಣಿಶಂಕರ್ ಅಯ್ಯರ್ ಅವರಿಗೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯತ್ವ ನೀಡಿತು. ಅಯ್ಯರ್ ಅವರಿಂದ ಕಾಂಗ್ರೆಸ್ಸಿಗೆ ಏನೂ ಲಾಭವಿಲ್ಲದಿದ್ದರೂ, ಅವರು ಆಡಿದ ಎರಡು ಮಾತು, ಬಿಜೆಪಿಗೆ ಇನ್ನಷ್ಟು ಮತವನ್ನು ಗಳಿಸಲು ಸಹಾಯವಾಯಿತು.

   ರಿಪಬ್ಲಿಕ್ ಟಿವಿಯ ಮೈಕ್ ಅನ್ನು ಕಿತ್ತೊಗೆದ ಅಯ್ಯರ್

   ರಿಪಬ್ಲಿಕ್ ಟಿವಿಯ ಮೈಕ್ ಅನ್ನು ಕಿತ್ತೊಗೆದ ಅಯ್ಯರ್

   ನೀಚ ಪದ ಪ್ರಯೋಗದ ಜೊತೆಗೆ ರಿಪಬ್ಲಿಕ್ ಟಿವಿಯ ಮೈಕ್ ಅನ್ನು ಕಿತ್ತೊಗೆದದ್ದಕ್ಕೂ ಮಣಿಶಂಕರ್ ಅಯ್ಯರ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಅಯ್ಯರ್ ಅವರನ್ನು ಅಮಾನತು ಮಾಡಿದ್ದು ನೀಚ ಎನ್ನುವ ಪದ ಬಳಸಿದ್ದಕ್ಕಲ್ಲ, ಬದಲಿಗೆ ರಾಹುಲ್ ಹೇಳಿದ ಮೇಲೂ ಕ್ಷಮೆಯಾಚಿಸಲು ನಿರಾಕರಿಸಿದ್ದಕ್ಕಾಗಿ ಎನ್ನುವ ಟ್ವೀಟ್.

   ಎಐಸಿಸಿಯ ಅಧ್ಯಕ್ಷರಾಗಿ ಸರಿಯಾಗಿ ಕೆಲಸ ನಿರ್ವಹಿಸದೇ ಇರಲಿ ಅನ್ನೋ ಉದ್ದೇಶ

   ಎಐಸಿಸಿಯ ಅಧ್ಯಕ್ಷರಾಗಿ ಸರಿಯಾಗಿ ಕೆಲಸ ನಿರ್ವಹಿಸದೇ ಇರಲಿ ಅನ್ನೋ ಉದ್ದೇಶ

   ರಿಪಬ್ಲಿಕ್ ಟಿವಿಯ ಮೈಕ್ ಅನ್ನು ಅಯ್ಯರ್ ಎಳೆಯುತ್ತಿರುವ ದೃಶ್ಯ ಮತ್ತು ಅಯ್ಯರ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊರೆ, ರಾಹುಲ್ ಗಾಂಧಿ ಎಐಸಿಸಿಯ ಅಧ್ಯಕ್ಷರಾಗಿ ಸರಿಯಾಗಿ ಕೆಲಸ ನಿರ್ವಹಿಸದೇ ಇರಲಿ ಎಂದು ಅಯ್ಯರ್ ತೊಂದರೆ ಕೊಡುತ್ತಿದ್ದಾರೆ ಎನ್ನುವ ಟ್ವೀಟ್.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Just hours to go before the campaigning for the first phase of polling for the Gujarat Assembly concluded on Thursday (Dec 7) has senior Congress leader Mani Shankar Aiyar handed BJP a victory by making 'Neech' comment on Prime Minister Narendra Modi?

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