ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಪಿಯಿಂದ ಉತ್ಪಾದನೆ ದರ, ಅಭಿವೃದ್ಧಿ ವೇಗ ಹೆಚ್ಚಳ: ಮೋದಿ

By Sachhidananda Acharya
|
Google Oneindia Kannada News

ನವದೆಹಲಿ, ಜುಲೈ 1: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಜಿಎಸ್ಟಿ ಯಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಧನ್ಯವಾದ ಹೇಳಿದ್ದಾರೆ.

"ಜಿಎಸ್ಟಿ ದೇಶದಲ್ಲಿ ಅಭಿವೃದ್ಧಿ, ಸರಳತೆ ಮತ್ತು ಪಾರದರ್ಶಕತೆಯನ್ನು ತಂದಿದೆ. ಉತ್ಪಾದನೆ ಹೆಚ್ಚಳವಾಗಿದೆ, ಉದ್ಯಮ ಸ್ನೇಹಿ ವಾತಾವರಣ ಮತ್ತಷ್ಟು ಉತ್ತಮವಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಇದರಿಂದ ಲಾಭವಾಗಿದೆ," ಎಂದು ನರೇಂದ್ರ ತಮ್ಮ ಸರಣಿ ಟ್ಟೀಟ್ ನಲ್ಲಿ ತಿಳಿಸಿದ್ದಾರೆ.

GST has brought a positive change in the Indian economy: Modi

ಜಿಎಸ್ ಟಿ ಜಾರಿಗೆ ಒಂದು ವರ್ಷ, ಆಡಿಟರ್ ಹೇಳಿಕೊಂಡ ಅನುಭವಜಿಎಸ್ ಟಿ ಜಾರಿಗೆ ಒಂದು ವರ್ಷ, ಆಡಿಟರ್ ಹೇಳಿಕೊಂಡ ಅನುಭವ

"ಜಿಎಸ್ಟಿಗೆ ಒಂದು ವರ್ಷ ತುಂಬಿದ ಈ ವಿಶೇಷ ಸಂದರ್ಭದಲ್ಲಿ ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜಿಎಸ್ಟಿ ಒಕ್ಕೂಟ ವ್ಯವಸ್ಥೆಯ ಪರಸ್ಪರ ಸಹಕಾರ ಮತ್ತು 'ಟೀಮ್ ಇಂಡಿಯಾ' ಸ್ಪಿರಿಟ್ ಗೆ ರೋಮಾಂಚಕ ಉದಾಹರಣೆ," ಎಂದು ಹೇಳಿದ ಮೋದಿ, 'ಜಿಎಸ್ಟಿ ಭಾರತೀಯ ಆರ್ಥಿಕತೆಯಲ್ಲಿ ಧನಾತ್ಮಕ ಬದಲಾವಣೆ ತಂದಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

2017ರ ಜುಲೈ 1ರಂದು ದೇಶದಾದ್ಯಂತ ಏಕರೂಪದ ತೆರಿಗೆ ಜಿಎಸ್ಟಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿತ್ತು.

English summary
I congratulate the people of India on the special occasion of GST completing 1 year. A vibrant example of cooperative federalism and a ‘Team India’ spirit, GST has brought a positive change in the Indian economy,” said PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X