ಗುಜರಾತ್ ರಾಜ್ಯಪಾಲೆ ಮಿಜೋರಾಂಗೆ ವರ್ಗಾವಣೆ
ನವದೆಹಲಿ, ಜು.7: ಗುಜರಾತ್ ರಾಜ್ಯಪಾಲೆ ಕಮಲಾ ಬೇನಿವಾಲ್ ಅವರು ಮಿಜೋರಂಗೆ ವರ್ಗಾವಣೆಯಾಗಿದ್ದಾರೆ. ರಾಷ್ಟ್ರಪತಿ ಭವನ ಈ ಕುರಿತು ಪ್ರಕಟಣೆ ಹೊರಡಿಸಿದ್ದು ಹಾಲಿ ರಾಜಸ್ಥಾನದ ರಾಜ್ಯಪಾಲೆಯಾಗಿರುವ ಮಾರ್ಗರೆಟ್ ಅಳ್ವರ ಅವರಿಗೆ ಗುಜರಾತ್ ಹೆಚ್ಚುವರಿ ಹೊಣೆ ನೀಡಲಾಗಿದೆ.
ಮಿಜೋರಂ ರಾಜ್ಯಪಾಲರಾಗಿದ್ದ ವಕ್ಕೋ ಪುರುಷೋತ್ತಮನ್ ಅವರನ್ನು ನಾಗಲ್ಯಾಂಡ್‌ನ ರಾಜ್ಯಪಾಲರಾಗಿ ವರ್ಗಾವಣೆಯಾಗಿದ್ದಾರೆ. ವಕ್ಕೋ ಪುರುಷೋತ್ತಮನ್ ಅವರಿಗೆ ಹೆಚ್ಚುವರಿಯಾಗಿ ತ್ರಿಪುರ ರಾಜ್ಯದ ಹೊಣೆಯನ್ನು ನೀಡಲಾಗಿದೆ.

87 ವರ್ಷದ ಕಮಲಾ ಬೇನಿವಾಲರ ಅವಧಿ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತರನ್ನು ನೇಮಿಸುವ ವೇಳೆ ಮೋದಿ ಅಭಿಪ್ರಾಯವನ್ನು ಕೇಳದೇ ನೇರವಾಗಿ ನಿರ್ಧಾರ ಕೈಗೊಂಡಿದ್ದರು. ಲೋಕಾಯುಕ್ತ ನೇಮಕಗೊಳಿಸಿದ್ದಕ್ಕೆ ಬೇನಿವಾಲ್ ಹಾಗೂ ಮೋದಿ ಮಧ್ಯೆ ಜಟಾಪಟಿ ನಡೆದಿತ್ತು.[ಪ್ರತಿಷ್ಠೆಯ ಕಾದಾಟ:ಸೊರಗುತ್ತಿರುವ ಲೋಕಾಯುಕ್ತ ಹುದ್ದೆ]
ಕರ್ನಾಟಕ ರಾಜ್ಯಪಾಲರಾಗಿ ಸೋಲಿ ಸೊರಾಬ್ಜಿ? ಹಂಸರಾಜ್ ಭಾರದ್ವಾಜ್ ಅವರ ನಿವೃತ್ತಿಯಿಂದ ತೆರವಾಗಿರುವ ಕರ್ನಾಟಕ ರಾಜ್ಯಪಾಲರ ಹುದ್ದೆಗೆ ದೇಶದ ಪ್ರಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ನೇಮಕವಾಗುವ ಸಾಧ್ಯತೆಯಿದೆ. ಶುಕ್ರವಾರ ರಾತ್ರಿ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸೊಲಿ ಸೊರಾಬ್ಜಿ ಸೇರಿದಂತೆ ಏಳು ಜನರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications