ಮೊದಲ ಹಂತದ ಮತದಾನ: ಗುಜರಾತಿನಲ್ಲಿ ಬಿಗಿಬಂದೋಬಸ್ತ್
ಗಾಂಧಿನಗರ, ಡಿಸೆಂಬರ್ 9: ಗುಜರಾತ್ ವಿಧಾನಸಭೆಗೆ ಇಂದು(ಡಿ.9) ಮೊದಲ ಹಂತದ ಮತದಾನ ನಡೆಯಲಿದ್ದು, ಎಲ್ಲೆಲ್ಲೂ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
1,74,000 ಪೊಲೀಸ್ ಸಿಬ್ಬಂದಿಗಳನ್ನು ಚುನಾವಣೆಯ ಸಂದರ್ಭದ ಭದ್ರತೆಗಾಗಿ ನೇಮಿಸಲಾಗಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಿಆರ್ ಪಿಎಫ್ ಯೋಧರನ್ನೂ ಕರೆಸಿಕೊಳ್ಳಲಾಗಿದೆ. (ಚಿತ್ರಕೃಪೆ: ಎಎನ್ ಐ)

ಕಾನೂನು ಸುವ್ಯವಸ್ಥೆ ಕಾಪಾಡಲು ಮನವಿಮಾಡಿಕೊಳ್ಳಲಾಗಿದೆ. ಎಲ್ಲಾ ಭೂತ್ ಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇವಿಎಂ (Electronic Voting Machines) ದುರುಪಯೋಗುವ ಸಾಧ್ಯತೆಗಳನ್ನು ತಪ್ಪಿಸಲು ವೋಟರ್ ವೆರಿಫೈಯೇಬಲ್ ಪೇಫರ್ ಆಡಿಟ್ ಟ್ರೇಲ್(ವಿವಿಪಿಎಟಿ) ಅಳವಡಿಸಲಾಗಿದೆ.
ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನ 89 ಕ್ಷೇತ್ರಗಳಲ್ಲಿ ಇಂದು(ಡಿ.9) ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಲಿದ್ದು ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು 93 ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications