ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ಜಿಎಸ್‌ಟಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

By Prasad
|
Google Oneindia Kannada News

ನವದೆಹಲಿ, ಆಗಸ್ಟ್ 03 : ರಾಷ್ಟ್ರದಾದ್ಯಂತ ಏಕರೂಪ ತೆರಿಗೆಯನ್ನು ಜಾರಿಗೆ ತರುವ, ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು. ಲೋಕಸಭೆಯಲ್ಲಿ ಕಳೆದ ವರ್ಷವೇ ಈ ಮಸೂದೆಗೆ ಅಂಗೀಕಾರ ದೊರೆತಿತ್ತು.

ಸತತ 7 ಗಂಟೆಗಳ ಕಾಲ ಬಿಸಿಬಿಸಿ ಚರ್ಚೆಯಾದ ನಂತರ 'ಒಂದೇ ರಾಷ್ಟ್ರ ಒಂದೇ ತೆರಿಗೆ' ನೀತಿಯನ್ನು ಪ್ರತಿಪಾದಿಸುವ, ತೆರಿಗೆ ಮೇಲಿನ ತೆರಿಗೆಯನ್ನು ಇಳಿಸುವ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಮಸೂದೆಯ ಪರವಾಗಿ ಒಟ್ಟು 203 ಮತಗಳು ಬಿದ್ದರೆ, ವಿರುದ್ಧವಾಗಿ ಒಂದೂ ಮತ ಬೀಳಲಿಲ್ಲ. [ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

GST Constitutional Amendment Bill passed in RS

ಮಸೂದೆ ಅಂಗೀಕರಿಸಲಾಗಿದೆಯಾದರೂ, ತೆರಿಗೆ ಯಾವ ರೀತಿ ಇರಲಿದೆ, ಇದರಿಂದ ಯಾವ ಉದ್ಯಮಕ್ಕೆ ಲಾಭವಾಗಲಿದೆ, ಯಾರಿಗೆ ನಷ್ಟವಾಗಲಿದೆ, ಯಾವ್ಯಾವ ಉತ್ಪನ್ನಗಳ ಬೆಲೆ ಏರಲಿಗೆ ಅಥವಾ ಇಳಿಯಲಿದೆ ಎಂಬುದು ಮುಂದಿನ ವಾರಗಳಲ್ಲಿ ದೊರೆಯಲಿದೆ.

ಕೆಲವೊಂದು ರಾಜ್ಯಗಳಲ್ಲಿ ಜನರಿಗೆ ಹೊರೆಯಾಗಿರುವ ತೆರಿಗೆಗಳನ್ನು ಸರಿಸಿ, ರಾಷ್ಟ್ರವ್ಯಾಪಿ ಪರೋಕ್ಷ ತೆರಿಗೆಯನ್ನು ಏಕರೂಪದಲ್ಲಿ ತರಬೇಕೆಂಬುದೇ ಸರಕು ಮತ್ತು ಸೇವಾ ತೆರಿಗೆ ಮಸೂದೆಯ ಮೂಲ ಉದ್ದೇಶ. ಹಲವಾರು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಈ ನೀತಿಯನ್ನು ಜಾರಿಗೆ ತಂದಿವೆ.

English summary
The Rajya Sabha passed the Goods and Services Tax (GST) Constitutional Amendment Bill on Wednesday which the Lok Sabha had already approved last year. After a marathon, seven-hour debate, India's landmark Goods And Services Tax bill was passed unopposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X