ಇಂದು ಮಧ್ಯಾಹ್ನದಿಂದ ತಿರುಪತಿ ದೇವಾಲಯ ಬಂದ್!

Posted By:
Subscribe to Oneindia Kannada

ತಿರುಪತಿ, ಜುಲೈ 27: ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯ ಖಗ್ರಾಸ ಚಂದ್ರಗ್ರಹಣದ ದಿನವಾದ ಸೋಮವಾರ (ಆಗಸ್ಟ್ 7) ರಂದು ಬಂದ್ ಆಗಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.

ಆಗಸ್ಟ್ ಏಳರಂದು ಸಂಜೆ 4.30 ರಿಂದ ಆಗಸ್ಟ್ ಎಂಟು ಬೆಳಗ್ಗಿನ ಜಾವ 2ಗಂಟೆಯವರೆಗೆ ದೇವಾಲಯ ಬಂದ್ ಆಗಲಿದ್ದು, ಭಕ್ತಾದಿಗಳಿಗೆ ಸುಮಾರು ಹತ್ತು ತಾಸು ಪ್ರವೇಶವಿರುವುದಿಲ್ಲ.
2017ರಲ್ಲಿ ಗೋಚರಿಸುವ ಸೂರ್ಯ ಮತ್ತು ಚಂದ್ರ ಗ್ರಹಣಗಳು

Tirumala Tirupati Lord Venkateshwara temple to be close for Lunar Eclipse on Aug 7 and 8

ಆ 7ರಂದು ರಾತ್ರಿ 10.52 ರಿಂದ ಆಗಸ್ಟ್ 8ರ 00.48ರ ಅವಧಿಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣ ಶುರುವಾಗುವ ಆರು ಗಂಟೆಯ ಮೊದಲು ದೇವಾಲಯ ಬಂದ್ ಆಗಲಿದೆ.

ಗ್ರಹಣ ಮುಗಿದ ನಂತರ ಗರ್ಭಗುಡಿ ಮತ್ತು ದೇವಾಲಯದ ಆವರಣದಲ್ಲಿ ಶುದ್ದಿ, ಪುಣ್ಯಾಹವ ನಡೆಸಬೇಕಾಗಿರುವುದರಿಂದ ಆಗಸ್ಟ್ ಎಂಟರಂದು ಬೆಳಗ್ಗಿನ ಜಾವ ಎರಡು ಗಂಟೆಯ ನಂತರ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಸುಪ್ರಭಾತ, ಏಕಾಂತ, ಅಷ್ಟದಳ ಪದ್ಮಾರಾಧಾನ ಸೇವೆ ಎಂದಿನಂತೆ ನಡೆಯಲಿದೆ. ಸಾಮಾನ್ಯ ಸರತಿಯಲ್ಲಿ ಬರುವ ಭಕ್ತಾದಿಗಳನ್ನು ಆಗಸ್ಟ್ ಎಂಟರಂದು ಬೆಳಗ್ಗೆ ಏಳು ಗಂಟೆಯ ನಂತರವಷ್ಟೇ ಬಿಡಲಾಗುವುದು ಎಂದು ಟಿಟಿಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ 4 ವರಮಹಾಲಕ್ಷ್ಮೀ ವ್ರತ, ಆಗಸ್ಟ್ 5 ಶ್ರಾವಣ ಶನಿವಾರ ಮತ್ತು ಆಗಸ್ಟ್ 7ರಂದು ರಕ್ಷಾಬಂಧನ ಇರುವುದರಿಂದ ದೇವಾಲಯದಲ್ಲಿ ಭಾರೀ ಜನಸಂದಣಿ ಇರುವ ಸಾಧ್ಯತೆಯಿದೆ.

Tirupathi Thimmappa also attacked with WannaCry Virus

ಹಾಗಾಗಿ, ಭಕ್ತಾದಿಗಳಿಗೆ ಅನಾನುಕೂಲವಾಗದೇ ಇರಲು, ಚಂದ್ರಗ್ರಹಣ ಸಂಭವಿಸುವ ಹತ್ತು ದಿನದ ಮೊದಲೇ ಟಿಟಿಡಿ ಪ್ರಕಟಣೆ ಹೊರಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The temple of Lord Venkateswara, in Tirupati will remain closed on August 7th and 8th in view of lunar eclipse. Official sources said the doors of the main temple will be closed at 4.30 p.m. on August 7 and will be reopened at 2 a.m. on August 8. Darshan for the general public will be allowed only after 7AM on Aug 8.
Please Wait while comments are loading...