ಗುಜರಾತ್ ನ 6 ಮತಗಟ್ಟೆಗಳಲ್ಲಿ ನಿಧಾನಗತಿಯ ಮರು ಮತದಾನ
ಅಹಮದಾಬಾದ್, ಡಿಸೆಂಬರ್ 17: ವಡ್ಗಾಮ್, ವೀರಂಗಂ, ದಸ್ಕ್ರೋಯ್ ಮತ್ತು ಸಾವ್ಲಿ ಕ್ಷೇತ್ರಗಳ 6 ಮತಗಟ್ಟೆಗಳಲ್ಲಿ ಇಂದು ಮರು ಮತದಾನ ನಡೆಯುತ್ತಿದೆ.
ಈ ಕ್ಷೇತ್ರಗಳಲ್ಲಿ ಡಿಸೆಂಬರ್ 9ರಂದು ಮೊದಲ ಹಂತದ ವೇಳೆ ಮತದಾನ ನಡೆದಿತ್ತು. ಆದರೆ ಮತಪೆಟ್ಟಿಗೆಗಳಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಇಂದು ಮರು ಮತದಾನ ನಡೆಯುತ್ತಿದೆ. ಇದರಲ್ಲಿ ವಡ್ಗಾಮ್ ಎಸ್.ಸಿ ಮೀಸಲು ಕ್ಷೇತ್ರವಾಗಿದೆ.

ಗುರುವಾರದಂದು ಜಾಮ್ ಜೋಧ್ ಪುರ ವಿಧಾನಸಭೆ ಕ್ಷೇತ್ರದ ಧುಂಡಾ, ಮನ್ಪಾರ್, ಊನ ಕ್ಷೇತ್ರದ ಬಂಧರ್ದ ಮತ್ತು ಗಂಗ್ಡ, ನಿಝಾರ್ ಕ್ಷೇತ್ರದ ಚೋರ್ವಾಡ್ , ಉಮರ್ಗಾನ್ ಕ್ಷೇತ್ರದ ಚನೋದ್ ಮತ್ತು ಚನೋದ್ ಕಾಲನಿಯಲ್ಲಿ ಮರು ಮತದಾನ ನಡೆದಿತ್ತು.
ಗುಜರಾತ್ ನಲ್ಲಿ ಡಿಸೆಂಬರ್ 14ರಂದು ಎರಡನೇ ಹಂತದ ಮತದಾನ ಪೂರ್ಣಗೊಂಡಿದ್ದು ಶೇಕಡಾ 68.7 ಮತದಾನವಾಗಿತ್ತು. ಸೋಮವಾರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಒಟ್ಟಾಗಿ ಹೊರ ಬೀಳಲಿದೆ.












Click it and Unblock the Notifications