Gujarat Assembly Elections 2022: 12 ಅಭ್ಯರ್ಥಿಗಳನ್ನು ಘೋಷಿಸಿದ ಆಮ್‌ ಆದ್ಮಿ ಪಾರ್ಟಿ

ಅಹಮದಾಬಾದ್, ನ.08: ಆಮ್ ಆದ್ಮಿ ಪಕ್ಷ (ಎಎಪಿ) ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ 12 ಅಭ್ಯರ್ಥಿಗಳನ್ನು ಸೋಮವಾರ ಘೋಷಿಸಿದ್ದು, ಇದರಲ್ಲಿ ಪಾಟಿದಾರ್ ನಾಯಕ ಅಲ್ಪೇಶ್ ಕಥಿರಿಯಾ ಸೇರಿದ್ದಾರೆ.

ಗುಜರಾತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಮುಖ ಸ್ಪರ್ಧಿ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ತನ್ನ 11 ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೊಸದಾಗಿ ಘೋಷಿಸಿರುವ 12 ಅಭ್ಯರ್ಥಿಗಳ ಜೊತೆಗೆ ಇದುವರೆಗೆ 130 ಅಭ್ಯರ್ಥಿಗಳನ್ನು ಘೋಷಿಸಿದೆ. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತಗಳ ಎಣಿಕೆ ನಡೆಯಲಿದೆ.

Gujarat Assembly Elections 2022: AAP declared 12 more candidates

ಪ್ರಸ್ತುತ ಮಾಜಿ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಕಿಶೋರ್ ಕನಾನಿ ಅವರ ಸೂರತ್ ನಗರದ ಪಾಟಿದಾರ್ ಪ್ರಾಬಲ್ಯದ ವರಚಾ ರೋಡ್ ಸ್ಥಾನದಿಂದ ಸ್ಪರ್ಧಿಸಲು ಅಲ್ಪೇಶ್ ಕಥಿರಿಯಾ ಅವರಿಗೆ ಎಎಪಿ ಟಿಕೆಟ್ ನೀಡಿದೆ. ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಹಾರ್ದಿಕ್ ಪಟೇಲ್ ಅವರ ನಿಕಟ ಸಹಾಯಕರಾಗಿದ್ದರು ಅಲ್ಪೇಶ್ ಕಥಿರಿಯಾ.

ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ನಾಯಕ ಧಾರ್ಮಿಕ್ ಮಾಳವೀಯ ಅವರನ್ನು ಸೂರತ್‌ನ ಓಲ್ಪಾಡ್ ಸ್ಥಾನದಿಂದ ಸ್ಪರ್ಧಿಸಲು ಟಿಕೇಟ್ ನೀಡಲಾಗಿದೆ. ಇಲ್ಲಿಯೂ ಬಿಜೆಪಿ ಆಡಳಿತದಲ್ಲಿದೆ.

ಎಎಪಿಯ 11 ನೇ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳೆಂದರೆ, ಬಿಟಿ ಮಹೇಶ್ವರಿ (ಗಾಂಧಿಧಾಮ್ ಸ್ಥಾನ), ಎಂಕೆ ಬೊಂಬಾಡಿಯಾ (ದಂಟಾ), ರಮೇಶ್ ನಭಾನಿ (ಪಾಲನ್‌ಪುರ್), ಮುಖೇಶ್ ಠಕ್ಕರ್ (ಕಾಂಕ್ರೇಜ್), ಲಾಲ್ಜಿ ಠಾಕೋರ್ (ರಾಧನ್‌ಪುರ್), ರಾಜೇಂದ್ರಸಿನ್ಹ್ ಪರ್ಮಾರ್ (ಮೋದಾಸ) ಮತ್ತು ಉಮೇಶ್ ಮಕ್ವಾನಾ (ಬೋಟಾಡ್). ರಾಹುಲ್ ಭುವಾ ಮತ್ತು ದಿನೇಶ್ ಜೋಶಿ ಕ್ರಮವಾಗಿ ರಾಜ್‌ಕೋಟ್ ಪೂರ್ವ ಮತ್ತು ರಾಜ್‌ಕೋಟ್ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಭೀಮಾಭಾಯಿ ಮಕ್ವಾನಾ ಅವರು ಪ್ರಸ್ತುತ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹೊಂದಿರುವ ಪೋರಬಂದರ್‌ನ ಕುಟಿಯಾನಾ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ.

Gujarat Assembly Elections 2022: AAP declared 12 more candidates

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಕಳೆದ ವರ್ಷ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ 27 ಸ್ಥಾನಗಳನ್ನು ಗೆದ್ದಿತ್ತು. ಇದರಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. ಕಾಂಗ್ರೆಸ್‌ಗಿಂತ ಬಿಜೆಪಿಗೆ ನಾವೇ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+