Gujarat Election Results 2022: 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಅಹಮದಾಬಾದ್, ಡಿ. 08: ಬೆಳಗ್ಗೆ 9 ಗಂಟೆಗೆ ಬಿಜೆಪಿಯು 100 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆಯನ್ನು ಸಾಧಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬಹುಮತದ ಸಂಖ್ಯೆ 92 ಅನ್ನು ದಾಟಿದೆ.
ಆದರೆ ಇವು ಕೇವಲ ಆರಂಭಿಕ ಮುನ್ನಡೆಯಾಗಿದೆ. ಈ ಆರಂಭಿಕ ಮುನ್ನಡೆ ಮತ ಎಣಿಕೆ ಹೆಚ್ಚಾದ ಹಾಗೆ ಬದಲಾಗುತ್ತದೆ. ಅಂರತಿಮ ಫಲಿತಾಂಶದವರೆಗೂ ಗೆಲುವು ನಿರ್ಧರಿಸಲು ಸಾಧ್ಯವಾಗುವುದಿಲ್ಲ.
ಮತ್ತೆ ಗುಜರಾತ್ ಅಧಿಕಾರ ಹಿಡಿಯುವ ಹಂಬಲದಲ್ಲಿ ಬಿಜೆಪಿ
ಇನ್ನು, 43 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಎಎಪಿ ಎರಡಂಕಿಯ ಸೀಟುಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಆಮ್ ಆದ್ಮಿ ಪಕ್ಷವು ಗುಜರಾತ್ ಚುನಾವಣೆ 2022 ರಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬುಧವಾರ 2022 ರ ಎಂಸಿಡಿ ಚುನಾವಣೆಯನ್ನು ಗೆದ್ದು ಬೀಗುತ್ತಿರುವ ಆಪ್ ಪಕ್ಷ ಗುಜರಾತ್ ಚುನಾವಣೆಯಲ್ಲಿಯೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ.
ಕಳೆದ 27 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಕಣ್ಣಿದೆ. ಈ ಬಾರಿಯು ಬಿಜೆಪಿ ಅಧಿಕಾರ ಪಡೆದರೇ ಸತತ 7ನೇ ಬಾರಿಗೆ ಅಧಿಕಾರ ಹಿಡಿಯಲಿದೆ .
ಗುಜರಾತ್ ವಿಧಾನಸಭೆ ಚುನಾವಣೆಗೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. 182 ಸದಸ್ಯ ಬಲದ ವಿಧಾನಸಭೆಗೆ ಇಂದು ಮತ ಎಣಿಕೆ ನಡೆಯುತ್ತಿದ್ದು, ಮುಗಿದ ಕೂಡಲೇ ಚುನಾವಣಾ ಫಲಿತಾಂಶ 2022 ಪ್ರಕಟವಾಗಲಿದೆ. ಗುಜರಾತ್ ವಿಧಾನಸಭೆ ಚುನಾವಣೆ 2022 ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವಿನ ಹೋರಾಟವಾಗಿದೆ.
ಗುಜರಾತ್ 27 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿ ಎಎಪಿ ಬಿಜೆಪಿ ಭದ್ರಕೋಟೆಯಲ್ಲಿ ಹೆಜ್ಜೆ ಹಾಕಲು ಮತ್ತು ಬಿಜೆಪಿಗೆ ಪರ್ಯಾಯವಾಗಿ ಹೊರಹೊಮ್ಮಲು ಶ್ರಮಿಸುತ್ತಿದೆ. ಕಾಂಗ್ರೆಸ್ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಬಯಸುತ್ತಿದೆ ಎಂದು ವರದಿಯಾಗುತ್ತಿವೆ.
ಚುನಾವಣಾ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಗುಜರಾತ್ ಚುನಾವಣಾ ಫಲಿತಾಂಶ 2022 ಇಂದು ಸಂಜೆ ಪ್ರಕಟವಾಗಲಿದೆ.












Click it and Unblock the Notifications