ಜಯನಗರದಲ್ಲಿ ನವರತನ್ ಜ್ಯುವೆಲ್ಲರ್ಸ್ ಉದ್ಘಾಟಿಸಿದ ಯಶ್ ದಂಪತಿ

Posted By:
Subscribe to Oneindia Kannada

ಬೆಂಗಳೂರು. ಆಗಸ್ಟ್ 06 : ಸಿಲಿಕಾನ್ ಸಿಟಿಯ ಆಭರಣ ಪ್ರಿಯರಿಗೆ ಒಂದು ಸಂತಸದ ಸುದ್ದಿ ಇಲ್ಲಿದೆ. ಕಳೆದ ಹಲವಾರು ದಶಕಗಳಿಂದ ಬೆಂಗಳೂರು ನಗರದಲ್ಲಿ ಮನೆ ಮಾತಾಗಿರುವ ನವರತನ್ ಜ್ಯುವೆಲ್ಲರ್ಸ್ ಇದೀಗ ಜಯನಗರದಲ್ಲೂ ತನ್ನ ಹೊಸ ಮಳಿಗೆಗಯನ್ನು ಆರಂಭಿಸಿದೆ.

ನವರತನ್ ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಚಂದ್ ಅವರ ಮಾರ್ಗದರ್ಶನದಲ್ಲಿ ಇಂದು (ಭಾನುವಾರ) ಅನಾವರಣಗೊಂಡಿತು. ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್ ಅವರು ನವರತನ್ ಜ್ಯುವೆಲ್ಲರ್ಸ್ ಮಳಿಗೆಯನ್ನು ಉದ್ಘಾಟಿಸಿದರು.

ಡೈಮಂಡ್ ನೆಕ್ಲೇಸ್, ಡೈಮಂಡ್ ಓಲೆಗಳು, ಕಫ್ಸ್ ಮತ್ತು ಡೈಮಂಡ್ ಬ್ರೇಸ್ ಲೈಟ್ ಗಳು ಸೇರಿದಂತೆ ಮನಸೂರೆಗೊಳ್ಳುವ ವಜ್ರಾಭಾರಣಗಳು ನಿಮ್ಮನ್ನು ಬೆರಗುಗೊಳಿಸಲಿವೆ.

ಇಲ್ಲಿರುವ ಪ್ರತಿಯೊಂದು ಆಭರಣಗಳು ನುರಿತ ಕುಶಲಕರ್ಮಿಕರು ತಯಾರಾಗಿದ್ದು, ಈಗಿನ ಟ್ರೆಂಡ್ ಗೆ ತಕ್ಕಂತೆ ವಜ್ರಾಭರಣಗಳು ಲಭ್ಯವಿರಲಿವೆ. ಹಾಗಿದ್ದರೇ ಇನ್ನೇಕೆ ತಡ ನಿಮಗಿಷ್ಟುವಾದ ಆಭರಣಗಳನ್ನು ಖರೀದಿಸಿ ಆನಂದಿಸಿ.

ಆಭರಣಗಳ ಕಣಜ

ಆಭರಣಗಳ ಕಣಜ

2500 ಚದರಡಿ ವಿಸ್ತೀರ್ಣದ ವಿಶಾಲವಾದ ಮಳಿಗೆಯಲ್ಲಿ ಅನಾವರಣಗೊಂಡಿರುವ ನವರತನ್, ನೆಕ್‍ಪೀಸ್, ಇಯರ್‍ರಿಂಗ್‍ಗಳು, ಉಂಗುರಗಳು ಮತ್ತು ಇತರೆ ತರಹೇವಾರಿ ಆಭರಣಗಳ ಕಣಜವನ್ನೇ ಹೊಂದಿದೆ.

ಮಳಿಗೆಯ ಉಸ್ತುವಾರಿ ಅಧಿಕಾರಿ ರಾಹುಲ್ ಜೈನ್

ಮಳಿಗೆಯ ಉಸ್ತುವಾರಿ ಅಧಿಕಾರಿ ರಾಹುಲ್ ಜೈನ್

ಮಳಿಗೆಯ ಉಸ್ತುವಾರಿ ಅಧಿಕಾರಿ ರಾಹುಲ್ ಜೈನ್ ಅವರು ಮಾತನಾಡಿ, ``ನಮ್ಮ ಕಂಪನಿ ಎತ್ತರಕ್ಕೆ ಬೆಳೆಯುತ್ತಿರುವುದಕ್ಕೆ ಸಂತಸ ಎನಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ವಿಶೇಷವಾದ ಡೈಮಂಡ್ ಬಾಟಿಕ್ ಅನ್ನು ಉದ್ಘಾಟನೆ ಮಾಡುತ್ತಿರುವುದಕ್ಕೆ ಹೆಚ್ಚು ಸಂತೋಷವಾಗುತ್ತಿದೆ. ಗ್ರಾಹಕರ ಈಗಿನ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಕೇವಲ ವಜ್ರಾಭರಣಕ್ಕೆಂದೇ ಪ್ರತ್ಯೇಕ ಸ್ಟೋರ್ ಅನ್ನು ಆರಂಭಿಸಿದ್ದೇವೆ. ಈ ಮಳಿಗೆಯ ವಿಶೇಷವೆಂದರೆ ಗ್ರಾಹಕರು ವಿಶ್ವಶ್ರೇಷ್ಠವಾದ ಎಲ್ಲಾ ಬಗೆಯ ವಜ್ರಾಭರಣಗಳನ್ನು ಇಲ್ಲಿ ನೋಡಬಹುದಾಗಿದೆ. ಒಂದಕ್ಕಿಂತ ಒಂದು ಆಭರಣ ವಿಶಿಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯುವಂತಿವೆ. ಅತ್ಯುತ್ತಮವಾದ ವಿನ್ಯಾಸ, ಮಹಿಳೆಯರಿಗೆ ಒಪ್ಪುವಂತಹ ಆಕರ್ಷಣೆಯ ಆಭರಣಗಳು ಇಲ್ಲಿವೆ'' ಎಂದು ತಿಳಿಸಿದರು.

ಉದ್ಘಾಟನೆಯಲ್ಲಿ ಅತಿಥಿಗಳ ಮೆರಗು

ಉದ್ಘಾಟನೆಯಲ್ಲಿ ಅತಿಥಿಗಳ ಮೆರಗು

ನವರತನ್ ಜ್ಯುವೆಲ್ಲರ್ಸ್ ಮಳಿಗೆಯ ಉದ್ಘಾಟನೆ ವೇಳೆ ಯಶ್ ದಂಪತಿ ಜತೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮತ್ತು ಕರ್ನಾಟಕ ಸರ್ಕಾರದ ಎನ್ ಆರ್ ಐ ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಡೈಮಂಡ್ ತೊಟ್ಟು ರ್ಯಾಂಪ್ ವಾಕ್ ಮಾಡಿದ ತಾರೆಯರು

ಡೈಮಂಡ್ ತೊಟ್ಟು ರ್ಯಾಂಪ್ ವಾಕ್ ಮಾಡಿದ ತಾರೆಯರು

ಜಯನಗರದಲ್ಲಿ ನವರತನ್ ಜ್ಯುವೆಲ್ಲರ್ಸ್ ಉದ್ಘಾಟನೆ ಬಳಿಕ ವಿವಿಧ ಶೈಲಿಯ ಡೈಮಂಡ್ ಧರಿಸಿ ರ್ಯಾಂಪ್ ವಾಕ್ ಮಾಡಿದರು. ಇದು ನೋಡುಗರ ಮನಸೆಳೆಯಿತು.

1954ರಿಂದ ನಂಬಿಕೆ ಗಳಿಸಿದ ನವರತನ್ ಜ್ಯುವೆಲ್ಲರ್ಸ್

1954ರಿಂದ ನಂಬಿಕೆ ಗಳಿಸಿದ ನವರತನ್ ಜ್ಯುವೆಲ್ಲರ್ಸ್

ಗುಣಮಟ್ಟದ ವಿವಿಧ ಡಿಸೈನ್ ಆಭರಣಗಳನ್ನು ನೀಡುವಲ್ಲಿ 1954ರಿಂದ ನವರತನ್ ಜ್ಯುವೆಲ್ಲರ್ಸ್ ನಂಬಿಕೆ ಗಳಿಸಿ ಗ್ರಾಹಕರ ಮನೆ ಮಾತಾಗಿದ್ದು, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿದೆ.

Fans Threw Stones On Actor Yash Car | Oneindia Kannada
ನವರತನ್ ಜ್ಯುವೆಲ್ಲರ್ಸ್ ವಿಳಾಸ

ನವರತನ್ ಜ್ಯುವೆಲ್ಲರ್ಸ್ ವಿಳಾಸ

ನೂತನ ಉದ್ಘಾಟನೆಗೊಂಡ ನವರತನ್ ಜ್ಯುವೆಲ್ಲರ್ಸ್ ವಿಳಾಸ: =6, 33ನೇ ಅಡ್ಡರಸ್ತೆ, 4ನೇ ಬ್ಲಾಕ್ ಜಯನಗರ, ಬೆಂಗಳೂರು:560011.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Navranjan Jewellers launches its exclusive diamond boutique at Jayanagar, Bengaluru on Sunday. This exclusive boutique had been inaugurated by “Rocking Superstar, Mr. Yash & the Sandalwood Queen, Ms. Radhika Pandit along with Shri. D Kupendra Reddy, M.P. Rajya Sabha Govt of India being the Chief Guest.
Please Wait while comments are loading...