Gujarat Election Result 2022 : 32 ವರ್ಷಗಳಿಂದ ಸೋಲನ್ನೇ ಕಂಡಿಲ್ಲದ ಬಿಜೆಪಿ ಶಾಸಕನಿಗೆ ಈ ಬಾರಿಯೂ ಮುನ್ನಡೆ

ಗಾಂಧಿನಗರ, ಡಿಸೆಂಬರ್ 8: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 7ನೇ ಬಾರಿ ಸರ್ಕಾರ ರಚಿಸುವತ್ತ ಮುನ್ನಡೆದಿದೆ. 12 ಗಂಟೆಯ ವೇಳೆಗೆ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಆದರೆ, ಈ ಶಾಸಕ ಮಾತ್ರ ಕಳೆದ 32 ವರ್ಷಗಳಲ್ಲಿ ಒಮ್ಮೆಯೂ ಸೋಲು ಕಂಡಿಲ್ಲ, ಸತತವಾಗಿ 7 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಇವರು ಈಗ 8ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ಪಬುಭಾ ಮಾಣೆಕ್ 1990ರಿಂದ ದ್ವಾರಕಾ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, 7 ಬಾರಿಯೂ ಗೆಲುವು ಸಾಧಿಸಿದ್ದು, ಈ ಬಾರಿಯೂ ಮುನ್ನಡೆ ಸಾಧಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಅವರು 17,000 ಮತಗಳ ಅಂತರದಲ್ಲು ಭರ್ಜರಿ ಮುನ್ನಡೆ ಸಾಧಿಸುವ ಮೂಲಕ 8ನೇ ಬಾರಿಗೆ ಶಾಸಕರಾಗಿ ಗುಜರಾತ್ ವಿಧಾನಸಭೆ ಪ್ರವೇಶಿಸಲಿದ್ದಾರೆ.

      Gujarat Election Result 2022 : Undefeated MLA Pabubha Manek Leading In Dwarka Assembly

      ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಪ್ರಕಾರ, ಮಾಣೆಕ್ ಇಲ್ಲಿಯವರೆಗೆ 2022 ರ ಚುನಾವಣೆಯಲ್ಲಿ 40,114 ಮತಗಳನ್ನು ಗಳಿಸಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮುಲುಭಾಯ್ ಕಂಡೋರಿಯಾ 23,177 ಮತಗಳನ್ನು ಗಳಿಸಿದ್ದಾರೆ.

      ಬಿಜೆಪಿ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದ್ದು, ಕೆಲವೇ ಗಂಟೆಗಳಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ. 1990, 1995, 1998 ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮಾಣೆಕ್, 2002ರಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರು. 2007 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅವರು 2007, 2012, 2017 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂತಿ ಆಯ್ಕೆಯಾದರು.

      182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್‌ನಲ್ಲಿ ಬಿಜೆಪಿ ಬೃಹತ್ ಮುನ್ನಡೆ ಸಾಧಿಸಿದೆ. 12 ಗಂಟೆಗೆ ಬಂದ ವರದಿಗಳ ಪ್ರಕಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಹಾರ್ದಿಕ್ ಪಟೇಲ್ ಈಗಾಗಲೇ ಭರ್ಜರಿ ಜಯಭೇರಿ ಸಾಧಿಸಿದ್ದಾರೆ.

      Gujarat Election Result 2022 : Undefeated MLA Pabubha Manek Leading In Dwarka Assembly

      150 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಮ್ ಆದ್ಮಿ ಪಕ್ಷ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+