Gujarat Election Results 2022: 19,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಹಾರ್ದಿಕ್ ಪಟೇಲ್ ಗೆಲುವು
ಅಹಮದಾಬಾದ್, ಡಿ. 08: ಬಿಜೆಪಿ ನಾಯಕ ಹಾರ್ದಿಕ್ ಪಟೇಲ್ 19,000 ಕ್ಕೂ ಹೆಚ್ಚು ಮತಗಳ ಅಂತರದಿಂದ ವಿರಾಮ್‌ಗಮ್ ವಿಧಾನಸಭಾ ಸ್ಥಾನದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
28 ವರ್ಷದ ನಾಯಕ ಹಾರ್ದಿಕ್ ಪಟೇಲ್ 2015 ರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪಾಟಿದಾರ್ ಕೋಟಾಗಾಗಿ ಹೋರಾಟ ನಡೆಸಿ ಮುನ್ನಲೆಗೆ ಬಂದಿದ್ದರು. ಇತರ ಹಿಂದುಳಿದ ವರ್ಗ (ಒಬಿಸಿ) ಸ್ಥಾನಮಾನ ಮತ್ತು ಪಾಟಿದಾರ ಸಮುದಾಯಕ್ಕೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿ ಆಂದೋಲನ ನಡೆಸಿದ್ದರು.
Recommended Video
2019 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾಗಿ, ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆ ಎದುರಿಸಿದ್ದರು.

ಹಾರ್ದಿಕ್ ಪಟೇಲ್ ಅವರು ಒಬಿಸಿ ಅಭ್ಯರ್ಥಿ ಮತ್ತು ವಿರಾಮಗಾಮ್‌ನಿಂದ ಎರಡು ಅವಧಿಗೆ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಲಖಾ ಭಾರವಾಡ್ ಮತ್ತು ವಿರಾಮ್‌ಗಮ್‌ನ ಅತ್ಯಂತ ಪ್ರಬಲ ಸಮುದಾಯದಿಂದ ಬಂದ ಎಎಪಿ ಅಮರಸಿಂಹ ಠಾಕೋರ್ ವಿರುದ್ಧ ಸ್ಪರ್ಧಿಸಿದ್ದರು. ಈಗ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿ ಏಳನೇ ಅವಧಿಗೆ ಅಧಿಕಾರ ಹಿಡಿಯಲಿದೆ.

ಗುಜರಾತ್‌ನಲ್ಲಿ ಕಳೆದ 20 ವರ್ಷಗಳಲ್ಲಿ ಇಲ್ಲಿ ಯಾವುದೇ ಗಲಭೆಗಳು, ಭಯೋತ್ಪಾದಕ ದಾಳಿಗಳು ನಡೆದಿಲ್ಲ. ಬಿಜೆಪಿ ಜನರ ನಿರೀಕ್ಷೆಗಳನ್ನು ಪೂರೈಸಿದ್ದು, ರಾಜ್ಯದಲ್ಲಿ "ಉತ್ತಮ ಆಡಳಿತ" ನೀಡಿದ್ದರಿಂದ ಜನರು ತಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಹಾರ್ದಿಕ್ ಪಟೇಲ್ ಈ ಹಿಂದೆ ಹೇಳಿದ್ದರು.












Click it and Unblock the Notifications