ಜಿಎಸ್ ಟಿ ರಾಯಭಾರಿಯಾಗಿ ಅಮಿತಾಭ್ ಬಚ್ಚನ್
ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ ಟಿ) ರಾಯಭಾರಿಯಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನೇಮಕ. ಜುಲೈ 1ರಿಂದ ಜಾರಿಗೊಳ್ಳಲಿರುವ ಜಿಎಸ್ ಟಿ. ಈ ತೆರಿಗೆ ಬಗ್ಗೆ ಅಮಿತಾಭ್ ಬಚ್ಚನ್ ನಟನೆಯ 40 ಸೆಕೆಂಡ್ ಗಳ ಜಾಹೀರಾತು ಈಗಾಗಲೇ ಸಿದ್ಧ.
ನವದೆಹಲಿ, ಜೂನ್ 19: ಮುಂದಿನ ತಿಂಗಳ 1ರಿಂದ ಜಾರಿಗೊಳ್ಳಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ ಟಿ) ರಾಯಭಾರಿಯಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರೀಯ ಅಬಕಾರಿ ಹಾಗೂ ಸೀಮಾ ಸುಂಕ ಇಲಾಖೆಯು ಈಗಾಗಲೇ ಅಮಿತಾಭ್ ಅವರನ್ನು ಸಂಪರ್ಕಿಸಿ, ಜಿಎಸ್ ಟಿ ರಾಯಭಾರತ್ವ ವಹಿಸಿಕೊಳ್ಳುವ ಬಗ್ಗೆ ಅವರ ಒಪ್ಪಿಗೆ ಪಡೆದಿದೆ.
ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

ಜಿಎಸ್ ಟಿ ಮಹತ್ವವನ್ನು ಜನರಿಗೆ ಮನಗಾಣಿಸುವ ನಿಟ್ಟಿನಲ್ಲಿ 40 ಸೆಕೆಂಡ್ ಗಳ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ಮಾಧ್ಯಮಗಳಲ್ಲಿ ಬಿತ್ತರಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications