ಗುಜರಾತ್ ಚುನಾವಣೆ: ನ.4ರಂದು ಸಿಎಂ ಅಭ್ಯರ್ಥಿ ಘೋಷಿಸಲಿರುವ ಅರವಿಂದ್ ಕೇಜ್ರಿವಾಲ್

ಅಹಮದಾಬಾದ್, ನ.4: ಬಿಜೆಪಿ ಭದ್ರಕೋಟೆಯಾದ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಆಮ್ ಆದ್ಮಿ ಇಂದು ಸಿಎಂ ಅಭ್ಯರ್ಥಿಯನ್ನು ಘೋಷಿಸಲಿದೆ. ಇದಕ್ಕಾಗಿ ಇಂದು (ನವೆಂಬರ್ 4) ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಇಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ. ಇಂದು ವೇಳೆ ಗುಜರಾತ್‌ನಲ್ಲಿ ದೆಹಲಿಯಂತೆ ಎಎಪಿ ಜಯ ಸಾಧಿಸಿದರೆ ಇಸುದನ್ ಗಧ್ವಿ ಅಥವಾ ಗೋಪಾಲ್ ಇಟಾಲಿಯಾ ಎಎಪಿಯ ಮುಖ್ಯಮಂತ್ರಿ ಮುಖವಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಮೊದಲನೆಯದು ಡಿಸೆಂಬರ್ 1 ರಂದು ಹಾಗೂ ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ.

ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ (ನವೆಂಬರ್ 3) ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. ಮತದಾನಕ್ಕೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಎಪಿ ಗುಜರಾತ್‌ನಲ್ಲಿ ತನ್ನ ಪ್ರಚಾರವನ್ನು ತೀವ್ರಗೊಳಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯೊಂದಿಗೆ ಕೇಜ್ರಿವಾಲ್ ಮುನ್ನಡೆ ಸಾಧಿಸುವ ಮೂಲಕ ಪಕ್ಷವು ಶನಿವಾರದಿಂದ ರೋಡ್‌ಶೋಗಳನ್ನು ಪ್ರಾರಂಭಿಸಲಿದೆ. ಪಕ್ಷದ ಮೂಲಗಳ ಪ್ರಕಾರ, ಎಎಪಿ ಪ್ರತಿದಿನ ಎರಡರಿಂದ ಮೂರು ರೋಡ್‌ಶೋಗಳನ್ನು ನಡೆಸಲಿದೆ. ಈ ಮೂಲಕ ಬಿಜೆಪಿ ಭದ್ರಕೋಟೆಯನ್ನು ಒಡೆಯಲು ಎಎಪಿ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಇಸುದನ್ ಗಧ್ವಿ/ ಗೋಪಾಲ್ ಇಟಾಲಿಯಾ ಸಿಎಂ ಅಭ್ಯರ್ಥಿ

ಇಸುದನ್ ಗಧ್ವಿ/ ಗೋಪಾಲ್ ಇಟಾಲಿಯಾ ಸಿಎಂ ಅಭ್ಯರ್ಥಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೊಸ ಸ್ಪರ್ಧಿಯಾಗಿದೆ. ಅದಾಗಿದ್ದರೂ ಎಎಪಿ ಸರ್ಕಾರ ರಚಿಸುವ ಮಟ್ಟಿಗೆ ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಸಿದ್ಧವಾಗಿದೆ. ಸ್ಪರ್ಧೆ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯಲಿದ್ದು, ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ.

ಗೋಪಾಲ್ ಇಟಾಲಿಯಾ ಪಾಟಿದಾರ್ ಸಮುದಾಯದಿಂದ ಬಂದವರು. ಅವರು ಪಾಟಿದಾರ್ ಆಂದೋಲನದಲ್ಲೂ ತೊಡಗಿಸಿಕೊಂಡಿದ್ದರು. ಇಸುದನ್ ಗಧ್ವಿ ಮಾಜಿ ಪತ್ರಕರ್ತ ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಬಿಜೆಪಿ ಭದ್ರಕೋಟೆ ಹೊಡೆಯಲು ಎಎಪಿ ಸಜ್ಜು

