ಹಾಸ್ಯ: ಅರ್ಥವಾಗದ ಸಂಗತಿಗಳ ಪಟ್ಟಿಯಲ್ಲಿ ಜಿಎಸ್ ಟಿಗೆ ಮೂರನೇ ಸ್ಥಾನ!

ಸದ್ಯಕ್ಕೆ ಎಷ್ಟು ಬರೆದರೂ ಮುಗಿಯದು ಸರಕಾಗಿ ಈ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ತನ್ನ ಪ್ರಾಬಲ್ಯ ಮೆರೆದಿದೆ. ಎಲ್ಲೆಲ್ಲೂ ಅದರದೇ ಚರ್ಚೆ! ಈಗಾಗಲೇ ಜಿಎಸ್ ಟಿ ಕುರಿತು ನೂರಾರು ಜೋಕುಗಳು ಹರಿದಾಡಿವೆ. ಹರಿದಾಡುತ್ತಿವೆ.

ಅರ್ಥವಾಗಿದೆಯೋ ಬಿಟ್ಟಿದೆಯೋ, ಒಟ್ಟಿನಲ್ಲಿ ಯಾರ ಬಾಯಲ್ಲಿ ಕೇಳಿದರೂ ಜಿಎಸ್ ಟಿ ಮಾತಂತೂ ಯಥೇಚ್ಛವಾಗಿ ಕೇಳಿಬರುತ್ತಿರೋದಂತೂ ಸತ್ಯ.

GST is the 3rd subject which can not understand to common people: Humor

ಇಂತಿಪ್ಪ ಜಿಎಸ್ ಟಿ ಕುರಿತು ಎಲ್ಲೆಲ್ಲೂ ಜೋಕುಗಳು ಹರಿದಾಡುತ್ತಿವೆ. 'ಅರ್ಥವಾಗದ ಸಂಗತಿಗಳ ಪಟ್ಟಿಯಲ್ಲಿ ಜಿಎಸ್ ಟಿಗೆ ಮೂರನೇ ಸ್ಥಾನ' ಅನ್ನೋದು ಅಂಥ ಜೋಕುಗಳಲ್ಲೊಂದು.
ಎರಡನೇ ಸ್ಥಾನವನ್ನು ಡಕ್ ವರ್ಥ್ ಲೂಯಿಸ್ ನಿಯಮ ಪಡೆದಿದ್ದರೆ, ಅಗ್ರಸ್ಥಾನ ಯಾವುದಕ್ಕೆ ಗೊತ್ತಾ? ಪತ್ನಿಯ ಮೂಡಿಗಂತೆ! ಹೆಂಡತಿಯರ ಮೂಡು ಅರ್ಥವಾಗದ ಸಂಗತಿಗಳ ಪಟ್ಟಿಯಲ್ಲಿ ಎಂದಿನಂತೇ ಮೊದಲ ಸ್ಥಾನ ಗಳಿಸಿದೆಯಂತೆ!

"ಜಿಎಸ್ ಟಿ ಅಂದ್ರೆ ನಂಗಂತೂ ಏನು ಅಂತ ಗೊತ್ತಿಲ್ಲ, ಆದ್ರೆ ಇದನ್ನ ಎಡಪಕ್ಷಗಳು, ಕಾಂಗ್ರೆಸ್ ನವರು ಎಲ್ಲಾ ವಿರೋಧಿಸುತ್ತಿದ್ದಾರೆ ಅಂದ್ರೆ ಇದರಲ್ಲಿ ದೇಶಕ್ಕೆ ಒಳಿತಾಗೋ ಅಂಥದ್ದೇನೋ ಇದೆ ಅನ್ನೋದಂತೂ ಅರ್ಥವಾಗ್ತಿದೆ" ಎಂಬ ಜೋಕೂ ಹರಿದಾಡ್ತಾ ಇದೆ.
ಒಟ್ಟಿನಲ್ಲಿ ಅರ್ಥವಾದವರೆಲ್ಲ ಜಿಎಸ್ ಟಿಯನ್ನು ಒಳಿತು-ಕೆಡುಕು ಎಂಬ ಎರಡು ಭಾಗವಾಗಿ ನೋಡುತ್ತಿದ್ದರೆ, ಅರ್ಥವಾಗದವರೆಲ್ಲ ಜಿಎಸ್ ಟಿಯನ್ನು ಉತ್ತಮ ಹಾಸ್ಯದ ಸರಕಾಗಿ ಬಳಸಿಕೊಳ್ಳುತ್ತಿರುವುದಂತೂ ಸತ್ಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+