ಕಾಶ್ಮೀರ: ಉಗ್ರರಿಂದ ಗ್ರೆನೇಡ್ ದಾಳಿ, ಕೂದಲೆಳೆ ಅಂತರದಲ್ಲಿ ಸಚಿವ ಪಾರು
ಜಮ್ಮು ಮತ್ತು ಕಾಶ್ಮೀರ, ಸೆಪ್ಟೆಂಬರ್ 21: ಇಲ್ಲಿನ ಪುಲ್ವಾಮ ಜಿಲ್ಲೆಯ ಟ್ರಾಲ್ ನಲ್ಲಿ ಸಿಆರ್‌ಪಿಎಫ್ ಪೊಲೀಸರ ತಂಡದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ.
ಜನನಿಬಿಡ ಟ್ರಾಲ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಿಆರ್‌ಪಿಎಫ್ ಪೊಲೀಸರ ತಂಡದ 11.45 ನಿಮಿಷಕ್ಕೆ ಉಗ್ರರು ಗ್ರೆನೇಡ್ ಎಸೆದಿದ್ದಲ್ಲದೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದ ಹಿರಿಯ ಸಚಿವ ನಯೀಮ್ ಅಖ್ತರ್ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಪಾರಾಗಿದ್ದಾರೆ.

ದಾಳಿಯಲ್ಲಿ 7 ಸಿಆರ್‌ಪಿಎಫ್ ಪೊಲೀಸರು, 10 ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಮೂವರು ನಾಗರಿಕರು ಈ ದಾಳಿಯಲ್ಲಿ ಅಸುನೀಗಿದ್ದರೆ, 6 ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications