• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ DL, RC, ವಾಹನ ದಾಖಲೆಗಳ ಅವಧಿ ವಿಸ್ತರಣೆ

|
Google Oneindia Kannada News

ನವದೆಹಲಿ, ಜೂನ್ 17: ದೇಶದಲ್ಲಿ ಕೊರೊನಾ ಸೋಂಕಿನ ಕಾರಣವಾಗಿ ವಾಹನ ದಾಖಲೆಗಳ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.

ವಾಹನಗಳ ಚಾಲನಾ ಪರವಾನಗಿ (DL), ನೋಂದಣಿ ಪತ್ರ (RC), ಫಿಟ್ನೆಸ್‌ ಪ್ರಮಾಣ ಪತ್ರ ಸೇರಿದಂತೆ ಮೋಟಾರು ವಾಹನ ಇತರೆ ದಾಖಲೆಗಳ ಮಾನ್ಯತೆಯ ಅವಧಿಯನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಕೊನೆಯ ಬಾರಿ ಈ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿತ್ತು.

ಡಿಎಲ್, ಆರ್‌ಸಿ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರದ ಆದೇಶಡಿಎಲ್, ಆರ್‌ಸಿ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರದ ಆದೇಶ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 2020ರೊಳಗೆ ಅವಧಿ ಮುಗಿದ ಅಥವಾ ಸೆಪ್ಟೆಂಬರ್ 30, 2021 ಒಳಗೆ ಮುಕ್ತಾಯಗೊಳ್ಳಲಿರುವ ದಾಖಲೆಗಳಿಗೆ ಈಗ ಸೆಪ್ಟೆಂಬರ್ 30ರವರೆಗೂ ಮಾನ್ಯತೆ ನೀಡಲಾಗಿದೆ.

ಲಾಕ್‌ಡೌನ್ ಕಾರಣವಾಗಿ ನವೀಕರಿಸಲಾಗದ ದಾಖಲೆಗಳು ಮಾನ್ಯವಾಗಿರಲಿವೆ ಎಂದು ಉಲ್ಲೇಖಿಸಿ ಸಚಿವಾಲಯ ಸಂಬಂಧಿತ ಎಲ್ಲಾ ಇಲಾಖೆಗಳಿಗೆ ಆದೇಶ ಹೊರಡಿಸಿದೆ.

ದೇಶಾದ್ಯಂತ ಕೊರೊನಾ ಸೋಂಕಿನ ಕಾರಣವಾಗಿ ವಾಹನ ದಾಖಲೆಗಳ ಮಾನ್ಯತೆಯ ಅವಧಿಯನ್ನು ಇದುವರೆಗೂ ಆರು ಬಾರಿ ವಿಸ್ತರಣೆ ಮಾಡಲಾಗಿದೆ. ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಈ ಮಾನ್ಯತೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ದೇಶಾದ್ಯಂತ ಲಾಕ್‌ಡೌನ್‌ ಇದ್ದ ಕಾರಣ ಬಹುತೇಕ ಸರ್ಕಾರಿ ಕಚೇರಿಗಳ ಕಾರ್ಯ ಸ್ಥಗಿತವಾಗಿತ್ತು. ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ಸಂಬಂಧಿಸಿದ ನಾಗರಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

   Weather forecast ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ !! | Oneindia Kannada

   ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಆದೇಶವನ್ನು ತಕ್ಷಣವೇ ಜಾರಿಗೆ ತರುವಂತೆ ಆದೇಶಿಸಲಾಗಿದೆ.

   English summary
   The government on Thursday extended the validity of motor vehicle documents like driving licence (DL), registration certificate (RC) and permits till September 30, 2021, in view of the ongoing COVID-19 pandemic
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X