ಬಿಜೆಪಿ ಭದ್ರಕೋಟೆ ಹೊಡೆಯಲು ಎಎಪಿ ಸಜ್ಜು

ಎಎಪಿ ತನ್ನ ಚುನಾವಣಾ ಪ್ರಚಾರವನ್ನು ಜೂನ್‌ನಲ್ಲಿ ಹಲವಾರು ಭರವಸೆಗಳನ್ನು ಘೋಷಿಸುವ ಮೂಲಕ ಪ್ರಾರಂಭಿಸಿತು. ಯಾತ್ರೆಗಳನ್ನು ಮತ್ತು ಮನೆ-ಮನೆಗೆ ಪ್ರಚಾರವನ್ನು ನಡೆಸಿದೆ. ಪ್ರಚಾರದ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಎಎಪಿ ಪಕ್ಷವು ಕಠಿಣ ಹೋರಾಟವನ್ನು ನೀಡುತ್ತಿದೆ. ಗುಜರಾತ್‌ನಲ್ಲಿ ಒಟ್ಟು 182 ವಿಧಾನಸಭಾ ಸ್ಥಾನಗಳಿದ್ದು, ಸರ್ಕಾರ ರಚಿಸಲು 92 ಸ್ಥಾನಗಳ ಅಗತ್ಯವಿದೆ.

ಅಂತಿಮಗೊಳ್ಳದ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಗಳು

ಅಂತಿಮಗೊಳ್ಳದ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಗಳು

2022 ರ ಗುಜರಾತ್ ಚುನಾವಣೆಯಲ್ಲಿ ಎಎಪಿ ಭಾರಿ ತಯಾರಿಯೊಂದಿಗೆ ಕಣಕ್ಕಿಳಿದಿದೆ. ಎಎಪಿ ಮಾತ್ರ 182 ಅಭ್ಯರ್ಥಿಗಳ ಪೈಕಿ 72 ಅಭ್ಯರ್ಥಿಗಳಿಗೆ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಎಎಪಿ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೊದಲ ಪಕ್ಷವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಇನ್ನೂ ತಮ್ಮ ಸ್ಪರ್ಧಿಗಳನ್ನು ಅಂತಿಮಗೊಳಿಸಿಲ್ಲ. ಎಲ್ಲಾ ಮೂರು ಪ್ರಮುಖ ಪಕ್ಷಗಳು ಎಲ್ಲಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ನಂತರ ಎಲ್ಲೆಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂಬುದು ತಿಳಿಯಲಿದೆ.

ಒಟ್ಟು ಮತಗಟ್ಟೆಗಳ ಸಂಖ್ಯೆ ಎಷ್ಟು?

ಒಟ್ಟು ಮತಗಟ್ಟೆಗಳ ಸಂಖ್ಯೆ ಎಷ್ಟು?

3 ,24,422 ಹೊಸ ಮತದಾರರು ಈ ಬಾರಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಒಟ್ಟು ಮತಗಟ್ಟೆಗಳ ಸಂಖ್ಯೆ 51,782 ರಷ್ಟಿದೆ. ರಾಜ್ಯದಲ್ಲಿ ಸ್ಥಾಪಿಸಲಾದ ಕನಿಷ್ಠ 50% ಮತಗಟ್ಟೆಗಳು ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿರುತ್ತವೆ. ಮತದಾರರು ಕಂಟೈನರ್‌ನಲ್ಲಿ ಮತಗಟ್ಟೆಯಲ್ಲಿ ಮತ ಚಲಾಯಿಸಬಹುದು. ಈ ಸೌಲಭ್ಯವನ್ನು ಹೊಸದಾಗಿ ತೆರೆಯಲಾಗುತ್ತಿದೆ. ಕಂಟೈನರ್‌ ಮತಗಟ್ಟೆಗಳನ್ನು ಅವಶ್ಯವಾಗಿರುವ ಜಾಗಗಳಲ್ಲಿ ವ್ಯವಸ್ಥಿತವಾಗಿ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+