ಕೇರಳದಲ್ಲಿ ಸ್ಕೂಲ್‌ ಬಸ್‌ಗೆ ಜಿಪಿಎಸ್ ಕಡ್ಡಾಯ: ಕರ್ನಾಟಕದಲ್ಲಿ ಯಾವಾಗ?

ಬೆಂಗಳೂರು, ಅ.1: ಕೇರಳ ರಾಜ್ಯದಲ್ಲಿ ಪ್ರತಿ ಶಾಲಾ ಬಸ್‌ಗಳಲ್ಲಿ ಜಿಪಿಎಸ್ ವ್ಯವಸ್ಥೆ ಕಡ್ಡಾಯ ವ್ಯವಸ್ಥೆ ಇಂದಿನಿಂದ(ಅ.1)ರಿಂದ ಜಾರಿ ಬರಲಿದೆ.

ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಬಸ್‌ಗಳಲ್ಲಿ ಮಕ್ಕಳೊಂದಿಗೆ ಚಾಲಕರ ಅಸಭ್ಯ ವರ್ತನೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಹಾಗಾಗಿ ಪ್ರತಿ ಶಾಲಾ ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಉತ್ತಮ ಮಾರ್ಗವಾಗಿದೆ.

ಮೊದಲ ಹಂತದಲ್ಲಿ ಖಾಸಗಿ ಹಾಗೂ ಅಂಗೀಕೃತ ಶಾಲಾ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗುತ್ತದೆ, ಬಳಿಕ ಖಾಸಗಿ ಬಸ್, ಕೇರಳ ರಾಜ್ಯ ಸಾರಿಗೆ ಸಂಸ್ಥೆ ಬಸ್, ಸರಕು ಲಾರಿ, ಟ್ಯಾಂಕರ್ ಮೊದಲಾದ ಸಾರ್ವಜನಿಕ ಸೇವೆಯ ವಾಹನಗಳಲ್ಲಿ ಕಡ್ಡಾಯವಾಗೊಳಿಸಲಾಗುತ್ತದೆ.

GPS mandatory for school bus in Kerala

ಶಾಲಾ ವಾಹನಗಳಲ್ಲಿ ಅಳವಡಿಸಲು ಅಂಗೀಕೃತ 15 ಜಿಪಿಎಸ್ ತಯಾರಿಕಾ ಕಂಪನಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇದರ ಹೊರತು ಬೇರೆ ಕಂಪನಿಗಳ ಜಿಪಿಎಸ್ ಅಳವಡಿಸಿದರೆ ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕೇಂದ್ರ ಸಾರಿಗೆ ಸಚಿವಾಲಯದ ಅನುಮತಿ ಇರುವ ಸಂಸ್ಥೆಗಳ ಜಿಪಿಎಸ್ ಅಳವಡಿಸಲು ಮಾತ್ರ ಅವಕಾಶ ನೀಡಲಾಗಿದೆ.

ಪ್ರತಿ ವಾಹನಕ್ಕೆ 10 ಸಾವಿರ ರೂ ವೆಚ್ಚ ಮಾಡಲಾಗುತ್ತಿದೆ, ಆದರೆ ಸರ್ಕಾರಿ ಶಾಲೆಗಳಲ್ಲಿರುವ ಶಾಲಾ ಬಸ್ ಗಳಲ್ಲಿ ಜಿಪಿಎಸ್ ಅಳವಡಿಸುವ ಕುರಿತು ಯಾವುದೇ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ನೀಡಿಲ್ಲ.

ಅತಿ ವೇಗದಲ್ಲಿ ಚಲಿಸುವ ವಾಹನ, ಅಪಘಾತ ಸೃಷ್ಟಿಸುವ ರೀತಿಯ ಚಾಲನೆ, ಹೆದ್ದಾರಿಗಳಲ್ಲಿ ವಾಹನ ಅನಿಯಂತ್ರಿತ ನಿಲುಗಡೆಯನ್ನು ಪತ್ತೆ ಮಾಡಲು ಜಿಪಿಎಸ್ ಅಳವಡಿಸಲಾಗುತ್ತಿದೆ. ಆ ಮಾಹಿತಿ ತಕ್ಷಣ ಎಸ್‌ಎಂಎಸ್ ಮೂಲಕ ಇಲಾಖೆ ಮುಖ್ಯಸ್ಥರು, ಶಾಲಾ ಅಧಿಕಾರಿಗಳು, ಪೊಲೀಸ್ ಠಾಣೆ, ಅಧಿಕಾರಿಗಳಿಗೆ ಲಭ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+