ತವರಿಗೆ ಮರಳಿದ ಗುಜರಾತ್‌ ಕೈ ಶಾಸಕರು; ಇತರೆ ಪ್ರಮುಖ ಸುದ್ದಿಗಳು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 07 : ವೀಕೆಂಡ್ ಗಡಿಬಿಡಿಯಲ್ಲಿ ಕೆಲವು ಸುದ್ದಿಗಳು ನಿಮ್ಮ ಕಣ್ತಪ್ಪಿರಬಹುದು ಅಂಥ ಸುದ್ದಿಗಳೂ ಸೇರಿದಂತೆ ಕೆಲವು ಮಹತ್ವದ ಸುದ್ದಿಗಳನ್ನು ಮತ್ತೆ ಇಲ್ಲಿ ನಿಮ್ಮ ಮುಂದೆ ತಂದಿದ್ದೇವೆ.

ಸುದ್ದಿಗಳ ಭರಾಟೆಯಲ್ಲಿ ಕೆಲವು ಸುದ್ದಿಗಳು ಕಂಡೂ ಕಾಣದಂತೆ ಮಾಯವಾಗುವುದು ಸಹಜ. ಅವೆಲ್ಲವನ್ನೂ ಇಲ್ಲಿ ಒಟ್ಟಾಗಿ, ಓದುಗರ ಜ್ಞಾನಾರ್ಜನೆಯ ದೃಷ್ಟಿಯಿಂದ ಪ್ರಮುಖ ತುಣುಕು ಸುದ್ದಿಗಳನ್ನು ಆಯ್ದು ನಿಮ್ಮ ಮುಂದಿಟ್ಟಿದ್ದೇವೆ. ಓದು ನಿಮ್ಮದಾಗಲಿ.

ತವರಿಗೆ ಮರಳಿದ ಗುಜರಾತ್‌ ಕೈ ಶಾಸಕರು

ತವರಿಗೆ ಮರಳಿದ ಗುಜರಾತ್‌ ಕೈ ಶಾಸಕರು

ಬಿಡದಿ ಸಮೀಪದ ಈಗಲ್‌ಟನ್ ರೆಸಾರ್ಟ್‌ನಲ್ಲಿ ಒಂಬತ್ತು ದಿನಗಳಿಂದ ಬೀಡುಬಿಟ್ಟಿದ್ದ ಗುಜರಾತ್‌ ವಿಧಾನಸಭೆಯ ಕಾಂಗ್ರೆಸ್‌ನ 44 ಶಾಸಕರು ಸೋಮವಾರ ತವರಿಗೆ ಮರಳಿದ್ದಾರೆ. ಅಹಮದಾಬಾದ್‌ಗೆ ಬಂದಿಳಿದ ಶಾಸಕರನ್ನು ಆಣಂದ್ ಜಿಲ್ಲೆಯ ರೆಸಾರ್ಟ್‌ ಒಂದಕ್ಕೆ ಕರೆಕೊಂಡು ಹೋಗಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಅಲ್ಲಿಂದ ಮಂಗಳವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ನೇರವಾಗಿ ಮತಗಟ್ಟೆಗೆ ತೆರಳಲಿದ್ದಾರೆ.
ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ವೈರಲ್ ಆದ ರಷ್ಯಾ ಅಧ್ಯಕ್ಷರ ಬೇಸಿಗೆ ಮೋಜಿನ 'ಮೀನು ಬೇಟೆ'

ವೈರಲ್ ಆದ ರಷ್ಯಾ ಅಧ್ಯಕ್ಷರ ಬೇಸಿಗೆ ಮೋಜಿನ 'ಮೀನು ಬೇಟೆ'

ಸಾಮಾನ್ಯವಾಗಿ ಪ್ರಧಾನ ಮಂತ್ರಿ, ಅಧ್ಯಕ್ಷರುಗಳು ಒತ್ತಡದಲ್ಲಿ, ಬಿಡುವಿಲ್ಲದ ಕೆಲಸದಲ್ಲಿ ನಿರತವಾಗಿರುವುದೇ ಹೆಚ್ಚು. ಅದರಲ್ಲೂ ಭಾರತದಂಥ ದೇಶದಲ್ಲಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮೋಜು ಮಸ್ತಿ ಮಾಡುವುದನ್ನು, ವಿರಾಮ ತೆಗೆದುಕೊಳ್ಳುವುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಆದರೆ ಪಾಶ್ಚಿಮಾತ್ಯ ದೇಶಗಳು ಸ್ವಲ್ಪ ಭಿನ್ನ. ಇಲ್ಲಿ ಅಧ್ಯಕ್ಷರು, ಪ್ರಧಾನಮಂತ್ರಿಗಳು ಕುಟುಂಬ ಸಮೇತರಾಗಿ ರಜೆ ತೆಗೆದುಕೊಂಡು ಪ್ರವಾಸ ಮಾಡುತ್ತಾರೆ. ಒತ್ತಡದ ಜೀವನದಿಂದ ಒಂದಷ್ಟು ವಿರಾಮಕ್ಕೆ ಜಾರುತ್ತಾರೆ. ಈ ರೀತಿ ಪ್ರವಾಸ ಹೋಗಿ ಬರಾಕ್ ಒಬಾಮ ಹಲವು ಬಾರಿ ಸುದ್ದಿಯಾಗಿದ್ದಿದೆ. ಆದರೆ ಇವರನ್ನೆಲ್ಲಾ ಮೀರಿಸಿ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ರ ರಜಾ ಮೋಜು ಈಗ ಸದ್ದು ಮಾಡುತ್ತಿದೆ. ಸಿನಿಮಾ ಹೀರೋಗಳ ರೀತಿ ಬರಿಮೈಯಲ್ಲಿ ರಷ್ಯಾ ಅಧ್ಯಕ್ಷರು ಮೀನಿಗೆ ಗಾಳ ಹಾಕುತ್ತಿರುವ, ನೀರಿನಾಳದಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಆರ್ ಎಸ್ ಎಸ್ ಕಾರ್ಯಕರ್ತನ ಮನೆಗೆ ಜೇಟ್ಲಿ ಭೇಟಿ

ಆರ್ ಎಸ್ ಎಸ್ ಕಾರ್ಯಕರ್ತನ ಮನೆಗೆ ಜೇಟ್ಲಿ ಭೇಟಿ

ಕೇರಳದ ಹೀನಾಯ ರಾಜಕೀಯ ಮೇಲಾಟದಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆಯಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರಾಜೇಶ್ ಎಡವಕೋಡೆ ಮನೆಗೆ ಕೇಂದ್ರ ವಿತ್ತ, ರಕ್ಷಣಾ ಸಚಿವ ಅರುಣ್ ಜೇಟ್ಲಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಇಂದು ಮಧ್ಯಾಹ್ನದಿಂದ ತಿರುಪತಿ ದೇವಾಲಯ ಬಂದ್!

ಇಂದು ಮಧ್ಯಾಹ್ನದಿಂದ ತಿರುಪತಿ ದೇವಾಲಯ ಬಂದ್!

ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯ ಖಗ್ರಾಸ ಚಂದ್ರಗ್ರಹಣದ ದಿನವಾದ ಸೋಮವಾರ (ಆಗಸ್ಟ್ 7) ರಂದು ಬಂದ್ ಆಗಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ. ಆಗಸ್ಟ್ ಏಳರಂದು ಸಂಜೆ 4.30 ರಿಂದ ಆಗಸ್ಟ್ ಎಂಟು ಬೆಳಗ್ಗಿನ ಜಾವ 2ಗಂಟೆಯವರೆಗೆ ದೇವಾಲಯ ಬಂದ್ ಆಗಲಿದ್ದು, ಭಕ್ತಾದಿಗಳಿಗೆ ಸುಮಾರು ಹತ್ತು ತಾಸು ಪ್ರವೇಶವಿರುವುದಿಲ್ಲ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

2017 ಕೆಪಿಎಲ್ ಆಟಗಾರರ ಹರಾಜು

2017 ಕೆಪಿಎಲ್ ಆಟಗಾರರ ಹರಾಜು

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ)ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ.ಕೆ ಗೌತಮ್ ಹಾಗೂ ಅಮಿತ್ ವರ್ಮಾ ಅವರು ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ನವರತನ್ ಜ್ಯುವೆಲ್ಲರ್ಸ್ ಉದ್ಘಾಟಿಸಿದ ಯಶ್ ದಂಪತಿ

ನವರತನ್ ಜ್ಯುವೆಲ್ಲರ್ಸ್ ಉದ್ಘಾಟಿಸಿದ ಯಶ್ ದಂಪತಿ

ಬೆಂಗಳೂರು ನಗರದಲ್ಲಿ ಮನೆ ಮಾತಾಗಿರುವ ನವರತನ್ ಜ್ಯುವೆಲ್ಲರ್ಸ್ ಇದೀಗ ಜಯನಗರದಲ್ಲೂ ತನ್ನ ಹೊಸ ಮಳಿಗೆಗಯನ್ನು ಆರಂಭಿಸಿದೆ. ನವರತನ್ ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಚಂದ್ ಅವರ ಮಾರ್ಗದರ್ಶನದಲ್ಲಿ ಭಾನುವಾರ ಅನಾವರಣಗೊಂಡಿತು. ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್ ಅವರು ನವರತನ್ ಜ್ಯುವೆಲ್ಲರ್ಸ್ ಮಳಿಗೆಯನ್ನು ಉದ್ಘಾಟಿಸಿದರು. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಭೀರಿದ ಭಾರತ

ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಭೀರಿದ ಭಾರತ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ(ಆಗಸ್ಟ್ 06) ಟೀಂ ಇಂಡಿಯಾ ಗೆಲುವಿನನಗೆ ಬೀರಿದೆ.ದ್ವಿತೀಯ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಗೆ ಐದು ವಿಕೆಟ್ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಇನ್ನಿಂಗ್ಸ್ ಹಾಗೂ 53 ರನ್ ಗಳಿಂದ ಗೆಲುವು ಸಾಧಿಸಿ ಜಯಭೇರಿ ಬಾರಿಸಿತು. ಈ ಮೂಲಕ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

Language equality in India and Hindi imposition
ವಿದೇಶದಲ್ಲೂ ರಾರಾಜಿಸಲಿದೆ ಮೈಸೂರು ದಸರೆಯ ಜಾಹೀರಾತು ಫಲಕ!

ವಿದೇಶದಲ್ಲೂ ರಾರಾಜಿಸಲಿದೆ ಮೈಸೂರು ದಸರೆಯ ಜಾಹೀರಾತು ಫಲಕ!

ವಿಶ್ವವಿಖ್ಯಾತ ದಸರೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ದಸರೆಯ ಗಮನ ಕೋರಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದಸರಾ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶ ಹಾಗೂ ವಿದೇಶಿ ಪ್ರವಾಸಿಗರನ್ನ ಸೆಳೆಯಲು ವಿಮಾನದ ಮೇಲೆ ಜಾಹೀರಾತು ಪ್ರಕಟಿಸಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Congress MLAs return from Bengaluru, and Here are some other important stories
Please Wait while comments are loading...