ಆನ್‌ಲೈನ್ ಗೇಮಿಂಗ್ ನಿಷೇಧ: ವಾರ್ಷಿಕ 45,00,00,000 ಜನ ಕಳೆದುಕೊಳ್ಳುವ ಹಣ ಬರೋಬ್ಬರಿ ₹20,000 ಕೋಟಿ ..
Ban on real money games: ಇಷ್ಟು ದಿನ ಮೊಬೈಲ್ ಗೇಮ್‌ಗಳು, ಆನ್‌ಲೈನ್ ಬೆಟ್ಟಿಂಗ್‌ಗಳು ಜೊರಾಗಿ ನಡೆಯುತ್ತಿದ್ದವು. ಇದರಿಂದ ಬಹುತೇಕ ಮಂದಿ ಹಣ ಕಳೆದುಕೊಂಡು ಬೀದಿದೆ ಬಂದವರು ಇದ್ದಾರೆ. ಇದೀಗ ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅನ್ನು ಅಂಗೀಕರಿಸಲಾಗಿದೆ. ಹಾಗಾದ್ರೆ ಯಾವೆಲ್ಲಾ ಗೇಮ್‌ಗಳು ರದ್ದು ಹಾಗೂ ಇದನ್ನು ಉಲ್ಲಂಘನೆ ಮಾಡುವವರಿಗೆ ದಂಡ ಹಾಗೂ ಶಿಕ್ಷೆ ಅವಧಿ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇನ್ಮುಂದೆ ಆನ್‌ಲೈನ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧ ಆಗಲಿದೆ. ಆನ್‌ಲೈನ್ ಗೇಮಿಂಗ್ ನಿಷೇಧದ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಪ್ರವರ್ತಕರು ಮತ್ತು ಅನುಮೋದಕರಿಗೆ ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ ಬೆಟ್ಟಿಂಗ್‌ನಂತಹ ಆನ್‌ಲೈನ್ ಗೇಮಿಂಗ್ ಅನ್ನು ನಿಯಂತ್ರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಲೋಕಸಭೆಯು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಅಂಗೀಕರಿಸಿದೆ. ಇದು ಫ್ಯಾಂಟಸಿ ಕ್ರೀಡೆಗಳು, ರಮ್ಮಿ ಮತ್ತು ಪೋಕರ್‌ನಂತಹ ಹಣದ ಆನ್‌ಲೈನ್ ಆಟಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಈ ನಿಯಮ ಉಲ್ಲಂಷಿಸಿದಂತಹ ಅಪರಾಧಿಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತದೆ. ಸೆಲೆಬ್ರೆಟಿಗಳು ಮತ್ತು ಪ್ರಭಾವಿಗಳಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ವರದಿಗಳ ಪ್ರಕಾರ, ಬೆಟ್ಟಿಂಗ್ ಆನ್‌ಲೈನ್ ಗೇಮ್‌ನಿಂದ ಪ್ರತಿವರ್ಷ 45,00,00,000 ಜನರು ಕಳೆದುಕೊಳ್ಳುವ ಕಳೆದುಕೊಳ್ಳುವ ಹಣ ಒಂದಲ್ಲ, ಎರಡಲ್ಲ.. ಬರೋಬ್ಬರಿ ₹20,000 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಇದರಿಂದ ಅವರು ತಾವು ಅಷ್ಟೇ ಅಲ್ಲದೆ, ಕುಟುಂಬವನ್ನು ಬೀದಿಗೆ ತಂಡ ಘಟನೆಗಳು ನಡೆದಿವೆ. ಆದ್ದರಿಂದ ಲೋಕಸಭೆಯಲ್ಲಿ ಈ ಆನ್‌ಲೈನ್ ಗೇಮ್‌ಗಳನ್ನು ನಿಷೇಧ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಗಮನಿಸಲೇಬೇಕಾದ ಪ್ರಮುಖ ಅಂಶಗಳು
* ಯಾರೇ ಆಗಿರಲಿ ಭಾರತದಲ್ಲಿ ಆನ್‌ಲೈನ್ ಮನಿ ಗೇಮ್‌ಗಳು ಅಥವಾ ಆನ್‌ಲೈನ್ ಮನಿ ಗೇಮಿಂಗ್ ಸೇವೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ.
* ಆನ್‌ಲೈನ್ ಮನಿ ಗೇಮ್‌ಗಳಿಗೆ ಸಂಬಂಧಿಸಿದ ಜಾಹೀರಾತುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ಕೂಡ ನಿಷೇಧಿಸಲಾಗಿದೆ.
* ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಆನ್‌ಲೈನ್ ಮನಿ ಗೇಮ್‌ಗಳಿಗೆ ಪಾವತಿಗಳನ್ನು ಸರಳಗೊಳಿಸುವುದನ್ನು ನಿರ್ಬಂಧಿಸಲಾಗಿದೆ.
* ಆನ್‌ಲೈನ್ ಮನಿ ಗೇಮ್‌ಗಳ ಪ್ರಾಯೋಜಕರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1,00,00,000 ವರೆಗೆ ದಂಡ ವಿಧಿಸಲಾಗುತ್ತದೆ.
* ಆನ್‌ಲೈನ್ ಮನಿ ಗೇಮ್‌ಗಳ ಜಾಹೀರಾತು ಮಾಡಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50,00,000 ವರೆಗೆ ದಂಡ ವಿಧಿಸಲಾಗುತ್ತದೆ.
* ಆನ್‌ಲೈನ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗಿನ ಹಣಕಾಸಿನ ವಹಿವಾಟುಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹1,00,00,000 ವರೆಗೆ ದಂಡ
* ಮಸೂದೆಯು, ಯಾವುದೇ ಆನ್‌ಲೈನ್ ಹಣದ ಗೇಮಿಂಗ್ ಸೇವೆಯನ್ನು ನೀಡುವುದು, ಸಹಾಯ ಮಾಡುವುದು, ಪ್ರೋತ್ಸಾಹಿಸುವುದು, ಪ್ರೇರೇಪಿಸುವುದನ್ನು ನಿಷೇಧಿಸಲಾಗಿದೆ ಮತ್ತು ಅದನ್ನು ಶಿಕ್ಷಾರ್ಹ ಅಪರಾಧ ಎಂದ ಘೋಷಿಸಿದೆ
* ಅಷ್ಟೇ ಅಲ್ಲದೆ, ಯಾವುದೇ ಆನ್‌ಲೈನ್ ಹಣದ ಆಟಗಳಿಗೆ ಪಾವತಿಗಾಗಿ ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ಯಾವುದೇ ವ್ಯಕ್ತಿಯಿಂದ ವಹಿವಾಟು ಅಥವಾ ಹಣವನ್ನು ಅಧಿಕೃತಗೊಳಿಸುವ ಮೂಲಕ ಹಣವನ್ನು ವರ್ಗಾಯಿಸುವುದನ್ನು ನಿಷೇಧಿಸಲಾಗಿದೆ.












Click it and Unblock the Notifications