ಸರ್ಕಾರಿ ಸಂಸ್ಥೆ ಮಾರಾಟ, ಉದ್ಯೋಗ ನಾಶ, ಮೋದಿ ಸಾಧನೆ: ರಾಹುಲ್
ನವದೆಹಲಿ,ಸೆ. 8: ಕೊರೊನಾವೈರಸ್ ಸೋಂಕಿನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಜನತೆಗೆ ಆರ್ಥಿಕ ಬೆಂಬಲ, ಸರ್ಕಾರಿ ಸಂಸ್ಥೆಗಳಿಗೆ ಬಲ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸಬೇಕಾಗಿರುವ ಮೋದಿ ಸರ್ಕಾರವು ಎಲ್ಲವನ್ನು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Recommended Video
ಭಾರತದ ಎರಡನೇ ಅತಿದೊಡ್ಡ ರೀಟೈಲರ್, ಮೂರನೇ ಅತಿದೊಡ್ಡ ರಿಫೈನರಿ ಸಂಸ್ಥೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ ಸೇರಿರುವ ಸುಮಾರು ಶೇ 52.98 ಪಾಲನ್ನು ಮಾರಾಟಕ್ಕೆ ಸರ್ಕಾರ ಮುಂದಾಗಿರುವುದನ್ನು ರಾಹುಲ್ ಟೀಕಿಸಿದ್ದಾರೆ.
"ಅನಗತ್ಯ ಖಾಸಗೀಕರಣದ ಮೂಲಕ ದುರಂತಕ್ಕೆ ನಾಂದಿ ಹಾಡುತ್ತಿದ್ದಾರೆ. ಯುವ ಜನಾಂಗಕ್ಕೆ ಉದ್ಯೋಗ ಬೇಕಾಗಿದ್ದು, ಸರ್ಕಾರ ಉದ್ಯೋಗ ಸೃಷ್ಟಿ ಬದಲು ಉದ್ಯೋಗ ಅವಕಾಶವನ್ನು ನಾಶಪಡಿಸುತ್ತಿದೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಿ ಖಾಸಗಿಯವರ ಕೈಗೆ ನೀಡುತ್ತಿದೆ'' ಎಂದು ರಾಹುಲ್ ಕಿಡಿಕಾರಿದ್ದಾರೆ.

ಎಲ್ ಐಸಿ ಪಾಲು ಮಾರಾಟ
ಜೀವ ವಿಮಾ ನಿಗಮ(ಎಲ್ ಐಸಿ) ಕ್ಕೆ ಸೇರಿದ ಶೇ 25ರಷ್ಟು ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ವರದಿ ಬಂದಿದೆ. ಸರ್ಕಾರದ ಕ್ರಮವನ್ನು ಖಂಡಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ.
मोदी जी ‘सरकारी कंपनी बेचो' मुहीम चला रहे हैं।
— Rahul Gandhi (@RahulGandhi) September 8, 2020
खुद की बनायी आर्थिक बेहाली की भरपाई के लिए देश की सम्पत्ति को थोड़ा-थोड़ा करके बेचा जा रहा है।
जनता के भविष्य और भरोसे को ताक पे रखकर LIC को बेचना मोदी सरकार का एक और शर्मनाक प्रयास है। pic.twitter.com/W4OjDJ1nY7
ಮೋದಿ ಅವ್ರೇ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವ ಅಭಿಯಾನ ನಡೆಸುತ್ತಿದ್ದೀರಾ, ಸ್ವಯಂ ಅಪರಾಧದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಮುಚ್ಚಿ ಹಾಕಲು ಸರ್ಕಾರದ ಆಸ್ತಿಯನ್ನು ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ. ಇದು ನಾಚಿಕೆಗೇಡಿನ ಕ್ರಮ ಎಂದು ಕಿಡಿಕಾರಿದ್ದಾರೆ.












Click it and Unblock the Notifications