ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RSS ಕಾರ್ಯಕರ್ತರ ಹತ್ಯೆ: ಬುದ್ದಿಜೀವಿಗಳಿಗೆ ಸರಿಯಾಗಿ ಟಾಂಗ್ ನೀಡಿದ ಜೇಟ್ಲಿ

ಕೇರಳದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, NDA ಸರಕಾರವಿರುವ ರಾಜ್ಯದಲ್ಲಿ ಏನಾದರೂ ನಡೆದಿದ್ದರೆ, ಹಲವು ಪ್ರಶಸ್ತಿಗಳು ವಾಪಸ್ ಆಗುತ್ತಿದ್ದವು ಎಂದು ಪ್ರಶಸ್ತಿ ಹಿಂದಿರುಗಿಸಿದ ಬುದ್ದಿಜೀವಿಗಳಿಗೆ ಕೇಂದ್ರ ಸಚಿವ ಜೇಟ್ಲಿ ಸರಿಯಾದ ಟಾಂಗ್ ನೀಡಿದ್ದಾರ

|
Google Oneindia Kannada News

ತಿರುವನಂತಪುರ, ಆ 7 (ಪಿಟಿಐ) : ಕೇರಳದ ಹೀನಾಯ ರಾಜಕೀಯ ಮೇಲಾಟದಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆಯಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರಾಜೇಶ್ ಎಡವಕೋಡೆ ಮನೆಗೆ ಭೇಟಿ ನೀಡಿದ ನಂತರ ಕೇಂದ್ರ ವಿತ್ತ, ರಕ್ಷಣಾ ಸಚಿವ ಅರುಣ್ ಜೇಟ್ಲಿ ನೀಡಿದ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ.

ಪಿಣರಾಯಿ ವಿಜಯನ್ ನೇತೃತ್ವದ LDF ಸಿಪಿಐ (ಎಂ) ಸರಕಾರ ಕೇರಳದಲ್ಲಿ ಅಧಿಕಾರಕ್ಕೆ ಬಂದ ನಂತರ ಸಂಘ ಪರಿವಾರದ ಸದಸ್ಯರ ಸರಣಿ ಹತ್ಯೆ, ಕೇರಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಗಂಭೀರ ಸವಾಲಾಗುವತ್ತ ಸಾಗುತ್ತಿದೆಯೆಂದು ಜೇಟ್ಲಿ ಹೇಳಿದ್ದಾರೆ.

RSS ಕಾರ್ಯಕರ್ತ ರಾಜೇಶ್ ಮನೆಗೆ ಭಾನುವಾರ (ಆ 6) ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಬಂದ ಜೇಟ್ಲಿ, ಭಯೋತ್ಪಾದಕರೂ ನಾಚುವಂತೆ ಕಾರ್ಯಕರ್ತನನ್ನು ಹತ್ಯೆಗೈಯ್ಯಲಾಗಿದೆ, ಇವರಿಗೆ ಮನುಷ್ಯತ್ವ ಎನ್ನುವ ಪದದ ಅರ್ಥ ಗೊತ್ತೇ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

LDF ಸರಕಾರ ಕೇರಳದಲ್ಲಿಅಧಿಕಾರದಲ್ಲಿ ಇದ್ದಾಗಲೆಲ್ಲಾ ಕಾನೂನು, ಸುವ್ಯವಸ್ಥೆ ಹದೆಗೆಡತ್ತಲೇ ಇರುತ್ತದೆ ಎನ್ನುವುದು ಇಲ್ಲಿನ ರಾಜಕೀಯ ಇತಿಹಾಸ. ಇಲ್ಲಿ ಸರಕಾರದ ವಿರೋಧಿಗಳು ಅತ್ಯಂತ ಹೇಯವಾಗಿ ಸಾವನ್ನಪ್ಪುತ್ತಿದ್ದಾರೆಂದು ಜೇಟ್ಲಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ಕೇರಳದಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯನ್ನು ಅತ್ಯಂತ ಕಟುವಾಗಿ ಟೀಕಿಸಿದ ಜೇಟ್ಲಿ,ಬಹುಷಃ ಭಯೋತ್ಪಾದಕರೂ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುವುದಿಲ್ಲವೇನೋ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಬುದ್ದಿಜೀವಿಗಳಿಗೆ ಸರಿಯಾಗಿ ಟಾಂಗ್ ನೀಡಿದ ಜೇಟ್ಲಿ, ಮುಂದೆ ಓದಿ...

ಜೇಟ್ಲಿ ಬರುತ್ತಿದ್ದಂತೇ ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ

ಜೇಟ್ಲಿ ಬರುತ್ತಿದ್ದಂತೇ ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿ ನೀಡುತ್ತಿದ್ದಾರೆ ಎನ್ನುವ ಮಾಹಿತಿಯಿಂದ, ಪೂರ್ವತಯಾರಿ ನಡೆಸಿಕೊಂಡು ನಡೆಸಿದ್ದಂತಿದ್ದ ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯಕರ್ತರು, ಬಿಜೆಪಿ-RSS ಕಾರ್ಯಕರ್ತರಿಂದ ನಮ್ಮ ಕಾರ್ಯಕರ್ತರೂ ಸಾವನ್ನಪ್ಪಿದ್ದಾರೆ. ಅವರ ಮನೆಗೂ ಕೇಂದ್ರ ಸಚಿವರು ಭೇಟಿ ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದರು.

NDA ಸರಕಾರವಿರುವ ರಾಜ್ಯದಲ್ಲಿ ನಡೆದಿದ್ದರೆ, ಪ್ರಶಸ್ತಿಗಳು ವಾಪಸ್ ಆಗುತ್ತಿದ್ದವು

NDA ಸರಕಾರವಿರುವ ರಾಜ್ಯದಲ್ಲಿ ನಡೆದಿದ್ದರೆ, ಪ್ರಶಸ್ತಿಗಳು ವಾಪಸ್ ಆಗುತ್ತಿದ್ದವು

ಒಂದು ವೇಳೆ ಕೇರಳದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, NDA ಸರಕಾರವಿರುವ ರಾಜ್ಯದಲ್ಲಿ ಏನಾದರೂ ನಡೆದಿದ್ದರೆ, ಹಲವು ಪ್ರಶಸ್ತಿಗಳು ವಾಪಸ್ ಆಗುತ್ತಿದ್ದವು ಎಂದು ಏಕಮುಖವಾಗಿ ನಿರ್ಧಾರಕ್ಕೆ ಬಂದು ಪ್ರಶಸ್ತಿ ಹಿಂದಿರುಗಿಸಿದ ಬುದ್ದಿಜೀವಿಗಳಿಗೆ ಸರಿಯಾದ ಟಾಂಗ್ ನೀಡಿದ್ದಾರೆ.

ಕೇರಳದಲ್ಲಿ ವಿರೋಧ ಪಕ್ಷಗಳಿಗೆ ಜೇಟ್ಲಿ ನೀಡಿದ ಟಾಂಗ್

ಕೇರಳದಲ್ಲಿ ವಿರೋಧ ಪಕ್ಷಗಳಿಗೆ ಜೇಟ್ಲಿ ನೀಡಿದ ಟಾಂಗ್

ಸಂಸತ್ತಿನ ಉಭಯ ಸದನದಲ್ಲಿ ವಿರೋಧ ಪಕ್ಷಗಳು ನಡೆಸುವ ಪ್ರತಿಭಟನೆಗಳನ್ನು ಒಮ್ಮೆ ಅವಲೋಕಿಸಿ, ಕೇರಳದಲ್ಲಿ ನಡೆದಂತೆ ಎನ್ಡಿಎ ಸರಕಾರದ ರಾಜ್ಯದಲ್ಲಿ ಏನಾದರೂ ಈ ರೀತಿಯ ಹಿಂಸಾಚಾರ ನಡೆಯುತ್ತಿದ್ದರೆ ಅಧಿವೇಶನ ನಡೆಸಲು ವಿರೋಧ ಪಕ್ಷಗಳು ಬಿಡುತ್ತಿದ್ದರೇ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತರ ಜೀವಕ್ಕೆ ಕೇರಳದಲ್ಲಿ ಬೆಲೆಯಿಲ್ಲ

ಸಂಘ ಪರಿವಾರದ ಕಾರ್ಯಕರ್ತರ ಜೀವಕ್ಕೆ ಕೇರಳದಲ್ಲಿ ಬೆಲೆಯಿಲ್ಲ

ಸಂಘ ಪರಿವಾರದ ಕಾರ್ಯಕರ್ತರ ಜೀವಕ್ಕೆ ಕೇರಳದಲ್ಲಿ ಬೆಲೆಯಿರಬೇಕು ಎಂದಾದರೆ, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿದರೇ ಮಾತ್ರ ಸಾಧ್ಯ. ಕೇರಳ ಸರಕಾರ ಇದರಲ್ಲಿ ಮೂಗು ತೂರಿಸಿದರೆ ಇನ್ನಷ್ಟು ಹಿಂಸಾಚಾರ ನಡೆಯುವ ಸಾಧ್ಯತೆಯಿದೆ. ಕೇಂದ್ರ ಗೃಹ ಸಚಿವರ ಜೊತೆ ಈ ಸಂಬಂಧ ಮಾತುಕತೆ ನಡೆಸುತ್ತೇನೆಂದು ಜೇಟ್ಲಿ ಹೇಳಿದ್ದಾರೆ.

ಪಿಣರಾಯಿ ಸರಕಾರಕ್ಕೆ ಜೇಟ್ಲಿ ನೀಡಿದ ಎಚ್ಚರಿಕೆ

ಪಿಣರಾಯಿ ಸರಕಾರಕ್ಕೆ ಜೇಟ್ಲಿ ನೀಡಿದ ಎಚ್ಚರಿಕೆ

ಜುಲೈ 29ರಂದು ರಾಜೇಶ್ ಅವರನ್ನು 44 ಬಾರಿ ಇರಿದು ಹತ್ಯೆಗೈಯ್ಯಲಾಗಿತ್ತು. ಕ್ರೂರವಾಗಿ ಹತ್ಯೆ ಮಾಡಿ ನಮ್ಮ ಕಾರ್ಯಕರ್ತರನ್ನು ಭಯಪಡಿಸಬಹುದು ಎನ್ನುವ ನಿಮ್ಮ ನಿಲುವಾದರೆ ಅದನ್ನು ಮೊದಲು ಬದಲಿಸಿಕೊಳ್ಳಿ. ನಮ್ಮ ಕಾರ್ಯಕರ್ತರು ಇದಕ್ಕೆಲ್ಲಾ ಭಯ ಪಡುವುದಿಲ್ಲ ಎಂದು ಜೇಟ್ಲಿ, ಪಿಣರಾಯಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

English summary
Union Finance and Defence Minister Arun Jaitley on Kerala political violence: Had it happened in BJP-ruled states, awards would have been returned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X