ಗೃಹಬಳಕೆ ಇಂಧನಗಳ ಸಬ್ಸಿಡಿ ವಿಸ್ತರಣೆಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ, ಜನವರಿ 09: ಲೋಕಸಭೆ ಚುನಾವಣೆ 2019ಕ್ಕೆ ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ, ತನ್ನ ಜನಪರ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಗೃಹಬಳಕೆ ಇಂಧನಗಳ ಸಬ್ಸಿಡಿಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಕಂಡು ಬಂದಿದೆ.

ಎಲ್.ಪಿ.ಜಿ. ಮತ್ತು ಸೀಮೆಎಣ್ಣೆಗೆ ನೀಡುತ್ತಿರುವಂತೆಯೇ ನೈಸರ್ಗಿಕ ಅನಿಲ ಮತ್ತು ಜೈವಿಕ ಅನಿಲ ಸೇರಿದಂತೆ ಎಲ್ಲಾ ರೀತಿಯ ಅಡುಗೆ ಇಂಧನಗಳಿಗೆ ಸಬ್ಸಿಡಿ ನೀಡಲು ಮೋದಿ ಸರ್ಕಾರ ನಿರ್ಧರಿಸಿದೆ.

ಅಡುಗೆ ಇಂಧನಗಳ ಸಬ್ಸಿಡಿಯ ಕುರಿತಾಗಿ ನೀತಿ ಆಯೋಗದಲ್ಲಿ ಪ್ರಸ್ತಾಪಿಸಿ, ಉನ್ನತ ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಲೋಕಸಭೆ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ಅಡುಗೆ ಇಂಧನಗಳಿಗೆ ಸಬ್ಸಿಡಿ ನೀಡುವ ಸಾಧ್ಯತೆಯಿದೆ.

Government may widen subsidy net to cover all cooking fuels

ಎಲ್.ಪಿ.ಜಿ. ಸಬ್ಸಿಡಿಗೆ 20,000 ಕೋಟಿ ರೂ., ಸೀಮೆಎಣ್ಣೆಗೆ 4500 ಕೋಟಿ ರೂ. ಸಬ್ಸಿಡಿಯನ್ನು ಪ್ರಸಕ್ತ ವರ್ಷದಲ್ಲಿ ಮೀಸಲಿಡಲಾಗಿದೆ. ಪ್ರಸ್ತುತ ಎಲ್ಲಾ ಎಲ್.ಪಿ.ಜಿ. ಗ್ರಾಹಕರು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿದೆ. ಸರ್ಕಾರ ಪ್ರತಿ ವರ್ಷಕ್ಕೆ ಪ್ರತಿ ಕುಟುಂಬಕ್ಕೆ 12 ಸಿಲಿಂಡರ್ ಗಳನ್ನು ನೀಡುತ್ತಿದ್ದು, ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+