ಏಕದಿನ ವಿಶ್ವಕಪ್‌ಗೆ ಅಡ್ಡಿಪಡಿಸುವ ಬೆದರಿಕೆ: ಖಲಿಸ್ತಾನಿ ಉಗ್ರನ ವಿರುದ್ಧ ಎಫ್‌ಐಆರ್ ದಾಖಲು

ಐಸಿಸಿ ವಿಶ್ವಕಪ್‌ಗೆ ವಿಶೇಷವಾಗಿ ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆ ಹಾಕಿದ್ದ ಖಲಿಸ್ತಾನಿ ಭಯೋತ್ಪಾದಕ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲಾಗಿದೆ. ಗುಜರಾತ್ ಪೊಲೀಸ್‌ನ ಸೈಬರ್ ಕ್ರೈಂ ಬ್ರಾಂಚ್ ಪನ್ನುನ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿತ್ತು.

gujarat-police-lodge-fir-against-pannun

ಘಟನೆ ಬಗ್ಗೆ ಸೈಬರ್ ಕ್ರೈಂನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, "ದ್ವೇಷ ಮತ್ತು ಭಯೋತ್ಪಾದನೆಯನ್ನು ಹರಡಲು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷವನ್ನು ಹರಡುತ್ತಿರುವ ಕಾರಣ ನಾವು ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ." ಎಂದು ಖಚಿತಪಡಿಸಿದ್ದಾರೆ.

ಬೆದರಿಕೆ ಪ್ರಕರಣ

ಪನ್ನುನ್ ಹಲವಾರು ಪ್ರಮುಖ ವ್ಯಕ್ತಿಗಳಿಗೆ ಕರೆ ಮಾಡಿ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಅವರು ದೇಶದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅದನ್ನು ಗಮನದಲ್ಲಿಟ್ಟುಕೊಂಡು ನಾವು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಸೈಬರ್ ಕ್ರೈಂ ಅಧಿಕಾರಿ ಹೇಳಿದ್ದಾರೆ.

ಗುರುವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಹಲವಾರು ಜನರು ಯುಕೆ ಫೋನ್ ಸಂಖ್ಯೆ +44 7418 343648 ನಿಂದ ಕರೆಗಳನ್ನು ಸ್ವೀಕರಿಸಿದ್ದಾರೆ, ಇದರಲ್ಲಿ ಪನ್ನುನ್ ಮೊದಲೇ ರೆಕಾರ್ಡ್ ಮಾಡಿದ ಆಡಿಯೊ ಸಂದೇಶವನ್ನು ಪ್ಲೇ ಮಾಡಿದ್ದಾರೆ. ಪನ್ನುವಿನ ಬೆದರಿಕೆ ಕರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರು ಐಪಿಸಿಯ ಸೆಕ್ಷನ್ 121 ಎ, 153 ಎ, 153 ಬಿ (1) (ಸಿ), 505 (1) ಬಿ, ಐಟಿ ಕಾಯ್ದೆಯ ಸೆಕ್ಷನ್ 66 ಎಫ್ ಮತ್ತು ಸೆಕ್ಷನ್ 16 (1) (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಸ್ತಿ ವಶಪಡಿಸಿಕೊಂಡ ಎನ್‌ಐಎ

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಚಂಡೀಗಢ ಮತ್ತು ಅಮೃತಸರದಲ್ಲಿ ಪನ್ನುನ್ ಅವರ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಂಡಿದೆ, ಇದರಲ್ಲಿ ಅಮೃತಸರದ ಬಳಿಯ ಖಾನ್ ಕೋಟ್ ಗ್ರಾಮದಲ್ಲಿ 46 ಕನಾಲ್ (ಅಂದಾಜು 5.7 ಎಕರೆ) ಅಳತೆಯ ಕೃಷಿ ಭೂಮಿ ಮತ್ತು ಚಂಡೀಗಢದ ಮನೆ ಕೂಡ ಸೇರಿದೆ.

ಈ ಕ್ರಮದಿಂದ ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಜಾಲಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಂದೇಶವನ್ನು ನೀಡಲಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೊಹಾಲಿಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆನಡಾದಲ್ಲಿ ನೆಲೆಸಿರುವ ಪನ್ನೂನ್ ಭಾರತದಲ್ಲಿನ ಕಾನೂನುಬಾಹಿರ ಸಂಘಟನೆಯಾದ ಎಸ್‌ಎಫ್‌ಜೆನ ಮುಖ್ಯಸ್ಥರಾಗಿದ್ದಾರೆ. 2020ರಲ್ಲಿ ಆತನನ್ನು ವಾಂಟೆಡ್ ಭಯೋತ್ಪಾದಕ ಎಂದು ಗುರುತಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+