ಗುಜರಾತ್: 70 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಅಹಮದಾಬಾದ್, ನವೆಂಬರ್ 17: ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸೇರಿದಂತೆ 70 ಮಂದಿ ಅಭ್ಯರ್ಥಿಗಳಿರುವ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷವು ಶುಕ್ರವಾರದಂದು ಪ್ರಕಟಿಸಿದೆ.

ಜೈನ ಸಮುದಾಯದ ವಿಜಯ್ ರೂಪಾನಿ ಅವರು ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದು, ಮತ್ತೊಮ್ಮೆ ಸಿಎಂ ಅಭ್ಯರ್ಥಿಯಾಗಿ ರಾಜ್ ಕೋಟ್ ಪಶ್ಚಿಮ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.

Gujarat Elections 2017 : BJP announces list of 70 candidates

ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಮೆಹ್ಸಾನಾ ಕ್ಷೇತ್ರ ಹಾಗೂ ಜಿತು ವಗಾನಿ ಅವರು ಭಾವ್ನ್ ನಗರ್ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ನವೆಂಬರ್ 18 ಅಥವಾ 19ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಬಗ್ಗೆ ಸುದ್ದಿ ಬಂದಿತ್ತು. ಆದರೆ, ಶುಕ್ರವಾರದಂದೆ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.

ಸತತ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿ.ಜೆ.ಪಿ. ಈ ಬಾರಿ ಹಾಲಿ 121 ಶಾಸಕರಲ್ಲಿ 35 ಮಂದಿಗೆ ಟಿಕೆಟ್ ನಿರಾಕರಿಸಲಿದೆ. ಜೊತೆಗೆ 6 ಮಂದಿ ಸಚಿವರಿಗೂ ಸ್ಪರ್ಧೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂಬ ಸುದ್ದಿಯಿದೆ.

ಗುಜರಾತಿನಲ್ಲಿ ಡಿಸೆಂಬರ್ 09 ಹಾಗೂ ಡಿಸೆಂಬರ್ 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+