ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ :ತುಟ್ಟಿಭತ್ಯೆ ಹೆಚ್ಚಳ
ನವದೆಹಲಿ, ಮೇ 21:ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದ್ದು, ಇದರಿಂದ 1.5 ಕೋಟಿ ನೌಕರರಿಗೆ ಸಹಾಯವಾಗಲಿದೆ.
ಇದು ಏಪ್ರಿಲ್ 1, 2021ರಿಂದಲೇ ಅನ್ವಯವಾಗುವಂತೆ ಘೋಷಿಸಲಾಗಿದ್ದು, ಇದರಿಂದ ಕೇಂದ್ರ ವಲಯದ ನೌಕರರು ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ದರ ಹೆಚ್ಚಳಕ್ಕೂ ಕಾರಣವಾಗುತ್ತದೆ.
ಕೇಂದ್ರದ ಉದ್ಯೋಗಿಗಳು ಈವರೆಗೆ ಶೇ.17ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಕೊರೊನಾ ಕಾರಣ ಅವರಿಗೆ 2020ರ ಜ.1, ಜು.1 ಹಾಗೂ 2021ರ ಜ.1ರ ಡಿಎ ಕಂತು ಬಿಡುಗಡೆ ಆಗಿರಲಿಲ್ಲ.

ಕೇಂದ್ರ ಸರ್ಕಾರದ ರೈಲ್ವೆ ಆಡಳಿತ, ಗಣಿಗಳು, ತೈಲ ಕ್ಷೇತ್ರ, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಹಬ್ಬಿದ್ದು, ಜನರನ್ನು ಆತಂಕ್ಕೆ ದೂಡಿದೆ ಇಂತಹ ಸಂದರ್ಭದಲ್ಲಿ ಕೇಂದ್ರ ವಲಯದ ವಿವಿಧ ನಿಗದಿತ ಉದ್ಯೋಗದಲ್ಲಿ ತೊಡಗಿರುವ ವಿವಿಧ ವರ್ಗದ ಕಾರ್ಮಿಕರಿಗೆ ನೆರವಾದಂತಾಗುತ್ತದೆ.
ಜನವರಿ 1, 2020, ಜನವರಿ 1, 2021 ಹಾಗೂ ಜುಲೈ 1, 2021ರ ಅನ್ವಯ ಡಿಎ ಪರಿಷ್ಕೃತ ಕಂತು ಜುಲೈ 1, 2021ಕ್ಕೆ ಕೈ ಸೇರಲಿದೆ. ಡಿಎ, ಡಿಆರ್ ತಡೆದಿದ್ದರಿಂದ ಸರ್ಕಾರಕ್ಕೆ ಒಟ್ಟಾರೆ, 37,530.08 ಕೋಟಿ ರು ಉಳಿತಾಯವಾಗಲಿದೆ .












Click it and Unblock the Notifications