ಕೇವಲ 10 ನಿಮಿಷಗಳವರೆಗೆ ಈ ಪ್ರಾಣಾಯಾಮ ಮಾಡಿದರೆ ನಿಯಂತ್ರಣಕ್ಕೆ ಬರುವುದು ನಿದ್ರಾಹೀನತೆಯಿಂದ ಬಿಪಿವರೆಗಿನ ಕಾಯಿಲೆ
ಇಂದಿನ ವೇಗದ ಜೀವನದಲ್ಲಿ, ಒತ್ತಡ, ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಹೀಗಿರುವಾಗ ಇಂಥಹ ಸಮಸ್ಯೆಗಳಿಗೆ ವೈದ್ಯರ ಬಳಿಗೆ ಹೋಗಲೇಬೇಕು ಎನ್ನುವುದು ಅನಿವಾರ್ಯವಲ್ಲ. ಇದರ ಬದಲಿಗೆ ಯೋಗ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡುವ ಮೂಲಕವೂ ಪರಿಹಾರ ಕಂಡುಕೊಳ್ಳಬಹುದು. ಇವುಗಳಲ್ಲಿ ಒಂದು ಭ್ರಮರಿ ಪ್ರಾಣಾಯಾಮ.
ಈ ಪ್ರಾಣಾಯಾಮವನ್ನು ಮನೆಯಲ್ಲಿ ಕೇವಲ 10 ನಿಮಿಷಗಳವರೆಗೆ ಸುಲಭವಾಗಿ ಮಾಡಬಹುದು. ಪ್ರತಿದಿನ ಬೆಳಿಗ್ಗೆ ಈ ಪ್ರಾಣಾಯಾಮವನ್ನು ಮಾಡುವುದರಿಂದ ಅನೇಕ ರೀತಿಯಲ್ಲಿ ದೈಹಿಕ ಪ್ರಯೋಜನಗಳಾಗುವುದು. ಭ್ರಮರಿ ಪ್ರಾಣಾಯಾಮವು ಉಸಿರಾಟದ ವಿಧಾನವಾಗಿದೆ. ಈ ಪ್ರಾಣಾಯಾಮದಲ್ಲಿ ಉಸಿರನ್ನು ಬಿಡುವಾಗ ಜೇನುನೊಣ ಝೇಂಕರಿಸುವ ಶಬ್ದ ಸೃಷ್ಟಿಯಾಗುವುದು. ಈ ಶಬ್ದವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಭ್ರಮರಿ ಪ್ರಾಣಾಯಾಮ ಮಾಡುವುದು ಹೇಗೆ ?
ಈ ಪ್ರಾಣಾಯಾಮವನ್ನು ಮಾಡುವುದು ಬಹಳ ಸುಲಭ. ಇದನ್ನು ಮನೆಯಲ್ಲಿ ಪ್ರತಿದಿನ ಮಾಡಬಹುದು.
1. ಭ್ರಮರಿ ಪ್ರಾಣಾಯಾಮ ಮಾಡಲು, ಶಾಂತ ಸ್ಥಳದಲ್ಲಿ ಸುಖಾಸನ ಅಥವಾ ಪದ್ಮಾಸನ ಹಾಕಿ ಕುಳಿತುಕೊಳ್ಳಬೇಕು. ನಂತರ ಕಣ್ಣುಗಳನ್ನು ಮುಚ್ಚಿ ದೇಹವನ್ನು ವಿಶ್ರಾಂತ ಸ್ಥಿತಿಯಲ್ಲಿ ಇರಿಸಬೇಕು.
2. ಎರಡೂ ಕೈಗಳ ಬೆರಳುಗಳಿಂದ ನಿಮ್ಮ ಕಿವಿಗಳನ್ನು ನಿಧಾನವಾಗಿ ಮುಚ್ಚಿ. ದೀರ್ಘ ಉಸಿರು ತೆಗೆದುಕೊಳ್ಳಬೇಕು.
3. ನಿಧಾನವಾಗಿ ಉಸಿರು ಬಿಡುತ್ತಾ, ಸದ್ದು ಮಾಡಬೇಕು.
4. ಈ ಪ್ರಕ್ರಿಯೆಯನ್ನು 8-10 ಬಾರಿ ಪುನರಾವರ್ತಿಸಿ.
ಭ್ರಮರಿ ಪ್ರಾಣಾಯಾಮ ಮಾಡುವುದರಿಂದಾಗುವ ಪ್ರಯೋಜನಗಳು
ಪ್ರತಿದಿನ ಬೆಳಿಗ್ಗೆ ಭ್ರಮರಿ ಪ್ರಾಣಾಯಾಮ ಮಾಡುವುದರಿಂದ ಅನೇಕ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳು ದೊರೆಯುತ್ತವೆ.
ಒತ್ತಡ ಕಡಿಮೆಯಾಗುತ್ತದೆ
ಭ್ರಮರಿ ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಆತಂಕ, ಖಿನ್ನತೆ ಅಥವಾ ಒತ್ತಡದಿಂದ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ಮನಸ್ಸಿಗೆ ಶಾಂತಿಯನ್ನು ತರುತ್ತದೆ.
ಬಿಪಿ ನಿಯಂತ್ರಣದಲ್ಲಿರುವುದು
ಭ್ರಮರಿ ಪ್ರಾಣಾಯಾಮವು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುವುದು. ಪ್ರತಿದಿನ ಬೆಳಿಗ್ಗೆ ಈ ಪ್ರಾಣಾಯಾಮವನ್ನು ಮಾಡುವುದರಿಂದ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಸಿಗುವುದು. ರಕ್ತದೊತ್ತಡ ನಿಯಂತ್ರಣದಲ್ಲಿರುವುದು. ಅಧಿಕ ರಕ್ತದೊತ್ತಡ ಇರುವವರು ನಿತ್ಯ ಈ ಪ್ರಾಣಾಯಾಮವನ್ನು ಮಾಡುವ ಮೂಲಕ ಬಿಪಿಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಡಬಹುದು.
ನಿದ್ರಾಹೀನತೆಗೆ ಪರಿಹಾರ
ಭ್ರಮರಿ ಪ್ರಾಣಾಯಾಮದಿಂದ ನಿದ್ರಾಹೀನತೆಯ ಸಮಸ್ಯೆ ನಿವಾರಣೆಯಾಗುವುದು. ಪ್ರತಿದಿನ ಬೆಳಿಗ್ಗೆ ಈ ಪ್ರಾಣಾಯಾಮವನ್ನು ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಸಿಗುವುದು. ಇದನ್ನು ಅಭ್ಯಾಸ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರುವುದು. ಮಾನಸಿಕ ಶಾಂತಿ ಹೆಚ್ಚಾಗುವುದು.
ಏಕಾಗ್ರತೆ ಹೆಚ್ಚಾಗುತ್ತದೆ
ಈ ಪ್ರಾಣಾಯಾಮವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಪ್ರಾಣಾಯಾಮವನ್ನು ಪ್ರತಿದಿನ ಮಾಡುವುದರಿಂದ ಮೆದುಳಿನ ಕಾರ್ಯವು ಸುಧಾರಿಸುತ್ತದೆ. ಇದು ಗಮನ ಮತ್ತು ಸ್ಮರಣ ಶಕ್ತಿಯನ್ನು ಸುಧಾರಿಸುತ್ತದೆ.
ಕೋಪ ಕಡಿಮೆಯಾಗುತ್ತದೆ
ಭ್ರಮರಿ ಪ್ರಾಣಾಯಾಮದಿಂದ ಕೋಪ ಕಡಿಮೆಯಾಗುವುದು. ಪ್ರತಿದಿನ ಬೆಳಿಗ್ಗೆ 10 ರಿಂದ 15 ನಿಮಿಷಗಳ ಕಾಲ ಈ ಪ್ರಾಣಾಯಾಮವನ್ನು ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ತಾಳ್ಮೆ ಹೆಚ್ಚಾಗುವುದು ಮತ್ತು ಕೋಪ ಕಡಿಮೆಯಾಗುವುದು.












Click it and Unblock the Notifications